ಹೊಸಿಯಾರ್‌ಪುರ (ಪಂಜಾಬ್​):ಅಕ್ರಮ ಸಂಬಂಧ ಹೊಂದಿದ್ದ ಯುವತಿಯೊಬ್ಬಳು ತನ್ನ ಪ್ರಿಯಕರನ ಜತೆಗೂಡಿ ಅತ್ತೆ-ಮಾವನನ್ನು ಸುಟ್ಟು ಕೊಂದಿರುವ ಭಯಾನಕ ಘಟನೆ ಪಂಜಾಬ್‌ನ ಹೋಷಿಯಾರಪುರದ ಜಾಜಾ ಎಂಬಲ್ಲಿ ನಡೆದಿದೆ.ತಾವು ಅಕ್ರಮ ಸಂಬಂಧ ಹೊಂದಿರುವುದು ಅತ್ತೆ ಮಾವಂದಿರಿಗೆ ತಿಳಿಯುತ್ತಲೇ ಈ ಕೃತ್ಯ ಎಸಗಿದ್ದಾಳೆ ಪಾಪಿ ಸೊಸೆ! ಇಂಥದ್ದೊಂದು ಕೃತ್ಯ ಎಸಗಿದವಳು ಮನದೀಪ್‌ ಕೌರ್‌. ಈಕೆ ಹಾಗೂ ಈಕೆಯ ಪ್ರಿಯಕರ ಜಸ್ಮೀತ್‌ ಸಿಂಗ್‌ರನ್ನು ಪೊಲೀಸರು ಬಂಧಿಸಿದ್ದಾರೆ.
ಇವರಿಂದ ಪ್ರಾಣ ಕಳೆದುಕೊಂಡವರು ಮಾಜಿ ಸೈನಿಕ ಜಸ್ವಂತ್ ಸಿಂಗ್ ಮತ್ತು ಪತ್ನಿ ಗುರ್ಮೀತ್ ಕೌರ್.
ಆಗಿದ್ದೇನು? :ಮನದೀಪ್‌ ಕೌರ್‌ ಪತಿ ರವೀಂದರ್‌ ಸಿಂಗ್‌ ಮನೆಯಲ್ಲಿ ಇರಲಿಲ್ಲ. ಸಂಜೆಯ ವೇಳೆ ಅವರು ಮನೆಗೆ ಬಂದಾಗ ಬಾಗಿಲು ಲಾಕ್‌ ಆಗಿತ್ತು. ಎಷ್ಟು ಕೂಗಿದರೂ ಯಾರೂ ಬಾಗಿಲು ತೆರೆಯಲಿಲ್ಲ. ಇದರಿಂದ ಆತಂಕಗೊಂಡ ಅವರು, ಹಿಂಬಾಲಿಗಿನ ಗೋಡೆಯನ್ನು ಹತ್ತಿ ಅಲ್ಲಿಂದ ಮನೆಯೊಳಕ್ಕೆ ಪ್ರವೇಶ ಮಾಡಿದ್ದಾರೆ.
ಈ ಸಂದರ್ಭದಲ್ಲಿ ರವೀಂದರ್‌ ತಮ್ಮ ಪತ್ನಿ ಮನದೀಪ್‌ಳನ್ನು ಯಾರೋ ಕಟ್ಟಿಹಾಕಿರುವುದು ನೋಡಿದ್ದಾರೆ. ಏಕೆಂದರೆ ಆಕೆಯನ್ನು ಖುರ್ಚಿಗೆ ಕಟ್ಟಿಹಾಕಿದಂತಿತ್ತು. ಜೋರಾಗಿ ಅತ್ತ ಮನದೀಪ್‌ ಯಾರೋ ಮನೆಯೊಳಕ್ಕೆ ಪ್ರವೇಶಿಸಿ ತನ್ನನ್ನು ಕಟ್ಟಿಹಾಕಿ ಅತ್ತೆ- ಮಾವಂದಿರ ಮೇಲೆ ಹಲ್ಲೆ ಮಾಡಿರುವುದಾಗಿ ಹೇಳಿದ್ದಾಳೆ.
ದಿಗಿಲುಗೊಂಡ ರವೀಂದರ್‌ ಮತ್ತೊಂದು ಕೋಣೆಯ ಒಳಗೆ ನೋಡಿದಾಗ ಅವರ ಅಪ್ಪ-ಅಮ್ಮನ ಶವ ಅರೆ ಸುಟ್ಟ ಸ್ಥಿತಿಯಲ್ಲಿ ಕಂಡಿತ್ತು. ಕೋಣೆಯ ತುಂಬ ಹೊಗೆ ಆವರಿಸಿತ್ತು. ಮನದೀಪ್‌ ಜೋರಾಗಿ ಅಳುವಂತೆ ನಾಟಕ ಮಾಡುತ್ತಿದ್ದಳು.ಪತ್ನಿಯ ಮಾತನ್ನು ನಂಬಿದ್ದ ರವೀಂದರ್‌ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದರು. ಯಾರೋ ಮನೆಯೊಳಕ್ಕೆ ನುಗ್ಗಿ ತಮ್ಮ ಪತ್ನಿಯನ್ನು ಕಟ್ಟಿಹಾಕಿ ನಂತರ ಅಪ್ಪ-ಅಮ್ಮನ ಕೊಲೆ ಮಾಡಿದ್ದಾರ ಎಂದು ಅವರು ದೂರಿನಲ್ಲಿ ತಿಳಿಸಿದ್ದರು.
ಪೊಲೀಸರು ತನಿಖೆ ಕೈಗೊಂಡಾಗ ಏನೋ ಎಡವಟ್ಟು ಆದಂತೆ ಕಂಡಿತು. ತಜ್ಞರ ತಂಡ ಹಾಗೂ ಹಿರಿಯ ಪೊಲೀಸ್​ ಅಧಿಕಾರಿಗಳೂ ಕೂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದ ಸಂದರ್ಭದಲ್ಲಿ ಇದು ಹೊರಗಿನವರು ಮಾಡಿದ ಕೃತ್ಯವಲ್ಲ ಎನ್ನುವುದು ಸ್ಪಷ್ಟವಾಯಿತು. ಘಟನೆ ಕುರಿತು ಮನದೀಪ್‌ ಕೌರ್‌ಳನ್ನು ಬೇರೆ ಬೇರೆ ರೀತಿಯಲ್ಲಿ ವಿಚಾರಿಸಿದಾಗ ಆಕೆ ನೀಡುತ್ತಿರುವ ಮಾಹಿತಿ ಒಂದಕ್ಕೊಂದು ತಾಳಮೇಳ ಇಲ್ಲದಂತೆ ತನಿಖಾಧಿಕಾರಿಗಳಿಗೆ ಕಂಡಿತು.
ನಂತರ ಆಕೆಯ ಮೇಲೆ ಸಂದೇಹ ಬಲವಾಗುತ್ತಿದ್ದಂತೆಯೇ ಪೊಲೀಸರು ತಮ್ಮದೇ ಆದ ರೀತಿಯಲ್ಲಿ ವಿಚಾರಣೆ ಮಾಡಿದ್ದಾರೆ. ಆಗ ಹೆದರಿದ ಈಕೆ ಸತ್ಯ ಬಾಯಿ ಬಿಟ್ಟಿದ್ದಾಳೆ. ತಾನು ಪ್ರಿಯಕರನ ಜತೆಗೂಡಿ ಕೊಲೆ ಮಾಡಿರುವುದಾಗಿ ಹೇಳಿದ್ದಾರೆ. ಅತ್ತೆ-ಮಾವನನ್ನು ಕತ್ತು ಹಿಸುಕಿ ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹಕ್ಕೆ ಬೆಂಕಿ ಇಟ್ಟಿರುವುದಾಗಿ ಬಾಯಿ ಬಿಟ್ಟಿದ್ದಾಳೆ. ಕೊಲೆ ಮಾಡಿದ ಬಳಿಕ ಆಕೆಯ ಪ್ರಿಯತಮ ಮನೆಯಲ್ಲಿದ್ದ 19 ತೊಲೆ ಚಿನ್ನ ಮತ್ತು 45 ಸಾವಿರ ರೂ. ದೋಚಿಕೊಂಡು ಹೋಗಿದ್ದ. ನಂತರ ಆತನನ್ನೂ ಬಂಧಿಸಿರುವ ಪೊಲೀಸರು ಕೊಲೆಗೆ ಬಳಸಿದ್ದ ಚಾಕು ಮತ್ತು ಬೈಕ್​ನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಟಿ.ವಿಯಲ್ಲಿ ಕಾಣಿಸೋ ಬಾಯಲ್ಲಿ ನೀರೂರಿಸುವ ಆಹಾರಗಳನ್ನು ಇನ್ಮುಂದೆ ಸ್ಕ್ರೀನ್‌ನಲ್ಲೇ ನೆಕ್ಕಿ ಟೇಸ್ಟ್‌ ಮಾಡ್ಬೋದು!

ಮೊದಲ ರಾತ್ರಿ ಆಸೆಯಿಂದ ಪತ್ನಿಯ ಸಮೀಪ ಬಂದವನಿಗೆ ಕಾದಿತ್ತು ಶಾಕ್‌! ಆಕೆಯ ಹೊಟ್ಟೆಯಲ್ಲಿದ್ವು ಅವಳಿ ಮಕ್ಕಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 4 =
Remember me
