ಗೋರಖ್​ಪುರ (ಉತ್ತರ ಪ್ರದೇಶ):ಅತ್ತೆ- ಸೊಸೆ ಜಗಳವಾಡುವುದು ಹೊಸ ವಿಷಯವೂ ಅಲ್ಲ, ಇದರಲ್ಲಿ ಏನೂ ಅಚ್ಚರಿಯೂ ಇಲ್ಲ. ಆದರೆ ಇಲ್ಲೊಂದು ವಿಚಿತ್ರ ಕೇಸ್​ ದಾಖಲಾಗಿದ್ದು, ಅತ್ತೆ- ಸೊಸೆ ಜಗಳದಲ್ಲಿ ಪೊಲೀಸರು ಸುಸ್ತಾಗಿ ಹೋಗಿದ್ದಾರೆ.
ಇಂಥದ್ದೊಂದು ವಿಚಿತ್ರ ಕೇಸ್​ ನಡೆದಿರುವುದು ಉತ್ತರ ಪ್ರದೇಶದ ಗೋರಖ್​ಪುರದಲ್ಲಿ. ಪೊಲೀಸರಿಗೆ ಕರೆ ಮಾಡಿರುವ ಸೊಸೆ ತನಗೆ ರಕ್ಷಣೆ ಕೊಡಿ ಎಂದು ಕೋರಿಕೊಂಡಿದ್ದಾಳೆ. ಅದಕ್ಕೆ ಆಕೆ ನೀಡಿರುವ ಕಾರಣ ಎಂದರೆ ಅತ್ತೆಗೆ ವಿಪರೀತ ಟೀವಿ ಹುಚ್ಚು. ಆದ್ದರಿಂದ ದಿನವೂ ತಂಗಳನ್ನ ನಾನು ತಿನ್ನಬೇಕಿದೆ. ಇದರಿಂದ ನನ್ನ ಆರೋಗ್ಯ ಕೆಡುತ್ತಿದೆ. ಅತ್ತೆಗೆ ಬುದ್ಧಿ ಹೇಳಿ ಎಂದು ಕೋರಿಕೊಂಡಿದ್ದಾಳೆ.
ಪೊಲೀಸರು ಸೊಸೆಯ ಮಾತು ಕೇಳಿ ನಕ್ಕು ಸುಮ್ಮನಾಗಲಾದೀತೆ? ಕೌಟುಂಬಿಕ ದೌರ್ಜನ್ಯ ಬೇರೆ ಎಂದು ಹೇಳುತ್ತಿದ್ದಾಳೆ ಸೊಸೆ, ಅದಕ್ಕಾಗಿ ವಿಚಾರಣೆಗೆಂದು ಮನೆಗೆ ಹೋಗಿದ್ದಾರೆ. ಆಗ ಅತ್ತೆಯ ವರ್ಷನ್​ ಕೇಳಬೇಕಲ್ಲ. ಅತ್ತೆಯನ್ನು ವಿಚಾರಿಸಿದಾಗ ಅದಕ್ಕೆ ಅವರು, ಸೊಸೆಯ ತಲೆ ಸರಿಯಿಲ್ಲ. ನಾನು ಪ್ರತಿ ದಿನ ಅಡುಗೆ ಮಾಡಿ ಫ್ರೆಷ್​ ಆಗಿರಯೇ ನೀಡುತ್ತಿದ್ದೇನೆ. ಆದರೆ ಆಕೆ ಸದಾ ಮೊಬೈಲ್​ನಲ್ಲಿ ಬ್ಯಸಿಯಾಗಿರುತ್ತಾಳೆ, ಅವಳಿಗೆ ಮೊಬೈಲ್​ ಹುಚ್ಚು. ಅವಳದ್ದೇ ತಪ್ಪಿಗೆ ಎಂದಿದ್ದಾರೆ.
ಸೊಸೆಯ ಮಾತು ಕೇಳಲು ಹೋದರೆ ಅತ್ತೆ ಅಡ್ಡಿ ಬರೋದು, ಅತ್ತೆ ಮಾತು ಕೇಳಲು ಹೋದರೆ ಸೊಸೆ ಅಡ್ಡಿಬರೋದು ನೋಡಿ ಪೊಲೀಸರಿಗೆ ಹುಚ್ಚುಹಿಡಿದಂತಾಯಿತಂದೆ.
ಅಷ್ಟಕ್ಕೂ ಈ ಮನೆಯಲ್ಲಿ ಅತ್ತೆ, ಸೊಸೆ ಮಾತ್ರ ಇರುವುದು. ಇವರ ಗಂಡಂದಿರು ಬೇರೆ ದೂರುಗಳಲ್ಲಿ ಉದ್ಯೋಗದಲ್ಲಿದ್ದಾರೆ. ಆದ್ದರಿಂದ ದಿನವೂ ಇಬ್ಬರ ನಡುವೆ ಕಿರಿಕಿರಿ, ಮಾರಾಮಾರಿ. ಅಂತೂ ಇವರಿಬ್ಬರನ್ನೂ ಒಟ್ಟಿಗೇ ಕುಳ್ಳರಿಸಿ ಬುದ್ಧಿಮಾತು ಹೇಳಿ ಸದ್ಯ ಪೊಲೀಸರು ಅಲ್ಲಿಂದ ವಾಪಸಾಗಿದ್ದಾರಂತೆ.
VIDEO: ಬೈಕ್‌ನಲ್ಲಿ ಬಂದ… ಅತ್ತಿತ್ತ ನೋಡಿದ…ಮಹಿಳೆಯರ ಒಳ ಉಡುಪು ಕದ್ದು ಡಿಕ್ಕಿಯಲ್ಲಿ ಸೇರಿಸಿ ಪರಾರಿಯಾದ..

ಏಲಿಯನ್‌ ಥರ ಕಾಣಿಸಲು ಮೂಗು, ತುಟಿ, ಕಿವಿ, ನಾಲಿಗೆ ಕತ್ತರಿಸಿಕೊಂಡ- ಎಲ್ಲವೂ ಅಮ್ಮನಿಗಾಗಿಯಂತೆ!

ವೀರ್ಯಾಣು ಉತ್ಪತ್ತಿಯೇ ಆಗುತ್ತಿಲ್ಲವೆಂದಾದರೆ ಈ ಕಾರಣಗಳೂ ಇರಬಹುದು… ನೋಡಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × two =
Remember me
