ನವದೆಹಲಿ:ದೇಶದ ಮೊದಲ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಬಿಪಿನ್‌ ರಾವತ್‌ ಇನ್ನಿಲ್ಲ. ಅವರನ್ನು ಕಳೆದುಕೊಂಡ ಭಾರತದ ಸೇನೆಗೆ ಅನಾಥ ಪ್ರಜ್ಞೆ ಕಾಡುತ್ತಿದೆ. ಹತ್ತೇ ನಿಮಿಷದಲ್ಲಿ ನಿಗದಿತ ಸ್ಥಳ ತಲುಪಬೇಕಿದ್ದ ಅವರ ಹೆಲಿಕಾಪ್ಟರ್‌ ನೀಲಗಿರಿ ಬೆಟ್ಟ ಪ್ರದೇಶದ ಮರಕ್ಕೆ ಹೆಲಿಕಾಪ್ಟರ್ ಅಪ್ಪಳಿಸಿದೆ. 13 ಮಂದಿಯನ್ನು ಬಲಿ ಪಡೆದುಬಿಟ್ಟಿದೆ.
ಇದೇ ಮೊದಲಲ್ಲ ಬಿಪಿನ್‌ ರಾವತ್‌ ಅವರು 2015ರಲ್ಲಿಯೂ ಇದೇ ರೀತಿಯ ಹೆಲಿಕಾಪ್ಟರ್‌ ಅಪಘಾತಕ್ಕೆ ಒಳಗಾಗಿದ್ದರು. ಸಾವಿನ ಸಮೀಪ ಹೋಗಿಬಂದಿದ್ದರು. ಆದರೆ ಅಚ್ಚರಿಯ ರೀತಿಯಲ್ಲಿ ಬದುಕುಳಿದಿದ್ದರು. ಅದು 2015ರ ಫೆಬ್ರವರಿ 3. ನಾಗಾಲ್ಯಾಂಡ್‌ನ ದಿಮಾಪುರದಲ್ಲಿ ಚೀತಾ ಹೆಲಿಕಾಪ್ಟರ್ ಟೇಕಾಫ್ ಆಗುತ್ತಿದ್ದಾಗ ಕೆಲವೇ ನಿಮಿಷಗಳಲ್ಲಿ ಪತನಗೊಂಡಿತ್ತು. ಸಿಂಗಲ್ ಎಂಜಿನ್ ಹೆಲಿಕಾಪ್ಟರ್ ಮೇಲೆ ಏರಿದ ಸುಮಾರು 20 ಮೀಟರ್ ಎತ್ತರದಲ್ಲಿಯೇ ನಿಯಂತ್ರಣ ತಪ್ಪಿ ನೆಲಕ್ಕೆ ಅಪ್ಪಳಿಸಿತ್ತು. ಎಂಜಿನ್ ವೈಫಲ್ಯದಿಂದಾಗಿ ಅಪಘಾತ ಸಂಭವಿಸಿತ್ತು.
ಆ ಹೆಲಿಕಾಪ್ಟರ್‌ನಲ್ಲಿದ್ದ ರಾವತ್‌ ಸೇರಿದಂತೆ ಪೈಲೆಟ್‌, ಕರ್ನಲ್‌ ಅವರು ಬದುಕುಳಿದಿದ್ದರು. ಆದರೆ ಅವರಿಗೆ ಸ್ವಲ್ಪ ಗಾಯಗಳಾಗಿತ್ತಷ್ಟೇ. ಆ ಸಂದರ್ಭದಲ್ಲಿ ರಾವತ್‌ ಅವರು ಲೆಫ್ಟಿನೆಂಟ್ ಜನರಲ್ ಆಗಿದ್ದರು. ಆದರೆ ಇದೀಗ ರಾವತ್‌ ಅವರನ್ನು ಸಾವು ಬಲಿಪಡೆದುಬಿಟ್ಟಿದೆ!
ಸೇನೆಯಲ್ಲಿ ಇತಿಹಾಸ ಸೃಷ್ಟಿಸಿರುವ ಬಿಪಿನ್ ರಾವತ್‌ ಅಚ್ಚರಿಗಳ ಆಗರ: ನಿವೃತ್ತಿಯ ಹಿಂದಿನ ದಿನವೇ ನಡೆದಿತ್ತು ಕೌತುಕ!

ಸಂಕ್ರಾಂತಿಗೆ ಬರುವೆ ಎಂದಿದ್ದರು! ಏನೂ ಅರಿಯದ ನನ್ನ ಪುಟ್ಟ ಕಂದಮ್ಮಗಳಿಗೆ ಏನೆಂದು ಹೇಳಲಿ… ಯುವ ಯೋಧನ ಪತ್ನಿಯ ಕಣ್ಣೀರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − five =
Remember me
