ಅಹಮದಾಬಾದ್:ಅತ್ತೆ- ಸೊಸೆಯಂದಿರ ಜಗಳವೇನೂ ಹೊಸತಲ್ಲ. ಅತ್ತೆ- ಸೊಸೆಯ ಜಗಳ ತಾರಕಕ್ಕೆ ಏರಿದಾಗ ಅದು ಪೊಲೀಸ್‌ ಠಾಣೆ, ನಂತರ ಕೋರ್ಟ್‌ ಮೆಟ್ಟಿಲೇರುವ ಘಟನೆಗಳೂ ನಡೆಯುತ್ತಲೇ ಇರುತ್ತವೆ. ಆದರೆ ಇಲ್ಲೊಂದು ಸ್ವಲ್ಪ ಭಿನ್ನ ಘಟನೆ ನಡೆದಿದೆ.
ಇದು ನಡೆದಿರುವುದು ಅಹಮದಾಬಾದ್‌ನಲ್ಲಿ. ಇಲ್ಲಿ ಅತ್ತೆ- ಸೊಸೆ ಜಗಳ ಪೊಲೀಸ್‌ ಠಾಣೆಯವರೆಗೂ ಹೋಗಿದೆ. ಆದರೆ ವಿಚಿತ್ರ ಎಂದರೆ ಇಲ್ಲಿ ಸೊಸೆ ಸ್ವಲ್ಪ ಡಿಫರೆಂಟ್‌ ರೀತಿಯ ದೂರನ್ನು ಅತ್ತೆಯ ವಿರುದ್ಧ ದಾಖಲು ಮಾಡಿದ್ದಾಳೆ. ಅದೇನೆಂದರೆ ನನ್ನ ಗಂಡ, ನನ್ನ ಅತ್ತೆಯ ಅಕ್ರಮ ಮಗ. ನನ್ನ ಅತ್ತೆಗೆ ಅಕ್ರಮವಾಗಿ ಹುಟ್ಟಿರುವ ಮಗನೀತ ಎಂದು ದೂರು ದಾಖಲಿಸಿರುವ ಸೊಸೆ ಇದೀಗ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೋರಿಕೊಂಡಿದ್ದಾಳೆ.
ಅಷ್ಟಕ್ಕೂ ಆಗಿರುವುದು ಏನೆಂದರೆ ಈ ಮಹಿಳೆಯ ವಿವಾಹ 2018ರಲ್ಲಿ ನಡೆದಿದೆ. ಅಲ್ಲಿಂದಲೂ ಅತ್ತೆ ಮತ್ತು ಗಂಡ ತಮಗೆ ಕಿರುಕುಳ ನೀಡುತ್ತಿದ್ದಾರೆ ಎನ್ನುವುದು ಈ ಮಹಿಳೆಯ ದೂರು. ಆದ್ದರಿಂದ ಸದ್ಯ ತವರಿನಲ್ಲಿ ಇರುವ ಮಹಿಳೆ ಗಂಡನ ಮನೆಯವರ ವಿರುದ್ಧ ಕಂಪ್ಲೇಂಟ್‌ ಕೊಟ್ಟಿದ್ದು, ಅದರಲ್ಲಿ ಅಕ್ರಮ ಸಂಬಂಧದ ಕುರಿತು ವಿವರಣೆ ನೀಡಿದ್ದಾಳೆ.
ಇದನ್ನೂ ಓದಿ:ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರೆ 6 ತಿಂಗಳು ಕಾಯುವಿಕೆ ಅನಿವಾರ್ಯವೆ?
ಅತ್ತೆಗೆ ಓರ್ವ ವ್ಯಕ್ತಿಯೊಡನೆ ಅಕ್ರಮ ಸಂಬಂಧ ಇದೆ. ನಾನು ಮದುವೆಗೆ ಮುಂಚೆಯೇ ಅವರ ಮನೆಗೆ ಆಗಾಗ ಹೋಗುತ್ತಿದ್ದೆ. ಅತ್ತೆ ಮತ್ತು ಅವಳ ಪ್ರೇಮಿ ಮದ್ಯಪಾನ ಮಾಡುತ್ತಿದ್ದರು. ಮನೆಯಲ್ಲಿಯೇ ಪಾರ್ಟಿಗಳನ್ನು ನಡೆಸುತ್ತಿದ್ದರು. ಅವರಿಗೆ ಅಕ್ರಮ ಸಂಬಂಧವಿತ್ತು. ನನ್ನ ಗಂಡ ಆ ಸಂಬಂಧದಿಂದಲೇ ಹುಟ್ಟಿರುವುದು, ಇದನ್ನು ಒಮ್ಮೆ ಬಾಯಿ ತಪ್ಪಿ ಅತ್ತೆ ಕೂಡ ಹೇಳಿದ್ದರು ಎಂದಿದ್ದಾಳೆ ಸೊಸೆ.
’ನಾನು ಮದುವೆಯಾಗಿ ಅವರ ಮನೆಗೆ ಹೋದ ಕೆಲವು ದಿನಗಳ ನಂತರ ಸಮಸ್ಯೆಗಳು ಪ್ರಾರಂಭವಾದವು. ವರದಕ್ಷಿಣೆ ತಂದಿಲ್ಲ ಎಂದು ನನ್ನ ಗಂಡನ ಅಕ್ಕ ಹೀಯಾಳಿಸುತ್ತಿದ್ದಳು. ಅತ್ತೆಯೂ ಇದಕ್ಕೆ ಸಾಥ್‌ ನೀಡುತ್ತಿದ್ದರು. ಮಾತ್ರವಲ್ಲದೇ, ನನ್ನ ಅಮ್ಮನ ಮನೆಯ ಆಸ್ತಿಯನ್ನು ತಮ್ಮ ಹೆಸರಿಗೆ ಮಾಡಿಸುವಂತೆ ಗಂಡ ಕಿರುಕುಳ ನೀಡುತ್ತಿದ್ದರು. ಇದೀಗ ಅನಿವಾರ್ಯವಾಗಿ ಅತ್ತೆಯ ವಾಸ್ತವಾಂಶವನ್ನು ಹೇಳಬೇಕಾಗಿದೆ’ ಎಂದಿದ್ದಾಳೆ ಸೊಸೆ.
ನಾನು ಗರ್ಭಿಣಿಯಾಗಿದ್ದಾಗ ಲಿಂಗ ಪರೀಕ್ಷೆ ಮಾಡಿಸುವಂತೆ ಒತ್ತಾಯಿಸಿದ್ದರು. ಒಪ್ಪದೆ ಇದ್ದಾಗ ಹೊಡೆದು ಕಿರುಕುಳ ಕೊಟ್ಟಿದ್ದರು. ನನಗೆ ಹೆಣ್ಣು ಮಗು ಜನಿಸಿತು. ಈ ಕಾರಣಕ್ಕಾಗಿ ಅತ್ತೆ ಮತ್ತು ಆಕೆಯ ಪ್ರೇಮಿ ಇಬ್ಬರೂ ಸೇರಿ ವರದಕ್ಷಿಣೆ ನೆಪದಲ್ಲಿ ಕಿರುಕುಳ ಕೊಡುತ್ತಿದ್ದಾರೆ. ವರದಕ್ಷಿಣೆ ಕೊಟ್ಟಿಲ್ಲ ಎಂದರೆ ಮನೆಗೆ ಕಾಲಿಡಬೇಡ ಎನ್ನುತ್ತಿದ್ದಾರೆ. ಹೊಡೆದು ಮನೆಯಿಂದ ಹೊರಹಾಕಿದ್ದಾರೆ ಎಂದು ಮಹಿಳೆ ದೂರಿದ್ದಾರೆ.
ತನ್ನ ಮಗಳಿಗೂ ಕೆಟ್ಟ ಚಟ ಕಲಿಸಲಾಗುತ್ತಿದೆ ಎನ್ನುವುದು ಮಹಿಳೆ ದೂರು. ’ಪತಿ ಮತ್ತು ಮಗಳು ಅತ್ತೆ ಏರ್ಪಡಿಸಿದ್ದ ಪಾರ್ಟಿಗೆ ಒಮ್ಮೆ ಹೋಗಿದ್ದರು. ವಾಪಸ್ ಮನೆಗೆ ಬಂದಾಗ ನನ್ನ ಮಗಳು ಸಿಗರೇಟ್ ಮತ್ತು ಮದ್ಯದ ವಾಸನೆ ಬರುತ್ತಿದ್ದಳು. ಈ ಬಗ್ಗೆ ನನ್ನ ಪತಿಯನ್ನು ಪ್ರಶ್ನಿಸಿದರೆ ನನಗೆ ಹೊಡೆದು ಮನೆಯಿಂದ ಹೊರಗೆ ಹಾಕಿದ್ದಾರೆ. ನಾನು ನನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದೇನೆ’ ಎಂದು ಆಕೆ ಹೇಳಿದ್ದಾರೆ.
ಸದ್ಯ ಅತ್ತೆ ಹಾಗೂ ಗಂಡನ ವಿರುದ್ಧ ಐಪಿಸಿ ಸೆಕ್ಷನ್ 498 (ಎ) (ಆಸ್ತಿಗಾಗಿ ಯಾವುದೇ ಕಾನೂನುಬಾಹಿರ ಬೇಡಿಕೆಯನ್ನು ಪೂರೈಸಲು ಯಾವುದೇ ವ್ಯಕ್ತಿಯನ್ನು ಒತ್ತಾಯಿಸುವುದು ಅಥವಾ ಮಹಿಳೆಯ ಕಿರುಕುಳ ನೀಡುವುದು) 294 (ಬಿ) 323, ಮತ್ತು 114ರ ಅಡಿಯಲ್ಲಿ ಮಹಿಳೆ ದೂರು ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
78ರ ವೃದ್ಧನಿಗೆ 17ರ ಬಾಲಕಿ ಜತೆ ಮದುವೆ- 22ನೇ ರಾತ್ರಿ ಅಜ್ಜ ಕೊಟ್ಟ ಡಿವೋರ್ಸ್!

ಜಾಲತಾಣದಲ್ಲಿ ಸದ್ದು ಮಾಡುತ್ತಿದೆ ಕಪ್ಪು ಹುಲಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seven + five =
Remember me
