ಜಕಾರ್ತ:ಕರೊನಾ ರೋಗಿಗಳು ಪ್ರಯಾಣಿಸಲು ಅನುಮತಿ ನೀಡದ ಕಾರಣ ವ್ಯಕ್ತಿಯೋರ್ವ ತನ್ನ ಹೆಂಡತಿಯ ವೇಷ ಧರಿಸಿಕೊಂಡು ವಿಮಾನವೇರಿದ್ದು, ಇನ್ನೇನು ತಲುಪಬೇಕಿದ್ದ ಊರನ್ನು ಸೇರುವವನಿದ್ದ. ಆದರೆ ಆತ ಮಾಡಿದ ಒಂದೇ ಒಂದು ತಪ್ಪಿನಿಂದ ವಿಮಾನ ಲ್ಯಾಂಡ್​ ಆದ ಕೂಡಲೇ ಪೋಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಇಂಥದ್ದೊಂದು ಘಟನೆ ನಡೆದಿರುವುದು ಇಂಡೋನೇಷ್ಯಾದಲ್ಲಿ. ಅಡಿಯಿಂದ ಮುಡಿಯವರೆಗೂ ಕಾಣಿಸದಂತೆ ಬುರ್ಖಾ ಧರಿಸಿದ ಈ ವ್ಯಕ್ತಿ ಜಕಾರ್ತಾದಿಂದ ಟೆರ್ನೇಟ್​ಗೆ ಪ್ರಯಾಣಿಸುತ್ತಿದ್ದ. ಆದರೆ ಕರೊನಾ ಸೋಂಕು ಇದ್ದ ಕಾರಣ, ವಿಮಾನದಲ್ಲಿ ಬಿಡುವುದಿಲ್ಲ ಎಂದು ತಿಳಿದಿತ್ತು. ಆದರೆ ಅವರಿಗೆ ಕರೊನಾ ನೆಗೆಟಿವ್​ ವರದಿ ಸಿಕ್ಕಿರಲಿಲ್ಲ.
ಈ ಕಾರಣದಿಂದ ಆತ ಒಂದು ಪ್ಲ್ಯಾನ್​ ಮಾಡಿಯೇ ಬಿಟ್ಟ. ಅದೇನೆಂದರೆ ಬುರ್ಖಾ ಧರಿಸಿ ಪತ್ನಿಯ ಗುರುತಿನ ಚೀಟಿ ಹಾಗೂ ಆಕೆಯ ಕೋವಿಡ್​ ನೆಗೆಟಿವ್​ ರಿಪೋರ್ಟ್​​ ಹಿಡಿದು ಹೋಗಿದ್ದಾನೆ. ಚೆಕಿಂಗ್​ ಪಾಯಿಂಟ್​ನಲ್ಲಿ ಅಧಿಕಾರಿಗಳು ಕೂಡ ಆತ ಹೆಣ್ಣು ಎಂದುಕೊಂಡು ಮುಂದಕ್ಕೆ ಬಿಟ್ಟಿದ್ದಾರೆ. ವಿಮಾನವನ್ನೂ ನಿಶ್ಚಿಂತೆಯಿಂದ ಏರಿದ್ದಾನೆ.
ಇನ್ನೇನು ವಿಮಾನ ಟೆರ್ನೇಟ್​​ಗೆ ಸೇರಲಿದೆ ಎಂದಾಗ ಬಾತ್​ರೂಂಗೆ ಹೋಗಿ ವೇಷ ಬದಲಿಸಿ ಪುರುಷನಂತೆ ಹೊರಬಂದಿದ್ದಾನೆ. ಇದನ್ನು ವಿಮಾನ ಸಿಬ್ಬಂದಿಯೋರ್ವ ನೋಡಿಬಿಟ್ಟಿದ್ದಾನೆ. ಕುಡಲೇ ವಿಮಾನ ನಿಲ್ದಾಣಕ್ಕೆ ಮಾಹಿತಿ ನೀಡಿದ್ದಾನೆ. ಇದರಿಂದ ಎಚ್ಚೆತ್ತ ಪೊಲೀಸರು ಆತ ವಿಮಾನದಿಂದ ಇಳಿಯುತ್ತಿದ್ದಂತೆಯೇ ಬಂಧಿಸಿದ್ದಾರೆ. ಬಳಿಕ ಕರೊನಾ ಟೆಸ್ಟ್​ ಮಾಡಿಸಿದಾಗ ಪಾಸಿಟಿವ್​ ಬಂದ ಕಾರಣ ಸದ್ಯ ಆತನನ್ನು ಕ್ವಾರಂಟೈನ್​ ಮಾಡಿದ್ದಾರೆ.
ಬ್ಲೂ ಫಿಲ್ಮ್​ ವಿಚಾರ ಶಿಲ್ಪಾಗೆ ಗೊತ್ತಿತ್ತಾ? ಪೊಲೀಸರಿಂದ ವಿಚಾರಣೆ- ಕುಂದ್ರಾಗೆ 27ರವರೆಗೆ ಜೈಲು

ಕರೊನಾ ರಹಸ್ಯ ಹುಡುಕಲು ಮುಂದಾದ ವಿಶ್ವ ಆರೋಗ್ಯ ಸಂಸ್ಥೆ: ಚೀನಾ ಗರಂ- ಏನು ಹೇಳಿದೆ ನೋಡಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one + 1 =
Remember me
