ವಾಷಿಂಗ್ಟನ್‌:ಅಮೆರಿಕದ ನೂತನ ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ ಬೈಡನ್‌ ಅವರಿಗೆ ಜಗತ್ತಿನಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ವಿವಿಧ ದೇಶಗಳ ಪ್ರಧಾನಿಗಳು, ಅಧ್ಯಕ್ಷರು ಸೇರಿದಂತೆ ಗಣ್ಯಾತಿಗಣ್ಯರು ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಅದೇ ರೀತಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್ ಕೂಡ ಜೋ ಬೈಡನ್‌ ಅವರ ಗೆಲುವಿಗೆ ಅತೀವ ಹರ್ಷ ವ್ಯಕ್ತಪಡಿಸಿ ಅಭಿನಂದನಾ ಸಂದೇಶವನ್ನು ಕಳುಹಿಸಿದ್ದಾರೆ.
ಆದರೆ ಅದು ಉರ್ದುವಿನಲ್ಲಿ ಇದೆ. ಆದ್ದರಿಂದಲೇ ಇದನ್ನು ಗೂಗಲ್‌ ಟ್ರಾನ್ಸ್‌ಲೇಷನ್‌ ಸಹಾಯ ಪಡೆದು ಇಂಗ್ಲಿಷ್‌ನಲ್ಲಿ ತರ್ಜುಮೆ ಮಾಡಿ ಅದನ್ನು ಓದಲಾಗಿದೆ.ಸಾಮಾನ್ಯವಾಗಿ ಗೂಗಲ್‌ ಟ್ರಾನ್ಸ್‌ಲೇಷನ್‌ ಎಡವಟ್ಟು ಎಲ್ಲರಿಗೂ ತಿಳಿದದ್ದೇ. ಯಾವುದಾದರೂ ಭಾಷೆಯನ್ನು ಗೂಗಲ್‌ ಟ್ರಾನ್ಸ್‌ಲೇಷನ್‌ ಮಾಡಿದರೆ ಅದನ್ನು ಓದಲು ಹಾಸ್ಯಾಸ್ಪದವಾಗಿರುತ್ತದೆ. ಹಾಗೆ ಆಗಿದ್ದರೆ ಪರವಾಗಿರಲಿಲ್ಲ. ಇಮ್ರಾನ್‌ ಖಾನ್‌ ಅವರು ಉರ್ದು ಭಾಷೆಯಲ್ಲಿ ಬರೆದಿರುವ ಅಭಿನಂದನೆಯನ್ನು ಗೂಗಲ್‌ ಟ್ರಾನ್ಸ್‌ಲೇಟ್‌ ಮಾಡಿದಾಗ ಮಹಾ ಎಡವಟ್ಟಾಗಿ ಹೋಗಿದೆ. ಅದನ್ನೇನಾದರೂ ಜೋ ಬೈಡನ್‌ ಅವರು ನೋಡಿದ್ದರೆ ಖಂಡಿತವಾಗಿಯೂ ಅವರ ತಲೆ ತಿರುಗಿ ಹೋಗುತ್ತದೆ ಎಂದು ತಮಾಷೆಯನ್ನೂ ಮಾಡಲಾಗುತ್ತಿದೆ. ಮಾತ್ರವಲ್ಲದೇ ಈಗಾಗಲೇ ಹಾಗೆ ಆಗಿರಲೂ ಸಾಕು ಎನ್ನಲಾಗುತ್ತಿದೆ.
ಅಷ್ಟಕ್ಕೂ ಇಮ್ರಾನ್‌ ಖಾನ್‌ ಹಾಕಿದ್ದೇನು? ಗೂಗಲ್‌ ಟ್ರಾನ್ಸ್‌ಲೇಟ್‌ನಲ್ಲಿ ಅದು ಏನಾಗಿದೆ ಎನ್ನುವುದು ಇಲ್ಲಿದೆ ನೋಡಿ.ನಿಜವಾಗಿಯೂ ಇಮ್ರಾನ್‌ ಖಾನ್‌ ಹೇಳಿದ್ದೇನೆಂದರೆ: ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷರಿಗೆ ಅಭಿನಂದನೆಗಳು. ರಾಷ್ಟ್ರೀಯ ಸಂಪತ್ತನ್ನು ಲೂಟಿ ಮಾಡುವವರ ಹಾಗೂ ತೆರಿಗೆ ವಂಚನೆ ಮಾಡುವವರ ವಿರುದ್ಧ ಸಮರ ಸಾರಲು ನಾವು ನಿಮ್ಮ ಜತೆ ಕೈಜೋಡಿಸುತ್ತೇವೆ. ಈ ಸೇವೆಗಾಗಿ ನಾವು ಎದುರುನೋಡುತ್ತಿದ್ದೇವೆ ಎಂದು ಬರೆದಿದ್ದಾರೆ.
ಇದು ಉರ್ದುವಿನಲ್ಲಿ ಇದ್ದು, ಇದನ್ನು ಗೂಗಲ್‌ ಟ್ರಾನ್ಸ್‌ಲೇಟಷನ್‌ ಮೂಲಕ ತುರ್ಜುಮೆ ಮಾಡಿದಾಗ, ಹೊಸ ನಾಯಕರಿಗೆ ಅಭಿನಂದನೆಗಳು, “ಕದ್ದ ರಾಷ್ಟ್ರೀಯ ಸಂಪತ್ತನ್ನು ಮುಚ್ಚಿಹಾಕುವ ಮತ್ತು ಅಕ್ರಮ ತೆರಿಗೆ ಧಾಮಗಳ ಭ್ರಷ್ಟ ನಾಯಕರು” ಇವರಿಗೆ ಅಭಿನಂದನೆ. ಇವರ ಜತೆ ಕೆಲಸ ಮಾಡಲು ನಾನು ಎದುರು ನೋಡುತ್ತೇನೆ’ ಎಂದು ಅನುವಾದಗೊಂಡಿದೆ!
ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಇಮ್ರಾನ್‌ ಖಾನ್ ಅವರನ್ನು ಟ್ರೋಲ್‌ ಮಾಡುತ್ತಿದ್ದಾರೆ.
ಪೊಲೀಸ್‌ಗೆ ‘ಪುಲಿಷ್’ ಎಂದು ಬರೆದು ಸಿಕ್ಕಿಬಿದ್ದ ಕೊಲೆಗಾರ!
ಅರ್ನಬ್‌ ಗೋಸ್ವಾಮಿ ಬಂಧನದ ವಿರುದ್ಧ ಪ್ರತಿಭಟನೆ: ಬಿಜೆಪಿ ಮುಖಂಡರ ಬಂಧನ
ದ್ವಿತೀಯ ಪತ್ನಿಯೀಗ ಅಮೆರಿಕದ ಪ್ರಥಮ ಮಹಿಳೆ- ಇವರ ಇಂಟರೆಸ್ಟಿಂಗ್‌ ಸ್ಟೋರಿ ಇಲ್ಲಿದೆ…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one + twenty =
Remember me
