ನವದೆಹಲಿ:ಸೈಬರ್‌ ಸೆಕ್ಯುರಿಟಿ ಸಂಸ್ಥೆಯಾಗಿರುವ ಮ್ಯಾಕ್​ಅಫಿ, ಅತ್ಯಂತ ಅಪಾಯಕಾರಿ ಟಾಪ್​ 10 ಸೆಲೆಬ್ರಿಟಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಬಹುತೇಕ ಮಂದಿ ಚಿತ್ರತಾರೆಯರು ಎನ್ನುವುದು ವಿಶೇಷ.
ಅಪಾಯಕಾರಿ ಎಂದರೆ, ಒಂದರ್ಥದಲ್ಲಿ ಬಳಕೆದಾರರು ಗೂಗಲ್​ನಲ್ಲಿ ಅತ್ಯಂತ ಹೆಚ್ಚು ಹುಡುಕಿರುವವರು ಎಂದು ಅರ್ಥ. ಆದರೆ ಇವರ ಹೆಸರನ್ನು ಹುಡುಕಿರುವ ಹಿಂದಿನ ಉದ್ದೇಶ ಮಾತ್ರ ಬೇರೆಯದ್ದೇ ಎಂದು ಮ್ಯಾಕ್​ಅಫಿ ಹೇಳಿದೆ.
ಇದಕ್ಕೆ ಸ್ಪಷ್ಟನೆ ಕೊಟ್ಟಿರುವ ಮ್ಯಾಕ್​ಅಫಿ ಸಂಸ್ಥೆ, ಬಳಕೆದಾರರು, ಕೆಲವೊಮ್ಮೆ ಕೆಲವೊಂದು ಗೂಗಲ್​ನಲ್ಲಿ ಸೆಲೆಬ್ರಿಟಿಗಳ ಹುಡುಕಾಟ ನಡೆಸುತ್ತಾರೆ. ಆದರೆ ಅದು ಸಾಮಾನ್ಯ ಹುಡುಕಾಟ ಆಗಿರುವುದಿಲ್ಲ. ಈ ಸೆಲೆಬ್ರಿಟಿಗಳ ಬಗ್ಗೆ ವಿಡಿಯೋ ಏನಾದರೂ ಸೋರಿಕೆಯಾಗಿದೆಯೇ, ಇವರ ಬಗ್ಗೆ ಏನಾದರೂ ವಿವಾದ ಹುಟ್ಟುಕೊಂಡಿವೆಯೇ, ಇವರ ಬಗ್ಗೆ ಏನಾದರೂ ವೈರಲ್​ ಸುದ್ದಿಗಳು ಬಂದಿವೆಯೆ ಅಥವಾ ಇವರ ವಿರುದ್ಧ ಏನಾದರೂ ಇಲ್ಲಸಲ್ಲದ ವಿಷಯಗಳು ಬಂದಿವೆಯೇ ಎಂಬುದರ ಕುರಿತು ಹುಡುಕಾಟ ನಡೆಸುತ್ತಾರೆ. ಇದರ ಅರ್ಥ ಇದೊಂದು ರೀತಿಯಲ್ಲಿ ದುರುದ್ದೇಶದಿಂದ ಕೂಡಿರುವ ಹುಡುಕಾಟ ಆಗಿರುತ್ತದೆ ಎಂದಿದೆ.
ಕೆಲವು ಸೆಲೆಬ್ರಿಟಿಗಳ ಕುರಿತು ಇಂಥದ್ದೆಲ್ಲಾ ಅಪಾಯಕಾರಿ ವಿಷಯಗಳ ಬಗ್ಗೆ ಹುಡುಕಾಟ ಹೆಚ್ಚು ಹೆಚ್ಚಾಗಿರುವ ಕಾರಣ, ಅಂಥವರನ್ನು ಅಪಾಯಕಾರಿ ಸೆಲೆಬ್ರಿಟಿಗಳು ಎಂದು ಕರೆಯಲಾಗುತ್ತದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವೆಂಕಟ್ ಕೃಷ್ಣಪುರ ಹೇಳಿದ್ದಾರೆ.
ಇದನ್ನೂ ಓದಿ:ನನ್ನನ್ನು ಸಹಿಸಿಕೊಂಡಿದ್ದಿಕ್ಕೆ ಥ್ಯಾಂಕ್ಸ್​ … ಹೀಗ್ಯಾಕೆ ಹೇಳಿದ್ರು ರಶ್ಮಿಕಾ?
ಟಾಪ್​-10 ಅಪಾಯಕಾರಿ ಸೆಲೆಬ್ರಿಟಿಗಳು ಯಾರು ಎನ್ನುವುದನ್ನು ನೋಡುವುದಾದರೆ:ಫುಟ್​ಬಾಲ್​ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ನಟಿ ಟಬು ಇದ್ದಾರೆ. ತಾಪ್ಸಿ ಪನ್ನು ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಇತ್ತೀಚೆಗೆ ವೆಬ್-ಸರಣಿ ಪಾಟಾಲ್ ಲೋಕ್ ಮೂಲಕ ನಿರ್ಮಾಪಕರಾಗಿರುವ ಅನುಷ್ಕಾ ಶರ್ಮಾ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರೆ, ದಬಾಂಗ್ ನಟಿ ಸೋನಾಕ್ಷಿ ಸಿನ್ಹಾ ಐದನೇ ಸ್ಥಾನದಲ್ಲಿದ್ದಾರೆ.
ಗಾಯಕ ಅರ್ಮಾನ್ ಮಲಿಕ್ ಮತ್ತು ನಟಿ ಸಾರಾ ಅಲಿ ಖಾನ್ ಆರನೇ ಮತ್ತು ಏಳನೇ ಸ್ಥಾನದಲ್ಲಿದ್ದರೆ, ಕಂಗನಾ ರನೌತ್ ಎಂಟನೇ ಸ್ಥಾನದಲ್ಲಿದ್ದಾರೆ. ಜನಪ್ರಿಯ ದೂರದರ್ಶನ ನಟಿ ದಿವ್ಯಾಂಕಾ ತ್ರಿಪಾಠಿ ಒಂಬತ್ತನೇ ಸ್ಥಾನದಲ್ಲಿದ್ದರೆ ಹತ್ತನೇ ಸ್ಥಾನದಲ್ಲಿ ಸೂಪರ್ ಸ್ಟಾರ್ ಶಾರುಖ್ ಖಾನ್ ಇದ್ದಾರೆ.
ಸಾವಿರಾರು ಮಂದಿಗೆ ಊಟ ಹಾಕುವ ದಂಪತಿ ತುತ್ತು ಅನ್ನಕ್ಕೆ ಪರದಾಡಿದಾಗ… ನಡೆಯಿತೊಂದು ಪವಾಡ!

ಹಾಲಿವುಡ್​ ನಟಿಯ ಟ್ವಿಟರ್​ನಲ್ಲಿ ಲಕ್ಷ್ಮಿ ಪ್ರತ್ಯಕ್ಷ- ಅಭಿಮಾನಿಗಳಲ್ಲಿ ಸಂಚಲನ!

ಬೆಂಗಳೂರು ತಲುಪಬೇಕೆನ್ನುವಷ್ಟರಲ್ಲಿ ವಿಮಾನದಲ್ಲೇ ಡೆಲಿವರಿ: ವಿಡಿಯೋ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − fourteen =
Remember me
