ಕಾನ್ಪುರ:ಪಾಕಿಸ್ತಾನಕ್ಕಿಂತ ಭಾರತದಲ್ಲಿ ಹೆಚ್ಚು ಮುಸ್ಲಿಂ ಜನಸಂಖ್ಯೆ ಇದೆ, ಆದ್ದರಿಂದ ಮುಸ್ಲಿಮರ ಅಲ್ಪಸಂಖ್ಯಾತ ಸ್ಥಾನಮಾನವನ್ನು ತಕ್ಷಣದಿಂದ ರದ್ದುಗೊಳಿಸಬೇಕು. ಮುಸ್ಲಿಮರು ಈಗ ತಮ್ಮನ್ನು ಹಿಂದೂಗಳ ಕಿರಿಯ ಸಹೋದರರೆಂದು ಪರಿಗಣಿಸಬೇಕು ಮತ್ತು ಅವರೊಂದಿಗೆ ದೇಶದಲ್ಲಿ ವಾಸಿಸಬೇಕು ಎಂದು ಉನ್ನಾವೊದ ಭಾರತೀಯ ಜನತಾ ಪಕ್ಷದ ಸಂಸದ ಸಾಕ್ಷಿ ಮಹಾರಾಜ್ ಹೇಳಿದ್ದಾರೆ.
ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುವಲ್ಲಿಯೇ ಹೆಸರುವಾಸಿಯಾಗಿರುವ ಸಾಕ್ಷಿ ಮಹಾರಾಜ್ ಇದೀಗ ಈ ಹೇಳಿಕೆ ನೀಡಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಉನ್ನಾವೊದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು ಈ ವಿಷಯ ಹೇಳಿದ್ದಾರೆ. ದೇಶದ ಹೆಚ್ಚುತ್ತಿರುವ ಜನಸಂಖ್ಯೆಯ ಕುರಿತು ಮಾತನಾಡಿದ ಸಾಕ್ಷಿ, “ಹೆಚ್ಚುತ್ತಿರುವ ಜನಸಂಖ್ಯೆಯನ್ನು ಪರೀಕ್ಷಿಸಲು ಶೀಘ್ರದಲ್ಲೇ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗುವುದು. ಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರು ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ವಂಚಿತರಾಗುತ್ತಾರೆ ಎಂದು ಹೇಳಿದರು.
ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ವಿನಾಕಾರಣ ರೈತರ ದಿಕ್ಕು ತಪ್ಪಿಸುವ ಯತ್ನಗಳು ನಡೆಯುತ್ತಿವೆ. ಕೃಷಿ ಕಾನೂನುಗಳ ಬಗ್ಗೆ ಮಾತನಾಡಲು ಸರ್ಕಾರ ಸಿದ್ಧವಾಗಿದ್ದರೂ ಕೇಳಲು ರೈತರು ಮನಸ್ಸು ಮಾಡುತ್ತಿಲ್ಲ ಎಂದರು.
ಜತೆಗೆ, ಅನವಶ್ಯಕವಾಗಿ ಕಾಂಗ್ರೆಸ್​ ರೈತರ ಹಾದಿ ತಪ್ಪಿಸುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ತಾಕತ್ತಿದ್ದರೆ ಕಾಂಗ್ರೆಸ್​ ಹಾಗೂ ಕೃಷಿ ವಿರೋಧಿಸುತ್ತಿರುವವರು ಅಯೋಧ್ಯೆ ವಿಷಯದಂತೆಯೇ ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸಲಿ. ಅದನ್ನು ಬಿಟ್ಟು ರೈತರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿರುವುದು ನಾಚಿಕೆಗೇಡು ಎಂದರು. ಮುಗ್ಧ ರೈತರ ಭುಜಗಳ ಮೇಲೆ ಬಂದೂಕುಗಳನ್ನು ಹಾರಿಸಿ ಮಜ ನೋಡುವ ಕೆಲಸ ಮಾಡಬಾರದು ಎಂದರು.
2011ರ ಜನಗಣತಿಯ ಅನ್ವಯ (ಅಂದರೆ 10 ವರ್ಷಗಳ ಹಿಂದಿನ ಜನಗಣತಿಯಂತೆ) ಭಾರತದಲ್ಲಿ ಮುಸ್ಲಿಮರ ಸಂಖ್ಯೆ 19.5 ಕೋಟಿ. ಒಟ್ಟೂ ಜನಸಂಖ್ಯೆಯ ಶೇ. 14.2ರಷ್ಟು ಮಂದಿ ಮುಸ್ಲಿಮರು ಭಾರತದಲ್ಲಿದ್ದಾರೆ.
ಮಗನ ಸಾವಿನ ಚಿಂತೆಯಲ್ಲಿಯೇ ಸುಶಾಂತ್​ ಸಿಂಗ್​ ತಂದೆ ಆಸ್ಪತ್ರೆಗೆ ದಾಖಲು

ಲವ್​ ಫೇಲ್ಯೂರ್​ಗೆ​ ₹5, ಹೊಸ ಲವ್​ಗೆ ₹10, ಲವರ್​ ಬಿಟ್ಟು ಹೋದ್ರೆ ₹15, ಇಷ್ಟದ ಲವರ್​ಗಾಗಿ​ ₹49

ಪಕ್ಕದ್ಮನೆ ಆಂಟಿಗೆ ಗಂಡ ಸುಖಕೊಡಲ್ವಂತೆ- ಸದಾ ಪೀಡಿಸುತ್ತಿದ್ದಾಳೆ: ಹೇಗೆ ತಪ್ಪಿಸಿಕೊಳ್ಳಲಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
