ಇಸ್ಲಾಮಾಬಾದ್‌:ಕದನ ವಿರಾಮ ಉಲ್ಲಂಘನೆ ಮಾಡಿ ಭಾರತದ ಗಡಿ ಪ್ರದೇಶದಲ್ಲಿ ಗುಂಡಿನ ದಾಳಿ ಮಾಡುತ್ತ ಒಂದೆಡೆ ಪಾಕಿಸ್ತಾನದ ಸೈನಿಕರು ಭಾರತದ ಮೇಲೆ ದಾಳಿ ನಡೆಸುತ್ತಿದ್ದರೆ, ಇನ್ನೊಂದೆಡೆ, ಪಾಕಿಸ್ತಾನದ ಅಲ್ಪಸಂಖ್ಯಾತ ಹಿಂದೂ ಸಮುದಾಯಕ್ಕೆ ಪ್ರಧಾನಿ ಇಮ್ರಾನ್ ಖಾನ್ ಅವರು ಶನಿವಾರ ದೀಪಾವಳಿಯ ಶುಭಾಶಯ ಕೋರಿದ್ದಾರೆ!
ಟ್ವಿಟರ್‌ ಮೂಲಕ ಇಮ್ರಾನ್‌ ಖಾನ್‌ ಶುಭ ಕೋರಿದ್ದಾರೆ. ‘ದೇಶದ ಹಿಂದೂಗಳಿಗೆಲ್ಲ ದೀಪಾವಳಿಯ ಶುಭಾಶಯಗಳು’ ಎಂದು ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
Wishing all our Hindu citizens a happy Diwali.— Imran Khan (@ImranKhanPTI)November 14, 2020
Wishing all our Hindu citizens a happy Diwali.
ಪಾಕಿಸ್ತಾನದಲ್ಲಿ ಹಿಂದೂ ಹೆಣ್ಣು ಮಕ್ಕಳನ್ನು ಬಲವಂತವಾಗಿ ಮತಾಂತರಿಸುವ, ವಿವಾಹವಾಗುವ, ಒಪ್ಪದವರವನ್ನು ಹತ್ಯೆ ಮಾಡುವ ಕೆಲಸ ಅವ್ಯಾಹತವಾಗಿ ನಡೆಯುತ್ತಿದೆ. ಇತ್ತೀಚೆಗೆ ಅಲ್ಲಿನ ಸಂಸತ್ತಿನಲ್ಲೂ ಈ ಬಗ್ಗೆ ಸಂಸದರೊಬ್ಬರು ಧ್ವನಿ ಎತ್ತಿದ್ದಾರೆ. ಸಂಸದೀಯ ಸಮಿತಿಯೊಂದು ವರದಿಯನ್ನೂ ಸಲ್ಲಿಸಿದೆ. ಪರಿಸ್ಥಿತಿ ಹೀಗಿರುವಾಗಹಿಂದೂಗಳಿಗೆ ದೀಪಾವಳಿ ಶುಭಾಶಯ ಕೋರಿರುವ ಇಮ್ರಾನ್‌ ಖಾನ್‌ ವಿರುದ್ಧ ಭಾರಿ ಆಕ್ರೋಶವೂ ವ್ಯಕ್ತವಾಗಿದೆ.
ಇದನ್ನೂ ಓದಿ:ಬಲವಂತದ ಮತಾಂತರದಿಂದ ಹಿಂದುಗಳನ್ನು ರಕ್ಷಿಸುವಲ್ಲಿ ಪಾಕ್​ ವಿಫಲ: ಅಲ್ಲಿಯದ್ದೇ ಸಂಸದೀಯ ಸಮಿತಿಯ ವರದಿ!
ಪಾಕಿಸ್ತಾನದ ಹಿಂದೂಗಳು ಕೂಡ ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದಾರೆ. ಪಾಕಿಸ್ತಾನದ ಬಹುಪಾಲು ಹಿಂದೂಗಳು ಸಿಂಧ್ ಪ್ರಾಂತ್ಯದಲ್ಲಿ ನೆಲೆಸಿದ್ದಾರೆ. ಅಲ್ಲಿಯ ಹಿಂದೂಗಳು ದೀಪಾವಳಿ ಹಬ್ಬ ಅಚರಿಸುತ್ತಿರುವ ಬಗ್ಗೆ ಪಾಕಿಸ್ತಾನದ ಮಾಧ್ಯಮಗಳಲ್ಲಿ ಸುದ್ದಿಗಳು ಪ್ರಸಾರ ಆಗುತ್ತಿವೆ.
ಇದನ್ನೂ ಓದಿ:ತಾಳ್ಮೆ ಪರೀಕ್ಷಿಸಿದರೆ ಸುಮ್ಮನಿರಲ್ಲ: ಪಾಕಿಗಳ ಎದೆ ನಡುಗಿಸುವ ತಿರುಗೇಟು ಹೇಗಿದೆ ನೋಡಿ…
ಕರಾಚಿ, ಲಾಹೋರ್ ಮಾತ್ರವಲ್ಲದೇ, ಮಾಟಿಯಾರಿ, ಟ್ಯಾಂಡೋ ಅಲ್ಲಾಹಾರ್, ತಾಂಡೋ ಮುಹಮ್ಮದ್ ಖಾನ್, ಜಮ್‌ಶೊರೊ, ಬಾದಿನ್, ಸಂಘರ್, ಹಾಲಾ, ತಾಂಡೋ ಆಡಮ್ ಮತ್ತು ಶಹಾದ್‌ಪುರಗಳಲ್ಲಿ ದೀಪಾವಳಿ ಉತ್ಸವಗಳು ವಿಜೃಂಭಣೆಯಿಂದ ನಡೆಯುತ್ತಿವೆ.
ಅಧಿಕೃತ ಅಂದಾಜಿನ ಪ್ರಕಾರ, 75 ಲಕ್ಷ ಹಿಂದೂಗಳು ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾರೆ. ಆದರೆ, 90 ಲಕ್ಷಕ್ಕೂ ಹೆಚ್ಚು ಹಿಂದೂಗಳು ಪಾಕಿಸ್ತಾನದಲ್ಲಿ ಇದ್ದಾರೆ.
ತಪ್ಪೇ ಮಾಡದೆ 20 ವರ್ಷ ಪಾಕ್‌ ಜೈಲಿನಲ್ಲಿದ್ದ ಮಾನಸಿಕ ಅಸ್ವಸ್ಥ ತವರಿಗೆ ಮರಳಿದಾಗ…
ಕೆಟ್ಟುಹೋದ ಮೊಬೈಲ್‌ ಬದಲಿಸಿಕೊಟ್ಟಿಲ್ಲವೆಂದು ನೊಂದು ಬೆಂಕಿಹಚ್ಚಿಕೊಂಡ ವ್ಯಕ್ತಿ!
ಇಲ್ಲೊಂದು ಜಿಂಕೆಮರಿ ಇದೆ… ಹುಡುಕಿದರೆ ನೀವೇ ಗ್ರೇಟ್‌…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × 2 =
Remember me
