ನವದೆಹಲಿ:ಭಾರತ ಮೂಲದ ಎಲ್ಲಾ ವಿಮಾನಗಳು ಮತ್ತು ಇಲ್ಲಿಯ ವಿಮಾನ ನಿಲ್ದಾಣಗಳಲ್ಲಿ ಇನ್ನುಮೂದೆ ದೇಸಿ ಸಂಗೀತ ಮೊಳಗಲಿದೆ. ಏಕೆಂದರೆ ಇದೇ ಸಂಗೀತವನ್ನು ಬಳಸುವಂತೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ವಿಮಾನ ನಿಲ್ದಾಣ ನಿರ್ವಹಣಾ ಸಂಸ್ಥೆಗಳು ಮತ್ತು ಭಾರತದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ವಿಮಾನಯಾನ ಕಂಪನಿಗಳಿಗೆ ಸೂಚಿಸಿದೆ.
ದೇಸಿ ಸಂಗೀತಕ್ಕೆ ಒತ್ತು ನೀಡುವ ಹಿನ್ನೆಲೆಯಲ್ಲಿ ಭಾರತೀಯ ಸಾಂಸ್ಕೃತಿಕ ಸಂಶೋಧನಾ ಮಂಡಳಿಯು ಕೇಂದ್ರಕ್ಕೆ ಈ ಮನವಿಯನ್ನು ಸಲ್ಲಿಸಿತ್ತು. ಅದಕ್ಕೆ ಒಪ್ಪಿಗೆ ಸೂಚಿಸಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಈ ಬಗ್ಗೆ ಸೂಚನೆ ಹೊರಡಿಸಿದೆ.
ನಮ್ಮ ಭಾರತೀಯ ಸಂಗೀತವು ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಯನ್ನು ಹೊಂದಿದೆ. ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುವ ಅನೇಕ ವಿಷಯಗಳಲ್ಲಿ ಇದು ಕೂಡ ಒಂದು. ಆದ್ದರಿಂದ ಭಾರತೀಯ ಸಂಗೀತಕ್ಕೆ ಆದ್ಯತೆ ನೀಡಬೇಕು ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಜಂಟಿ ಕಾರ್ಯದರ್ಶಿ ಉಷಾ ಪಾಧಿ ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣ ನಿರ್ವಾಹಕರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಭಾರತದಲ್ಲಿ ಸಂಗೀತವು ಸಾಮಾಜಿಕ-ಧಾರ್ಮಿಕ ಜೀವನದ ಅವಿಭಾಜ್ಯ ಅಂಗವಾಗಿದೆ. ವಿದೇಶಿ ವಿಮಾನಗಳು ಬಳಸುವ ಸಂಗೀತ ಆಯಾ ದೇಶಗಳ ಸಂಗೀತವಾಗಿದೆ. ಅಮೆರಿಕನ್‌ ಏರ್‌ಲೈನ್ಸ್‌ನಲ್ಲಿ ಜಾಝ್, ಆಸ್ಟ್ರೇಲಿಯನ್‌ ಏರ್‌ಲೈನ್ಸ್ ನಲ್ಲಿ ಮೊಜಾರ್ಟ್ ಮತ್ತು ಮಧ್ಯಪ್ರಾಚ್ಯದ ವಿಮಾನಯಾನದಲ್ಲಿ ಅರಬ್ ಸಂಗೀತ ಪ್ರಸಾರ ಮಾಡಲಾಗುತ್ತಿದೆ. ಆದರೆ ಭಾರತದ ವಿಮಾನಗಳಲ್ಲಿ ಕೆಲವೊಮ್ಮೆ ವಿದೇಶಿ ಸಂಗೀತಗಳೂ ಕೇಳಿಸುತ್ತಿವೆ. ಆದ್ದರಿಂದ ಇನ್ಮುಂದೆ ಭಾರತೀಯ ಸಂಗೀತವೇ ಮೊಳಗಬೇಕು ಎಂದು ಸಚಿವಾಲಯ ಹೇಳಿದೆ.
VIDEO: ಅಧಿಕಾರಿಗಳ ಎಡವಟ್ಟಿನಿಂದ ರಾಜ್ಯದತ್ತ ಧಾವಿಸಿ ಬರುತ್ತಿದೆ ‘ಮಹಾ‘ ಜಲಾಶಯದ ನೀರು: ಹೈ ಅಲರ್ಟ್‌ ಘೋಷಣೆ

ತಿರುಪತಿಯ ಪುರೋಹಿತನ ಮನೆಯಲ್ಲಿ ಐಟಿ ರೇಡ್‌- 128 ಕೆ.ಜಿ ಚಿನ್ನ, 70 ಕೋಟಿ ರೂ ವಜ್ರ ವಶಕ್ಕೆ! ಅಸಲಿಯತ್ತು ಇಲ್ಲಿದೆ ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
