ಇಸ್ಲಾಮಾಬಾದ್‌:ಫೇಸ್‌ಬುಕ್‌ನಲ್ಲಿ ಹೆಚ್ಚಾಗುತ್ತಿರುವ ‘ಇಸ್ಲಾಮೊಫೋಬಿಯಾ’ (ಇಸ್ಲಾಂ ಬಗ್ಗೆ ಭೀತಿ) ಪೋಸ್ಟ್‌ಗಳಿಗೆ ಕಡಿವಾಣ ಹಾಕಿ ಎಂದು ಗೋಳು ತೋಡಿಕೊಂಡಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​, ಈ ಕುರಿತು ಫೇಸ್‌ಬುಕ್‌ ಸಿಇಒ ಮಾರ್ಕ್‌ ಝಕರ್‌ಬರ್ಗ್‌ಗೆ ಪತ್ರ ಬರೆದಿದ್ದಾರೆ.
ಸಾಮಾಜಿಕ ಜಾಲತಾಣ, ಅದರಲ್ಲೂ ಫೇಸ್‌ಬುಕ್‌ನಲ್ಲಿ ಇಸ್ಲಾಮೋಫೋಬಿಯಾ ಹೆಚ್ಚುತ್ತಿದೆ. ಇದರಿಂದಾಗಿ ವಿಶ್ವದಾದ್ಯಂತ ಉಗ್ರವಾದ ಮತ್ತು ಹಿಂಸಾಚಾರಕ್ಕೆ ಪ್ರೋತ್ಸಾಹ ದೊರೆಯುತ್ತಿದೆ. ಆದ್ದರಿಂದ ಇದನ್ನು ನಿಷೇಧಿಸಿ ಎಂದು ಪತ್ರದಲ್ಲಿ ಇಮ್ರಾನ್​ ಆತಂಕ ವ್ಯಕ್ತಪಡಿಸಿದ್ದಾರೆ. ಹತ್ಯಾಕಾಂಡದ ವಿರುದ್ಧ ಫೇಸ್‌ಬುಕ್‌ ಜಾರಿಯಲ್ಲಿಟ್ಟಿರುವ ನಿಷೇಧದಂತೆಯೇ ಇಸ್ಲಾಮೋಫೋಬಿಯಾ ವಿಚಾರಗಳ ಪೋಸ್ಟ್‌ಗಳ ಮೇಲೂ ನಿಷೇಧ ಹೇರಬೇಕು ಎಂದು ಅವರು ಒತ್ತಾಯಿಸಿದ್ದಾರೆ.
Hallmark of a leader is he unites human beings, as Mandela did, rather than dividing them. This is a time when Pres Macron could have put healing touch & denied space to extremists rather than creating further polarisation & marginalisation that inevitably leads to radicalisation
— Imran Khan (@ImranKhanPTI)October 25, 2020

ಈ ಸಂಬಂಧ ಇಮ್ರಾನ್‌ ಖಾನ್‌ ಅವರು ಫೇಸ್‌ಬುಕ್‌ ಸಿಇಒಗೆ ಬರೆದಿರುವ ಪತ್ರವನ್ನು ಪಾಕಿಸ್ತಾನ ಸರ್ಕಾರ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದೆ.ಫೇಸ್‌ಬುಕ್‌ನಲ್ಲಿ ಇಸ್ಲಾಮೋಫೋಬಿಯಾ ಹೆಚ್ಚಾಗಲು ಭಾರತ ಮತ್ತು ಫ್ರಾನ್ಸ್‌ ಮುಖ್ಯ ಕಾರಣ. ಫೇಸ್‌ಬುಕ್‌ನಂಥ ಸಾಮಾಜಿಕ ಮಾಧ್ಯಮ ವೇದಿಕೆಗಳು ಜಗತ್ತಿನಲ್ಲಿ ಇಸ್ಲಾಮೊಫೋಬಿಯಾ ಮೂಲಕ ದ್ವೇಷ, ತೀವ್ರಗಾಮಿತನ ಮತ್ತು ಹಿಂಸೆ ಹೆಚ್ಚಾಗಲು ಕಾರಣವಾಗುತ್ತಿವೆ ಎಂಬುದನ್ನು ನಿಮ್ಮ ಗಮನಕ್ಕೆ ತರಲೆಂದು ಈ ಪತ್ರ ಬರೆಯುತ್ತಿದ್ದೇನೆ ಎಂದು ಅವರು ಬರೆದಿದ್ದಾರೆ.
ಇದನ್ನೂ ಓದಿ:VIDEO: ಕಾಂಗ್ರೆಸ್​ ಮುಖಂಡನ ನೇತೃತ್ವದಲ್ಲಿ ರಾವಣನ ಸುಡುವಾಗ ಸ್ಫೋಟ!
ಭಾರತದ ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ನಾಗರಿಕ ನೋಂದಣಿ ವಿರೋಧಿ ಪ್ರತಿಭಟನೆಗಳನ್ನು ಉಲ್ಲೇಖಿಸಿರುವ ಅವರು, ಕರೊನಾ ಹರಡಲು ತಬ್ಲಿಗಿ ಜಮಾತ್‌ ಕಾರಣವೆಂದು ಕೆಲವರು ಹೇಳಿದ್ದಾರೆ. ಈ ಬೆಳವಣಿಗೆಗಳಿಗೆ ಇಸ್ಲಾಮೊಫೋಬಿಯಾ ಮುಖ್ಯ ಕಾರಣ ಎಂದು ದೂರಿದ್ದಾರೆ. ಇನ್ನು ಫ್ರಾನ್ಸ್​ ಬಗ್ಗೆ ಉಲ್ಲೇಖಿಸಿರುವ ಅವರು, ಫ್ರಾನ್ಸ್‌ನಲ್ಲಿ ಇಸ್ಲಾಂ ಅನ್ನು ಭಯೋತ್ಪಾದನೆಗೆ ಹೋಲಿಸಲಾಗುತ್ತದೆ. ಅಧ್ಯಕ್ಷ ಇಮ್ಯಾನ್ಯುಯಲ್‌ ಮ್ಯಾಕ್ರಾನ್‌ ಅವರು ಪ್ರವಾದಿ ಮೊಹಮ್ಮದ್ದರ ವ್ಯಂಗ್ಯ ಚಿತ್ರ ಬಳಸಿದವರಿಗೆ ಬೆಂಬಲ ಸೂಚಿಸಿ ಮಾತನಾಡುತ್ತಿದ್ದಾರೆ ಎಂದಿದ್ದಾರೆ.
ಈ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಫೇಸ್​ಬುಕ್​ ವಕ್ತಾರರು, ‘ಕಂಪನಿಯು ಎಲ್ಲಾ ರೀತಿಯ ದ್ವೇಷದ ವಿರುದ್ಧವಿದೆ. ಜನಾಂಗ, ಜನಾಂಗೀಯವಾದ, ರಾಷ್ಟ್ರ ಅಥವಾ ಧರ್ಮದ ಆಧಾರದಲ್ಲಿ ನಡೆಸುವ ದಾಳಿಯನ್ನು ಫೇಸ್‌ಬುಕ್‌ ಒಪ್ಪುವುದಿಲ್ಲ, ದ್ವೇಷ ಹರಡುವಂಥ ಪೋಸ್ಟ್‌ಗಳನ್ನು ನಮ್ಮ ಅರಿವಿಗೆ ಬಂದ ತಕ್ಷಣ ತೆಗೆದುಹಾಕುತ್ತಿದ್ದೇವೆ’ ಎಂದಿದ್ದಾರೆ.
ಚಿಂದಿ ಆಯುವವರೆಂದು ಥೂ ಎಂದರು… ಊರು ಬಿಡಬೇಕಾಯಿತು… ‘ನೀಟ್’​ ಗೆದ್ದು ಉತ್ತರಿಸಿರುವೆ…

ಹೆಣ್ಣುಮಕ್ಕಳ ಬಳಿ ಬಂದು ಪ್ಯಾಂಟ್​ ಬಿಚ್ಚುತ್ತಿದ್ದ ಯುವಕನ ಬೆನ್ನತ್ತಿ ಹೋದ ಪೊಲೀಸರೇ ತಬ್ಬಿಬ್ಬು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:sixteen − eight =
Remember me
