ನವದೆಹಲಿ:ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಮಗಳು ಗೋವಾದಲ್ಲಿ ಅಕ್ರಮವಾಗಿ ಬಾರ್​ ನಡೆಸುತ್ತಿರುವುದಾಗಿ ಆಪಾದಿಸಿ ಕೆಲ ದಿನಗಳಿಂದ ಕಾಂಗ್ರೆಸ್​ನ ಹಲವು ನಾಯಕರು ಭಾರಿ ಗಲಾಟೆ ಎಬ್ಬಿಸುತ್ತಿದ್ದಾರೆ.
ಸ್ಮೃತಿ ಅವರ ಮಗಳು, 18 ವರ್ಷದ ಜೊಯಿಶ್ ಇರಾನಿ ಅವರು ಅಕ್ರಮವಾಗಿ ಬಾರ್​ ನಡೆಸುತ್ತಿದ್ದಾರೆ ಎಂಬ ಆರೋಪ ಇವರದ್ದು, ಇದಾಗಲೇ ಇದಕ್ಕೆ ಸಂಬಂಧಿಸಿದಂತೆ ವಿಡಿಯೋಗಳನ್ನೂ ವೈರಲ್​ ಮಾಡುವ ಮೂಲಕ, ಸ್ಮೃತಿ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ತಮ್ಮ ಮಗಳ ವಿರುದ್ಧ ಅಕ್ರಮ ಆರೋಪ ಕೇಳಿ ಕೆರಳಿದ್ದ ಸಚಿವೆ, ಎಲ್ಲರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದರು. ಅದರಂತೆಯೇ ಅವರು, ದೆಹಲಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಸಂಬಂಧಿಸಿದಂತೆ ಇದೀಗ ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್, ಪವನ್ ಖೇರಾ ಮತ್ತು ನೆಟ್ಟಾ ಡಿಸೋಜಾ ಅವರಿಗೆ ದೆಹಲಿ ಹೈಕೋರ್ಟ್ ಶುಕ್ರವಾರ ಸಮನ್ಸ್ ಜಾರಿ ಮಾಡಿದೆ.
ರೆಸ್ಟೋರೆಂಟ್ ನಡೆಸಲು ಮಾತ್ರ ಪರವಾನಗಿ ಇದೆ. ಆದರೆ ಇರಾನಿ ಅವರ ಮಗಳು ತಮ್ಮ ರಾಜಕೀಯ ಪ್ರಭಾವವನ್ನು ಬಳಸಿದ್ದಾರೆ. ವಿದೇಶಿ, ಭಾರತ ನಿರ್ಮಿತ ವಿದೇಶಿ ಮತ್ತು ದೇಶದ ಮದ್ಯವನ್ನು ಪೂರೈಸಲು ಕಳೆದ ವರ್ಷ ಫೆಬ್ರವರಿಯಲ್ಲಿ ಪರವಾನಗಿಗಳನ್ನು ಸತ್ತ ವ್ಯಕ್ತಿಯ ಹೆಸರಲ್ಲಿ ಪಡೆಯದಿದ್ದಾರೆ. ಕಳೆದ ತಿಂಗಳು ಪರವಾನಗಿಗಳನ್ನು ನವೀಕರಿಸಿದ್ದಾಳೆ ಎನ್ನುವುದು ಕಾಂಗ್ರೆಸ್​ ಆರೋಪ. ಜುಲೈ 29ರಂದು ಅಬಕಾರಿ ಆಯುಕ್ತ ನಾರಾಯಣ್ ಎಂ ಗಡ್ ಅವರು ಬಾರ್​ಗೆ ಶೋಕಾಸ್ ನೋಟಿಸ್ ನೀಡಿದ್ದರು. ಆದರೆ ಸ್ಮೃತಿ ಅವರು ತಮ್ಮ ರಾಜಕೀಯ ಪ್ರಭಾವ ಬಳಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು. ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ್ದ ಸಚಿವೆ ಸ್ಕೃತಿ ಇರಾನಿ, ತಮ್ಮ ಮಗಳು ಯಾವುದೇ ಬಾರ್​ ನಡೆಸುತ್ತಿಲ್ಲ. ಆಕೆ ವಿದ್ಯಾರ್ಥಿಯಷ್ಟೇ ಎಂದು ಸ್ಪಷ್ಟನೆ ನೀಡಿದ್ದರು. ಜತೆಗೆ ಎಲ್ಲರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಹೇಳಿದ್ದರು. ಅದರಂತೆ ಅವರು ದಾವೆ ಹೂಡಿದ್ದಾರೆ. (ಏಜೆನ್ಸೀಸ್​)
ಎಲ್ಲೆಡೆ ಹರಡುತ್ತಿದೆ ಮಂಕಿಪಾಕ್ಸ್​: ಲೈಂಗಿಕ ಕ್ರಿಯೆ ಕುರಿತು ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ ಈ ಎಚ್ಚರಿಕೆ…

VIDEO: ಪಿಸ್ತೂಲ್​ ಹಿಡಿದು ಬಂದ ಕಳ್ಳನನ್ನು ಕ್ಲೀನ್​ ಮಾಡೋ ಬಟ್ಟೆಯಿಂದ್ಲೇ ಓಡಿಸಿದಳು! ಇಲ್ಲಿದೆ ನೋಡಿ ಅಚ್ಚರಿಯ ವಿಡಿಯೋ

ಚಿಕನ್ ಅಂಗಡಿ ತೆರೆದಿದ್ದೇ ಪ್ರಾಣಕ್ಕೆ ಮುಳುವು? ಪ್ರವೀಣ್​ಗೆ ಮೊದಲೇ ಸಿಕ್ಕಿತ್ತಾ ಸಾವಿನ ಸುಳಿವು? ಸಹೋದರ ನೀಡಿದರು ಸ್ಫೋಟಕ ಹೇಳಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − one =
Remember me
