ಭೋಪಾಲ್:ಬಿಜೆಪಿಗೆ ಸೇರ್ಪಡೆಯಾಗಿರುವ ಮಧ್ಯಪ್ರದೇಶ ಸರ್ಕಾರದ ಸಚಿವೆ ಇಮರ್ತಿ ದೇವಿ ಅವರನ್ನು ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್ ʼಐಟಂʼ ಎಂದು ಕರೆದಿದ್ದು, ಈಗ ಎಲ್ಲೆಡೆ ಆಕ್ರೋಶ ಭುಗಿಲೆದ್ದಿದೆ.
ಕಾಂಗ್ರೆಸ್​ನಿಂದ ಗ್ವಾಲಿಯರ್​ನ ಡಾಬ್ರಾ ಕ್ಷೇತ್ರದಿಂದ ಮೂರು ಬಾರಿ ಶಾಸಕಿಯಾಗಿ ಆಯ್ಕೆಯಾಗಿರುವ ಇಮರ್ತಿ ದೇವಿ ಸದ್ಯ ಶಿವರಾಜ್‌ ಸಿಂಗ್‌ ಚೌಹಾಣ್‌ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆಯಾಗಿದ್ದಾರೆ. ಈಗ ಹಾಲಿ ಕ್ಷೇತ್ರದಿಂದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಈ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿ ಪರವಾಗಿ ಇಂದು ಪ್ರಚಾರ ನಡೆಸಿದ ಕಮಲ್​ನಾಥ್​ ಇಮರ್ತಿ ದೇವಿಯವರನ್ನು ಲೇವಡಿ ಮಾಡುವ ಮೂಲಕ ಇದೀಗ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಉಪಚುನಾವಣಾ ಪ್ರಚಾರದಲ್ಲಿ ತಮ್ಮ ಅಭ್ಯರ್ಥಿಯ ಪರ ಮತಯಾಚಿಸುತ್ತಿದ್ದ ಕಮಲ್​ನಾಥ್​ ಸುರೇಶ್​ ನಮ್ಮ ಅಭ್ಯರ್ಥಿ. ಅತ್ಯಂತ ಸರಳ ವ್ಯಕ್ತಿತ್ವ ಹೊಂದಿರುವವರು. ಆಕೆಯ ಹಾಗೆ ಅಲ್ಲ. ಏನು ಆಕೆಯ ಹೆಸರು? ಎಂದು ಪ್ರಶ್ನಿಸಿದರು. ಅಲ್ಲಿ ನೆರೆದಿದ್ದ ಜನರು ಇಮರ್ತಿದೇವಿ ಎಂದರು.
ಆಗ ಕಮಲ್​ನಾಥ್​, ನನಗಿಂತ ನಿಮಗೇ ಆಕೆಯ ಹೆಸರು ಚಿರಪರಿಚಿತ. ನೀವು ನನಗೆ ಮೊದಲೇ ಎಚ್ಚರಿಸಬೇಕಿತ್ತು. ಏನ್​ ಐಟಂ ಇವಳು ಎಂದಿದ್ದಾರೆ. ಇದೀಗ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಕಮಲ್​ನಾಥ್​ ವಿರುದ್ಧ ಭಾರಿ ಆಂದೋಲನವೇ ಶುರುವಾಗಿದೆ.
ಇದನ್ನೂ ಓದಿ:ಕೆಜಿಎಫ್ ಶಾಸಕಿ ಕಾಲ್ ಸೆಂಟರ್ ಕೋಲಾರದಲ್ಲಿದೆ : ಮಾಜಿ ಶಾಸಕ ವೈ.ಸಂಪಂಗಿ
ಇಮರ್ತಿ ದೇವಿ ಹಾಗೂ ಕಮಲ್​ ನಾಥ್​ ನಡುವೆ ಹಳೇ ರಾಜಕೀಯ ದ್ವೇಷವಿದೆಯೆಂದೇ ಹೇಳಲಾಗುತ್ತಿದೆ. ಇಮರ್ತಿದೇವಿ ಈ ಹಿಂದೆ ಕಾಂಗ್ರೆಸ್​ನಲ್ಲಿದ್ದಾಗ ಕಮಲ್​​ನಾಥ್​ ವಿರುದ್ಧ ಲಂಚದ ಆರೋಪ ಮಾಡಿದ್ದರು. ಕಮಲ್​ ನಾಥ್​ ಮುಖ್ಯಮಂತ್ರಿಯಾಗಿದ್ದಾಗ ಅವರ ಮಂತ್ರಿಮಂಡಲದಲ್ಲಿ ಸೇರ್ಪಡೆಯಾಗದ ಶಾಸಕರಿಗೆ ಪ್ರತಿ ತಿಂಗಳು ಐದು ಲಕ್ಷ ರೂಪಾಯಿ ಹಣ ಕೊಡುತ್ತಾರೆ ಎಂದು ಆರೋಪಿಸಿದ್ದರು.
ಇದಕ್ಕೆ ತಿರುಗೇಟು ನೀಡಿದ್ದ ಕಮಲ್​ನಾಥ್​ ಆಕೆ ತನ್ನ ತಪ್ಪುಗಳನ್ನು ಮುಚ್ಚಿಡಲು ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಇಮರ್ತಿ ದೇವಿಯೇ ಈ ಹಿಂದೆ ಕೋಟ್ಯಂತರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಇದೀಗ, ನನ್ನ ಮೇಲೆ ಆರೋಪ ಮಾಡಲು ಮುಂದಾಗಿದ್ದಾರೆ ಎಂದು ಹೇಳಿದ್ದರು. ಇದೀಗ ಐಟಂ ಎನ್ನುವ ಮೂಲಕ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ವಿಶೇಷವೆಂದರೆ ಕಮಲ್​ನಾಥ್ ಸರ್ಕಾರದಲ್ಲಿ ಕೂಡ ಇಮರ್ತಿ ದೇವಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯನ್ನು ನಿರ್ವಹಿಸುತ್ತಿದ್ದರು. ಏಳು ತಿಂಗಳ ಹಿಂದೆ ಜ್ಯೋತಿರಾಧಿತ್ಯ ಸಿಂಧಿಯಾ ಅವರ ಜತೆ ಕಾಂಗ್ರೆಸ್‌ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಿದ್ದರಿಂದ ಕಮಲ್ ನಾಥ್ ಸರ್ಕಾರ ಪತನಗೊಂಡಿತ್ತು.
ಎಲ್ಲರೂ ‘ಐಟಂ’ಗಳೇ ಎಂದ ಕಾಂಗ್ರೆಸ್​- ಮಗಳನ್ನು ಹೀಗೆ ಕರೆದ್ರೆ ಸೋನಿಯಾ ಸುಮ್ಮನಿರ್ತಿದ್ರಾ ಎಂದ ಸಚಿವೆ!

ಇವಳು ನನ್ನ ಮುದ್ದು ಮಗಳೇ… ಆದರೆ ಸತ್ತಿದ್ದಾಳೆ… ನನಗೆ ಬೇಡ… ಭಯಾನಕ ಕೊಲೆಯ​ ಸುತ್ತ…

ಈ ದೀಪಾವಳಿ ಚೀನಾದಲ್ಲಿ ಕತ್ತಲೋ ಕತ್ತಲು… ₹40 ಸಾವಿರ ಕೋಟಿ ಕಾಣದೇ ಕಂಗಾಲು!

ಆರ್​ಆರ್​ನಗರ: ಮತ್ತೆ ಶುರುವಾಯ್ತಾ ಅಕ್ರಮ? ಮತದಾರರಿಗೆ ಫೋನ್​ಕಾಲ್​!

ನಾನು ಚುನಾವಣೆಯಲ್ಲಿ ಸೋತರೆ ದೇಶಬಿಟ್ಟು ಹೋಗಬೇಕಾಗತ್ತೆ- ಟ್ರಂಪ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
