ನವದೆಹಲಿ:ಪ್ರೀತಿಗೆ ಗಡಿಯ ಬಂಧವಿಲ್ಲ ಎನ್ನುವುದು ಎಲ್ಲರಿಗೂ ತಿಳಿದದ್ದೇ. ಎರಡು ದೇಶಗಳ ನಡುವಿನ ಪ್ರೇಮ ಕಥನಗಳೂ ಸಾಕಷ್ಟು ವರದಿಯಾಗಿವೆ. ಇಂಟರ್​ನೆಟ್​ನ ಈ ಯುಗದಲ್ಲಿ ಯಾವುದೋ ಮೂಲೆಗಳಲ್ಲಿ ಕುಳಿತಿರುವವರ ನಡುವೆ ಪ್ರೀತಿ ಚಿಗುರೊಡೆಯುವುದು, ಅದಕ್ಕಾಗಿ ಕಳ್ಳ ಮಾರ್ಗದಿಂದ ಗಡಿ ದಾಟಿ ಸಿಕ್ಕಿಬೀಳುವುದು, ಇಲ್ಲವೇ ಯುವತಿಯರು ಯುವಕನನ್ನು ಹುಡುಕಿಕೊಂಡು ಹೋಗಿ ಮೋಸ ಹೋಗುವುದು… ಇವೆಲ್ಲವೂ ಮಾಮೂಲು ಎನ್ನುವಷ್ಟರ ಮಟ್ಟಿಗೆ ಸುದ್ದಿಗಳಾಗುತ್ತಿವೆ.
ಆದರೆ ಈ ಪ್ರೇಮ ಕಥನ ಮಾತ್ರ ಸ್ವಲ್ಪ ವಿಭಿನ್ನ. ಇದು ಭಾರತ ಮತ್ತು ಪಾಕಿಸ್ತಾನದ ಪ್ರೇಮ ಕಥನ. ಇದರಲ್ಲೇನೂ ವಿಶೇಷವಿಲ್ಲ. ಆದರೆ ವಿಶೇಷ ಇರುವುದು ಇಲ್ಲಿ ಪ್ರೀತಿ ಉಂಟಾಗಿರುವುದು ಯುವತಿ ಮತ್ತು ಯುವತಿಯ ನಡುವೆ. ಒಬ್ಬರು ಭಾರತದವಳು, ಇನ್ನೊಬ್ಬಳು ಪಾಕಿಸ್ತಾನದವಳು. ಇವರಿಬ್ಬರ ಪರಿಚಯ ಪ್ರೀತಿಗೆ ತಿರುಗಿದೆ. ಇಬ್ಬರೂ ಸಲಿಂಗಕಾಮಿಗಳು ಎಂದು ತಿಳಿದ ತಕ್ಷಣ ಒಟ್ಟಿಗೇ ಇರುವ ಪಣ ತೊಟ್ಟಿದ್ದಾರೆ ಇವರಿಬ್ಬರೂ.

ಕೆಲ ವರ್ಷಗಳ ಹಿಂದಿನ ಇವರ ಪ್ರೇಮ ಕಥನ ಮತ್ತೆ ಸಾಮಾಜಿಕಜಾಲತಾಣದಲ್ಲಿ ಭಾರಿ ವೈರಲ್​ ಆಗುತ್ತಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳು ದಿನೇ ದಿನೇ ಕಗ್ಗಂಟಾಗುತ್ತಿರುವ ಈ ಹೊತ್ತಿನಲ್ಲಿ ಇವೆರಡು ದೇಶಗಳ ಅದರಲ್ಲಿಯೂ ಇಬ್ಬರು ಯುವತಿಯರ ನಡುವೆ ಪ್ರೇಮಾಂಕುರ ಆಗಿರುವ ಕಾರಣ, ಸುದ್ದಿ ಮತ್ತೆ ಮುನ್ನೆಲೆಗೆ ಬಂದಿದೆ.
ಅಂದ ಹಾಗೆ ಇದರಲ್ಲಿ ಭಾರತದವಳ ಹೆಸರು ಅಂಜಲಿ ಚಕ್ರ ಮತ್ತು ಪಾಕಿಸ್ತಾನದವಳು ಸೂಫಿ ಮಲ್ಲಿಕ್. ಒಬ್ಬಳು ಹಿಂದೂ, ಒಬ್ಬಳು ಮುಸ್ಲಿಂ. ಸೂಫಿಗಿಂತ ಮೊದಲು ಅಂಜಲಿ ಒಂದು ಹುಡುಗನ ಜೊತೆ ಸಂಬಂಧ ಹೊಂದಿದ್ದಳು. ಆದರೆ ಆತನ ಬಗ್ಗೆ ಆಕೆ ಅಷ್ಟು ಆಕರ್ಷಣೆಗೆ ಒಳಗಾಗಿರಲಿಲ್ಲ. ಅದಕ್ಕೆ ಕಾರಣ ತಿಳಿದದ್ದು ಇವಳು ಸೂಫಿಯನ್ನು ಭೇಟಿಯಾದಾಗ.
ಇಬ್ಬರೂ ಮೊದಲು ಭೇಟಿಯಾದದ್ದು ನ್ಯೂಯಾರ್ಕ್‌ನಲ್ಲಿ. ಮೊದಲು ಸ್ನೇಹಿತರಂತೆ ಇದ್ದ ಇಬ್ಬರಿಗೂ ಪರಸ್ಪರ ಆಕರ್ಷಣೆ ಶುರುವಾಗಿ ಅದು ಪ್ರೇಮಕ್ಕೆ ತಿರುಗಿದೆ. ಇಬ್ಬರೂ ಡೇಟಿಂಗ್​ ಶುರು ಮಾಡಿದ್ದಾರೆ. ಫೋಟೋ ಶೇರ್​ ಮಾಡಿಕೊಂಡಿದ್ದಾರೆ. ತಮ್ಮ ಸಂಬಂಧವನ್ನು ಸಾರ್ವಜನಿಕಗೊಳಿಸಿರುವ ಈ ಇಬ್ಬರು, ತಮ್ಮ ನಡುವಿನ ಎಲ್ಲಾ ವಿಷಯಗಳನ್ನು ಮುಕ್ತವಾಗಿ ಮಾತನಾಡಿದ್ದಾರೆ.(ಏಜೆನ್ಸೀಸ್​)
ನಿಮ್ಮ ಎಕ್ಸ್​ಗಳ ಜತೆ ಮಂಚಕ್ಕೆ ಹೋಗುವಿರಾ ಎಂದು ನಟಿಯರನ್ನು ಪ್ರಶ್ನಿಸಿದ ಕರಣ್​: ಸಾರಾ-ಜಾಹ್ನವಿ ಉತ್ತರ ಹೀಗಿತ್ತು!

ಅಮ್ಮ, ಮಗಳ ಜತೆಗೆ ಫ್ಲ್ಯಾಟ್​ನಲ್ಲಿ ಮಹಿಳಾ ಕಾನ್​ಸ್ಟೆಬಲ್​ ​ ನಿಗೂಢ ಸಾವು- ಕೊಲೆ ಶಂಕೆ

ವಂಚನೆ ಕೇಸ್​ನಲ್ಲಿ ಮಾಜಿ ಶಾಸಕ ಜೈಲಲ್ಲಿ​, ಪತ್ನಿಗೆ ಜಾಮೀನು: ಈಗ ಗ್ಯಾಂಗ್​ರೇಪ್​ ಕೇಸ್​ನಲ್ಲಿ ಸಿಕ್ಕಿಬಿದ್ದ ಮಗ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + sixteen =
Remember me
