ನವದೆಹಲಿ:ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಮಗಳು ಗೋವಾದಲ್ಲಿ ಅಕ್ರಮವಾಗಿ ಬಾರ್​ ನಡೆಸುತ್ತಿರುವುದಾಗಿ ಆಪಾದಿಸಿ ಕೆಲ ದಿನಗಳಿಂದ ಕಾಂಗ್ರೆಸ್​ನ ಹಲವು ನಾಯಕರು ಭಾರಿ ಗಲಾಟೆ ಎಬ್ಬಿಸುತ್ತಿದ್ದರು. ಸ್ಮೃತಿ ಅವರ ಮಗಳು, 18 ವರ್ಷದ ಜೊಯಿಶ್ ಇರಾನಿ ಅವರು ಅಕ್ರಮವಾಗಿ ಬಾರ್​ ನಡೆಸುತ್ತಿದ್ದಾರೆ ಎಂಬ ಆರೋಪ ಇವರದ್ದಾಗಿತ್ತು. ಸ್ಮೃತಿ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತಿದ್ದರು. ಇವರ ವಿರುದ್ಧ ಸ್ಮೃತಿ ಇರಾನಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರಿಂದ ಕಾಂಗ್ರೆಸ್​ ನಾಯಕರು ಭಾರಿ ಮುಖಭಂಗ ಅನುಭವಿಸುವಂತಾಗಿದೆ. ಕಾಂಗ್ರೆಸ್​ ನಾಯಕರಿಗೆ ಕೋರ್ಟ್​ ಸಮನ್ಸ್​ ಜಾರಿ ಮಾಡಿದೆ.
ಇದರ ನಡುವೆಯೇ ಕಾಂಗ್ರೆಸ್​ ನಾಯಕರು ಮತ್ತೊಂದು ಗಲಾಟೆ ಶುರು ಮಾಡಿದ್ದಾರೆ. ಅದೇನೆಂದರೆ ಸ್ಮೃತಿ ಇರಾನಿಯವರ ಇದೇ ಪುತ್ರಿ ಜೊಯಿಶ್ ಇರಾನಿ ಅವರ ಮಗಳು ಮದುವೆಯಾಗುತ್ತಿದ್ದು, ಅದರ ನಿಶ್ಚಿತಾರ್ಥ ಫೋಟೋ ಹಂಚಿಕೊಂಡಿದ್ದಾರೆ. ಇನ್ನೂ 18 ತುಂಬದ ಜೊಯಿಶ್ ಇರಾನಿಯದ್ದು ಇದು ಬಾಲ್ಯವಿವಾಹವಾಗಿರುವುದಾಗಿ ಆರೋಪಿಸಿ, ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಿದ್ದಾರೆ. ಇದಕ್ಕೆ ಬಿಜೆಪಿ ವಿರೋಧಿಗಳು ಟೀಕಾ ಪ್ರಹಾರವನ್ನೇ ನಡೆಸಿದ್ದಾರೆ.
ಈ ಫೋಟೋ ಅನ್ನು ಸ್ಮೃತಿ ಇರಾನಿಯವರು 2021ರ ಡಿಸೆಂಬರ್​ ತಿಂಗಳಿನಲ್ಲಿ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ತಮ್ಮ ಮಗಳ ನಿಶ್ಚಿತಾರ್ಥ ನಡೆಯುತ್ತಿರುವುದಾಗಿ ಅವರು ಹೇಳಿದ್ದರು. ಆ ಸಂದರ್ಭದಲ್ಲಿ ಮಗಳು ಜೊಯಿಶ್​ಗೆ ಇನ್ನೂ 18 ತುಂಬಿರಲಿಲ್ಲ. 18 ವರ್ಷ ತುಂಬುವುದರೊಳಗೇ ಮದುವೆಗೆ ಸಿದ್ಧತೆ ನಡೆಸಿದ್ದಾರೆ ಎಂದು ಕಾಂಗ್ರೆಸ್​ ನಾಯಕರು ಆರೋಪಿಸಿದ್ದರು.
ಆದರೆ ಫ್ಯಾಕ್ಟ್​ಚೆಕ್​ನಲ್ಲಿ ಅಸಲಿಯತ್ತು ಹೊರಬಂದಿದೆ. ಅದೇನೆಂದರೆ, ಸ್ಮೃತಿ ಇರಾನಿಯವರು ಶೇರ್ ಮಾಡಿರುವ ಈ ಫೋಟೋ ಅಸಲಿಗೆ ಅವರ ಮಗಳು ಜೊಯಿಶ್ ಇರಾನಿಯದ್ದು ಅಲ್ಲ. ಆದರೆ, ಅದು ಅವರ ಮಲಮಗಳು ಶಾನೆಲ್ಲೆ ಇರಾನಿಯದ್ದು. ಅಂದರೆ ಸ್ಮೃತಿ ಇರಾನಿ ಅವರ ಪತಿ ಜುಬಿನ್ ಇರಾನಿ ಮತ್ತು ಅವರ ಮೊದಲ ಪತ್ನಿ ಮೋನಾ ಇರಾನಿ ಅವರ ಮಗಳು ಈಕೆ.
ಆದ್ದರಿಂದ ಇಲ್ಲಿಯೂ ಕಾಂಗ್ರೆಸ್​ ನಾಯಕರು ಪುನಃ ಮುಖಭಂಗ ಅನುಭವಿಸುವಂತಾಗಿದೆ(ಏಜೆನ್ಸೀಸ್​)
ಸಚಿವೆ ಸ್ಮೃತಿ ಇರಾನಿ ಮಗಳ ಸುದ್ದಿಗೆ ಹೋಗಿ ಪೇಚಿಗೆ ಸಿಲುಕಿದ ‘ಕೈ’ ನಾಯಕರು: ಹೈಕೋರ್ಟ್​​ನಿಂದ ಸಮನ್ಸ್​​

ಸಚಿವರ ಆಪ್ತೆಯ ಮನೆಯಲ್ಲಿ ರಾಶಿ ರಾಶಿ ಲೈಂಗಿಕ ಆಟಿಕೆಗಳು! ಇ.ಡಿಗೆ ಸಿಕ್ಕ ಬೆಳ್ಳಿಯ ಬಟ್ಟಲು ಹೇಳುತಿದೆ ಬೇರೊಂದು ಕಥೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + fifteen =
Remember me
