ವಾಷಿಂಗ್ಟನ್​:ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ 2024ರಲ್ಲಿ ಹಮ್ಮಿಕೊಂಡಿರುವ ಮಾನವಸಹಿತ ಚಂದ್ರಯಾನ ಯೋಜನೆಯಲ್ಲಿ, ಎರಡು ಅತಿ ಹೆಮ್ಮೆ ಪಡುವ ವಿಷಯಗಳು ಸೇರಿವೆ. ಅವುಗಳ ಪೈಕಿ ಮೊದಲನೆಯದ್ದು ಎಂದರೆ, ಚಂದ್ರಯಾನಕ್ಕೆ ಆಯ್ಕೆಯಾಗಿರುವ 18 ಮಂದಿಯಲ್ಲಿ 9 ಮಂದಿ ಮಹಿಳೆಯರೇ ಎನ್ನುವುದು!
‘ಆರ್ಟೆಮಿಸ್‌ ಮೂನ್‌ ಲ್ಯಾಂಡಿಂಗ್‌ ಪ್ರೋಗ್ರಾಂ’ಗಾಗಿ 18 ಮಂದಿಯೂ ತರಬೇತಿ ಪಡೆಯಲಿದ್ದಾರೆ. ಅವರ ಪೈಕಿ 9 ಮಂದಿ ಮಹಿಳೆಯರು.ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆ ದಾಪುಗಲು ಇಡುತ್ತಿರುವ ಈ ಸಂದರ್ಭದಲ್ಲಿ ಮಾನವಸಹಿತ ಚಂದ್ರಯಾನಕ್ಕೆ ಮಹಿಳೆಯರು ಈ ಪರಿಯಲ್ಲಿ ಉತ್ಸುಕತೆ ತೋರಿರುವುದು ಸಂಶೋಧಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಇದಕ್ಕೆ ಕಾರಣ, ಇದೊಂದು ಅತ್ಯಂತ ಅಪಾಯಕಾರಿ ಯಾತ್ರೆಯಾಗಿದ್ದರೂ ಮಹಿಳೆಯರು ಹಿಂದೆ ಬಿದ್ದಿಲ್ಲ. ಮಾತ್ರವಲ್ಲದೇ ಮೊದಲಿಗೆ ಮಹಿಳೆಯನ್ನೇ ಚಂದ್ರನ ಮೇಲೆ ಪದಾರ್ಪಣೆ ಮಾಡಿಸಿ ನಂತರ ಪುರುಷರನ್ನು ಕಳುಹಿಸುವುದಾಗಿ ನಾಸಾ ಘೋಷಿಸಿದೆ.
ನಾಲ್ಕು ಗಂಡು ಒಂದು ಹೆಣ್ಣು ಇಲಿಗಳನ್ನು ಕಳೆದ ಬಾರಿ ಕಳುಹಿಸಲಾಗಿತ್ತು. ಅದರೆ ಅದು ಅಂದುಕೊಂಡಷ್ಟು ಯಶಸ್ವಿಯಾಗಿರಲಿಲ್ಲ. ಇದೀಗ ಮನುಷ್ಯರು ಹೋಗುತ್ತಿರುವುದು ಇತಿಹಾಸ ಬರೆಯಲಿದೆ.
ಇನ್ನೊಂದು ಭಾರತೀಯರು ಹೆಮ್ಮೆ ಪಡುವ ವಿಷಯವೆಂದರೆ, ಈ 18 ಮಂದಿ ಆಯ್ಕೆಯಾದವರ ಪೈಕಿ ಓರ್ವ ಭಾರತೀಯ ಮೂಲಕ ಯುಕನಿರುವುದು. ಅಮೆರಿಕದಲ್ಲಿ ಸದ್ಯ ನೆಲೆಸಿರುವ ಭಾರತೀಯ ಮೂಲದ ಗಗನಯಾತ್ರಿ ರಾಜಾ ಜಾನ್ ವರ್ಪುತೂರ್ ಚಾರಿ ಅವರು ಆಯ್ಕೆಯಾಗಿದ್ದಾರೆ.
ಇವರು ಹೈದರಾಬಾದ್ ಮೂಲದವರು. ಇವರ ತಂದೆ ಅಮೆರಿಕಕ್ಕೆ ವಲಸೆ ಹೋಗಿದ್ದರು. ರಾಜಾ ಚಾರಿ ಅಮೆರಿಕದ ವಾಯುಸೇನೆಗೆ ಸೇರ್ಪಡೆಗೊಂಡು ಬಳಿಕ 2017ರಲ್ಲಿ ನಾಸಾ ತರಬೇತಿ ಪೂರ್ಣಗೊಳಿಸಿದ 11 ಗಗನಯಾತ್ರಿ ಪದವಿಧರರಾಗಿದ್ದಾರೆ.
ಸದ್ಯ ಇವರು ಅಮೆರಿಕದ ವಾಯುಸೇನೆಯಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಯುಎಸ್ ಏರ್ ಫೋರ್ಸ್ ಅಕಾಡೆಮಿ, ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಮತ್ತು ಯುಎಸ್ ನೇವಲ್ ಟೆಸ್ಟ್ ಪೈಲಟ್ ಶಾಲೆಯ ಪದವೀಧರರಾದ 43 ವರ್ಷದ ರಾಜಾ ಚಾರಿ
ಈ ಪಟ್ಟಿಯಲ್ಲಿರುವ ಏಕೈಕ ಭಾರತೀಯ-ಅಮೇರಿಕನ್. ಈಗ ಆಯ್ಕೆಯಾಗಿರುವ 18 ಮಂದಿಯ ಪೈಕಿ ಬಹುತೇಕ ಮಂದಿ 30-40ರ ವಯೋಮಾನದವರು ಎಂದು ನಾಸಾ ಹೇಳಿದೆ.
7 ವರ್ಷ ಬಳಸಿಕೊಂಡು ಬೇರೆ ಮದ್ವೆಯಾಗಿದ್ದಾನೆ- ಸತ್ತುಹೋಗೋಣ ಎನಿಸುತ್ತಿದೆ, ಪ್ಲೀಸ್ ಏನಾದ್ರೂ ಪರಿಹಾರ ಹೇಳಿ…

ಫುಲ್​ಟೈಟ್​ ಆಗಿ ನಟನಿಂದ ನಡೀತು ಫೈಟ್​! ಹುಟ್ಟುಹಬ್ಬ ಆಚರಣೆಯನ್ನು ಪೋಸ್ಟ್​ ಮಾಡಿ ‘ಸಿಕ್ಕಬಿದ್ದ’

ಮುಗ್ಧ ರೈತರ ಹೆಸರಲ್ಲಿ ನಡೀತೀರೋ ಪ್ರತಿಭಟನೆಯ ಇನ್ನೊಂದು ಕರಾಳಮುಖ ಬಯಲು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − eleven =
Remember me
