ಡಬ್ಲಿನ್ ​(ಐರ್ಲೆಂಡ್):ಐರ್ಲೆಂಡ್ ವಿರುದ್ಧ ಟಿ-20 ಪಂದ್ಯದಲ್ಲಿ ಭಾರತವು ಏಳು ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ. ಅಂತಾರಾಷ್ಟ್ರೀಯ ತಂಡದ ನಾಯಕತ್ವವನ್ನು ಮೊದಲ ಬಾರಿ ವಹಿಸಿಕೊಂಡಿದ್ದ ಹಾರ್ದಿಕ್​ ಪಾಂಡ್ಯ ನೇತೃತ್ವದ ತಂಡದಲ್ಲಿ ಈ ಗೆಲುವು ಸಿಕ್ಕಿದೆ.
ಮಳೆರಾಯನ ಅಡ್ಡಿಯಿಂದ 12 ಓವರ್​ಗಳಿಗೆ ನಿಗದಿಯಾದ ಈ ಪಂದ್ಯದಲ್ಲಿ ಐರ್ಲೆಂಡ್​ ತಂಡ ಕೇವಲ 4 ವಿಕೆಟ್​ಗಳನ್ನು ಕಳೆದುಕೊಂಡು 108 ರನ್​ಗಳನ್ನು ಗಳಿಸಿತ್ತು. ಐರ್ಲೆಂಡ್​ ನೀಡಿದ ಗುರಿಯನ್ನು ಬೆನ್ನಟ್ಟಿದ ಭಾರತ 9.2 ಓವರ್​ಗಳಿಗೆ 3 ವಿಕೆಟ್​ಗಳನ್ನು ಕಳೆದುಕೊಂಡು 111 ರನ್​ಗಳನ್ನು ಕಲೆ ಹಾಕಿ ಜಯ ಸಾಧಿಸಿತು.
ಭಾರತ ತಂಡದ ಪರ ಆರಂಭಿಕ ಆಟಗಾರ ಇಶಾನ್ ಕಿಶನ್ ಔಟಾಗದೇ 47 ರನ್ ಗಳಿಸಿದರು. ದೀಪಕ್ ಹೂಡಾ 26 ರನ್​, ಸೂರ್ಯಕುಮಾರ್ ಯಾದವ್ 0, ನಾಯಕ ಹಾರ್ದಿಕ್ ಪಾಂಡ್ಯ 24 ಮತ್ತು ದಿನೇಶ್ ಕಾರ್ತಿಕ್ 4 ರನ್​ಗಳನ್ನು ಕಲೆ ಹಾಕಿ ಅಜೇಯರಾಗಿ ಉಳಿದರು. ಐರ್ಲೆಂಡ್​ ತಂಡದ ಪರ ಕ್ರೇಗ್ ಯಂಗ್ 2 ವಿಕೆಟ್​ ಪಡೆದರೆ, ಜೋಶುವಾ ಲಿಟಲ್ 1 ವಿಕೆಟ್​ ಪಡೆದರು.
ಭಾರತ ತಂಡ ಪರ ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಯುಜ್ವೇಂದ್ರ ಚಹಲ್ ಮತ್ತು ನಾಯಕ ಹಾರ್ದಿಕ್ ಪಾಂಡ್ಯ ತಲಾ ಒಂದೊಂದು ವಿಕೆಟ್​ ಪಡೆಯುವ ಮೂಲಕ ಐರ್ಲೆಂಡ್​ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದರು.
ಟಾಸ್​ ಸೋತು ಮೊದಲ ಬ್ಯಾಟಿಂಗ್​ ಆರಂಭಿಸಿತ್ತು ಐರ್ಲೆಂಡ್ ತಂಡ. ತಂಡದ ಪರ ಪಾಲ್ ಸ್ಟಿರ್ಲಿಂಗ್ 4 ರನ್​, ನಾಯಕ ಆಂಡ್ರ್ಯೂ ಬಾಲ್ಬಿರ್ನಿ 0, ಗರೆಥ್ ಡೆಲಾನಿ 8 ರನ್​, ಲೋರ್ಕನ್ ಟಕರ್ 18 ರನ್​ ಗಳಿಸಿ ಔಟಾದರು. ಹ್ಯಾರಿ ಟೆಕ್ಟರ್ ಔಟಾಗದೇ 33 ಎಸೆತಗಳಲ್ಲಿ 64 ರನ್​ಗಳಿಸಿದರೆ, 4 ರನ್​ಗಳಿಸಿದ ಜಾರ್ಜ್ ಡಾಕ್ರೆಲ್ ಅಜೇಯರಾಗಿ ಉಳಿದರು.
VIDEO: ಹೊಡೆದು ಓಡಿಸಿದವರ ಬೆಂಬಿಡದೇ ಕಾಡುತ್ತಿದೆ ಕೊಪ್ಪಳದ ದುರ್ಗಾದೇವಿ ಹರಕೆಯ ಕೋಣ!

ಹುಡುಗಿಯರ ಫೋನ್​ ನಂಬರ್​ ಹಿಂದೆ ಬಿದ್ರೆ ಹುಷಾರ್​: ಇಬ್ಬರು ಯುವಕರಿಗೆ ಒಂದು ವರ್ಷ ಜೈಲು, ಭಾರಿ ದಂಡ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − nineteen =
Remember me
