ಇಸ್ಲಾಮಾಬಾದ್:ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ, ಅವರು ಇದೀಗ ತಮ್ಮ ಮೊದಲ ಪತ್ನಿ ಸೇರಿದಂತೆ ಎಲ್ಲರ ಮೇಲೂ ಮುನಿಸಿಕೊಂಡ ಹಾಗಿದೆ. ಇದೇ ಕಾರಣಕ್ಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ ಕೂಡ ಆಗುತ್ತಿದ್ದಾರೆ.
ಅಷ್ಟಕ್ಕೂ ಆಗಿದ್ದೇನೆಂದರೆ, ಇಮ್ರಾನ್​ ಖಾನ್​ ಅವರ ಮೊದಲ ಪತ್ನಿಯ ಹೆಸರು ಜೆಮಿಮಾ ಗೋಲ್ಡ್‌ಸ್ಮಿತ್. ಇವರು ಚಲನಚಿತ್ರ ನಿರ್ಮಾಪಕಿ ಕೂಡ ಹೌದು. ಇವರನ್ನು ಬಿಟ್ಟ ನಂತರ ಇಮ್ರಾನ್​ ಖಾನ್​ ಇನ್ನೂ ಎರಡು ಮದುವೆಯಾಗಿದ್ದಾರೆ. ಹೀಗಿದ್ದರೂ ಅವರು ಟ್ವಿಟರ್​ನಲ್ಲಿ ತಮ್ಮ ಮೊದಲ ಪತ್ನಿಯನ್ನು ಫಾಲೋ ಮಾಡುತ್ತಿದ್ದರು.
ಆದರೆ ಈಗ ಏಕಾಏಕಿಯಾಗಿ ಅವರನ್ನು ಅನ್​ಫಾಲೋ ಮಾಡಿಬಿಟ್ಟಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಅಧಿಕೃತ ಟ್ವಿಟರ್​ನಲ್ಲಿ ತಾವು ಯಾರನ್ನೆಲ್ಲಾ ಫಾಲೋ ಮಾಡುತ್ತಿದ್ದರೋ ಅವರನ್ನೆಲ್ಲರನ್ನೂ ಅನ್​ಫಾಲೋ ಮಾಡಿದ್ದು, ಟ್ರೋಲಿಗರಿಗೆ ಆಹಾರವಾಗಿದ್ದಾರೆ.
ಸೋಮವಾರ ಸಂಜೆಯಿಂದ ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್ ತಮ್ಮ ಅಧಿಕೃತ ಟ್ವಿಟರ್​ ಖಾತೆ @ImranKhanPTI ಯಿಂದ ಯಾರನ್ನೂ ಹಿಂಬಾಲಿಸುತ್ತಿಲ್ಲ ಎಂದು ದಿ ನ್ಯೂಸ್ ಇಂಟರ್‌ನ್ಯಾಷನಲ್‌ ಸ್ಪಷ್ಟಪಡಿಸಿದೆ. ಇದಕ್ಕೆ ಕಾರಣ ಮಾತ್ರ ನಿಗೂಢವಾಗಿದೆ.
ಹಿಂದಿನ ಪ್ರಧಾನಿ ನವಾಜ್ ಷರೀಫ್ ಕೂಡ ಇದೇ ರೀತಿ ಎಲ್ಲರನ್ನೂ ಅನ್​ಫಾಲೋ ಮಾಡಿದ್ದರು. ಇಮ್ರಾನ್​ ಈಗ ಅವರ ಹಾದಿ ತುಳಿದಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಲವು ದಿನಗಳ ಹಿಂದೆ ಪತ್ರಕರ್ತ ಹಮೀದ್ ಮಿರ್ ಅವರು ಇಮ್ರಾನ್​ ಖಾನ್​ ಅವರನ್ನು ಟೀಕಿಸಿದ್ದರು. ಆ ಕೂಡಲೇ ಅವರನ್ನು ಇಮ್ರಾನ್​ ಅನ್​ಫಾಲೋ ಮಾಡಿದ್ದರು. ಆದರೆ ಏಕಾಏಕಿ ಅದರ ಹಿಂದೆಯೇ ತಮ್ಮ ಮೊದಲ ಪತ್ನಿ ಗೋಲ್ಡ್‌ಸ್ಮಿತ್ ಸೇರಿದಂತೆ ಎಲ್ಲರನ್ನೂ ಅನ್​ಫಾಲೋ ಮಾಡಿಬಿಟ್ಟಿದ್ದಾರೆ.
2010ರಲ್ಲಿ ಟ್ವಿಟ್ಟರ್ ಖಾತೆ ಸೃಷ್ಟಿಸಿದ್ದಾರೆ ಇಮ್ರಾನ್ ಖಾನ್. ಅನ್​ಫಾಲೋದ ಕಾರಣ ಮಾತ್ರ ಇದುವರೆಗೆ ಅವರು ಬಾಯಿಬಿಟ್ಟಿಲ್ಲವಂತೆ.
ಏಲಿಯನ್ ಜತೆ ಅಮೆರಿಕ ಒಪ್ಪಂದ​: ವಿಶ್ವಖ್ಯಾತಿ ಇಸ್ರೇಲ್​ ವಿಜ್ಞಾನಿಯಿಂದ ಅಚ್ಚರಿಯ ಮಾಹಿತಿ

ಅತ್ಯಾಚಾರಿಗಳಿಗಾಗಿಯೇ ಬರಲಿದೆ ‘ಶಕ್ತಿ ಆ್ಯಕ್ಟ್​, ‘ಮಹಾ’ ಸಚಿವ ಸಂಪುಟದಲ್ಲಿ ಸಿಕ್ತು ಗ್ರೀನ್​ ಸಿಗ್ನಲ್​

ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದಲ್ಲಿವೆ ಗ್ರೂಪ್​ ಎ ಹುದ್ದೆಗಳು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:19 − 9 =
Remember me
