ಭೋಪಾಲ್​:ಬಿಜೆಪಿಗೆ ಸೇರ್ಪಡೆಯಾಗಿರುವ ಮಧ್ಯಪ್ರದೇಶ ಸಚಿವೆ ಇಮರ್ತಿ ದೇವಿ ಅವರನ್ನು ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್ ʼಐಟಂʼ ಎಂದು ಕರೆದಿರುವುದಕ್ಕೆ ಇಮರ್ತಿ ದೇವಿ ತೀವ್ರ ಅಸಮಾಧಾನ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೀವು ಒಬ್ಬ ತಾಯಿ, ನಿಮಗೂ ಒಬ್ಬಳು ಮಗಳಿದ್ದಾಳೆ. ನಿಮ್ಮ ಮಗಳಿಗೆ ಯಾರಾದರೂ “ಐಟಂ” ಎಂದು ಹೇಳಿದ್ದರೆ ನೀವು ಸುಮ್ಮನಿರುತ್ತಿದ್ರಾ ಎಂದು ಇಮರ್ತಿದೇವಿಯವರು ಸೋನಿಯಾಗಾಂಧಿಯವರನ್ನು ಪ್ರಶ್ನಿಸಿದ್ದಾರೆ.
ನಾನು ಒಬ್ಬಳು ಬಡ ಕುಟುಂಬದಿಂದ ಬಂದ ಹೆಣ್ಣುಮಗಳು. ನನ್ನ ಮೇಲೆ ಈ ರೀತಿ ಕೆಟ್ಟ ಶಬ್ದಗಳಿಂದ ಟೀಕೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿರುವ ಇಮರ್ತಿದೇವಿ, ಇಂಥವರನ್ನು ನಿಮ್ಮ ಪಕ್ಷದಿಂದ ಕೂಡಲೇ ತೆಗೆದುಹಾಕಬೇಕು ಎಂದು ಸೋನಿಯಾಗಾಂಧಿಯವರನ್ನು ಆಗ್ರಹಿಸಿದ್ದಾರೆ.
ಏನಿದು ವಿವಾದ:ಸಚಿವೆಯನ್ನು ‘ಐಟಂ’ ಎಂದು ಕರೆದು ವಿವಾದ ಎಳೆದುಕೊಂಡ ಮಾಜಿ ಸಿಎಂ
ಮಧ್ಯಪ್ರದೇಶದ ಡಾಬ್ರಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯ ಅಂಗವಾಗಿ ಇಂದು ಪ್ರಚಾರ ನಡೆಸಿದ ಕಮಲ್​ನಾಥ್​ ಇಮರ್ತಿ ದೇವಿಯವರನ್ನು ಲೇವಡಿ ಮಾಡಿದ್ದರು. ಉಪಚುನಾವಣಾ ಪ್ರಚಾರದಲ್ಲಿ ತಮ್ಮ ಅಭ್ಯರ್ಥಿಯ ಪರ ಮತಯಾಚಿಸುತ್ತಿದ್ದ ಕಮಲ್​ನಾಥ್​ ಇಮರ್ತಿದೇವಿಯವರ ಕುರಿತು ಮಾತನಾಡುವಾಗ “ಏನ್​ ಐಟಂ ಇವಳು’ ಎಂದಿದ್ದರು.
ಕ್ಷಮೆ ಕೋರುವ ಪ್ರಶ್ನೆಯೇ ಇಲ್ಲ ಎಂದಿರುವ ಕಾಂಗ್ರೆಸ್​ ಮುಖಂಡರು, ನಾವೆಲ್ಲರೂ ಒಂದು ರೀತಿಯ ಐಟಂಗಳೇ ಎಂದು ಸಮರ್ಥನೆ ಮಾಡಿಕೊಂಡಿದೆ. ಈ ಕುರಿತು ಹೇಳಿಕೆ ನೀಡಿರುವ ಕಮಲ್​ನಾಥ್​, ಹೌದು, ನಾನು ಇಮರ್ತಿಯವರನ್ನು ಐಟಂ ಎಂದು ಹೇಳಿರುವುದು ನಿಜ. ಅದರಲ್ಲಿ ಏನಿದೆ? ಅದೇನು ಕೆಟ್ಟ ಶಬ್ದವಲ್ಲ, ನಾವೆಲ್ಲರೂ ಐಟಂಗಳೇ ಎಂದಿದ್ದಾರೆ.
ಅದೇ ಇನ್ನೊಂದೆಡೆ, ಈ ಹೇಳಿಕೆ ವಿರುದ್ಧ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಸಂಸದ ಜ್ಯೋತಿರಾಧಿತ್ಯ ಸೇರಿದಂತೆ ಹಲವು ಮುಖಂಡರು ಉಪವಾಸ ಧರಣಿ ಕೈಗೊಂಡರು. ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮಾರ್ ಮತ್ತು ಬಿಜೆಪಿ ಇತರೆ ಮುಖಂಡರು ಇಂದು ಸುಮಾರು 2 ತಾಸು ಮೌನ ಉಪವಾಸ ಧರಣಿ ನಡೆಸಿದರು. ಜ್ಯೋತಿರಾಧಿತ್ಯ ಸಿಂಧಿಯಾ ಅವರ ನಿಷ್ಠಾವಂತೆ ಹಾಗೂ ಮಧ್ಯ ಪ್ರದೇಶ ಸರ್ಕಾರದ ಸಚಿವೆ ಇಮರ್ತಿ ದೇವಿ ಅವರನ್ನು ಐಟಮ್ ಎಂದು ಕರೆದು ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯದ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಇಂಥ ಹೇಳಿಕೆ ಕಾಂಗ್ರೆಸ್ ನಾಯಕರ ಮನಸ್ಥಿತಿಯನ್ನು ತಿಳಿಸುತ್ತದೆ ಎಂದು ಶಿವರಾಜ್ ಸಿಂಗ್ ಚೌಹಾಣ್ ಆರೋಪಿಸಿದರು.
ನನ್ನಮ್ಮನ ಜತೆ 3 ಬಾರಿ ಮದುವೆಯಾಗಿ ಸೆಕ್ಸ್​ ಮಾಡುವಾಗ ಅಪ್ಪ ತೀರಿಕೊಂಡರು – ಆತ್ಮಚರಿತ್ರೆಯಲ್ಲಿ ಆಸ್ಕರ್​ ವಿಜೇತ

ಶಾಸಕನ ಮೇಲೆ ಗ್ಯಾಂಗ್​ರೇಪ್​ ಆರೋಪ: ಗಾಯಕಿಯಿಂದ ದಾಖಲಾಯ್ತು ದೂರು

ಇವಳು ನನ್ನ ಮುದ್ದು ಮಗಳೇ… ಆದರೆ ಸತ್ತಿದ್ದಾಳೆ… ನನಗೆ ಬೇಡ… ಭಯಾನಕ ಕೊಲೆಯ​ ಸುತ್ತ…

ಈ ದೀಪಾವಳಿ ಚೀನಾದಲ್ಲಿ ಕತ್ತಲೋ ಕತ್ತಲು… ₹40 ಸಾವಿರ ಕೋಟಿ ಕಾಣದೇ ಕಂಗಾಲು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 + nine =
Remember me
