ಲಖನೌ:ಮೊಬೈಲ್​ಫೋನ್​ ಬ್ಯಾಟರಿ ಬ್ಲಾಸ್ಟ್​ ಆಗಿ ಎಂಟು ತಿಂಗಳ ಮಗುವಿನ ಪ್ರಾಣ ಹೋದ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ. ಸೋಲಾರ್ ಪ್ಯಾನೆಲ್ ಮೂಲಕ ಚಾರ್ಜಿಂಗ್​ ಮಾಡುತ್ತಿದ್ದ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಎಂಟು ತಿಂಗಳ ಮಗು ನೇಹಾ ಪ್ರಾಣ ಕಳೆದುಕೊಂಡಿದ್ದಾಳೆ.
ಮಗುವನ್ನು ಮಂಚದ ಮೇಲೆ ಮಲಗಿಸಿ ತಾಯಿ ಕುಸುಮ ಅವರು ಬಟ್ಟೆ ತೊಳೆಯಲು ಹೋಗಿದ್ದರು. ಈ ಸಂದರ್ಭದಲ್ಲಿ ಅವರು, ಮೊಬೈಲ್‍ ಫೋನ್​ನನ್ನು ಚಾರ್ಜ್‍ಗೆ ಹಾಕಿಟ್ಟು ಹೋಗಿದ್ದರು. ಸೋಲಾರ್​ ಪ್ಯಾನೆಲ್​ ಮೂಲಕ ಅವರು ಚಾರ್ಜಿಂಗ್​ ಮಾಡುತ್ತಿದ್ದರು.
ಬಟ್ಟೆ ತೊಳೆಯಲು ಹೋದ ಸ್ವಲ್ಪ ಸಮಯದಲ್ಲಿಯೇ ಮಗು ಜೋರಾಗಿ ಕಿರುಚುವುದನ್ನು ಕೇಳಿದ ಕುಸುಮ ಓಡಿ ಬಂದಿದ್ದಾರೆ. ಅದಾಗಲೇ ಮಗು ನೇಹಾ ಸುಟ್ಟ ಗಾಯಗಳಿಂದ ನರಳುತ್ತಿದ್ದಳು. ಬೆನ್ನು, ಕೈ ಎಲ್ಲವೂ ಸಂಪೂರ್ಣ ಸುಟ್ಟು ಹೋಗಿತ್ತು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಪ್ರಯೋಜನ ಆಗಲಿಲ್ಲ. ಮಗು ಪ್ರಾಣ ಬಿಟ್ಟಿದೆ!
ಈ ಮೊಬೈಲ್‍ನ್ನು 6 ತಿಂಗಳ ಹಿಂದೆ ಖರೀದಿಸಲಾಗಿತ್ತು. ಚಾರ್ಜ್ ಮಾಡಲು ಪ್ಲಗ್‍ಗೆ ಹಾಕಿಟ್ಟಾಗ ಅದು ಓವರ್​ ಚಾರ್ಜ್​ ಆಗಿ ಹೀಗೆ ಆಗಿದೆ ಎನ್ನಲಾಗಿದೆ. ಮಗುವಿನ ಅಪ್ಪ ಸುನೀಲ್​ ಕುಮಾರ್​ ಕೂಲಿ ಕಾರ್ಮಿಕರಾಗಿದ್ದು ಮನೆಯಲ್ಲಿನ ಬೆಳಕು ಹಾಗೂ ಮೊಬೈಲ್​ ಚಾರ್ಜ್​ಗಾಗಿ ಸೋಲಾರ್​ ಪ್ಯಾನೆಲ್​ ಖರೀದಿಸಿದ್ದರು.(ಏಜೆನ್ಸೀಸ್​)
ಪ್ರಧಾನಿ ಮೋದಿಗೆ ಬಂದ ಉಡುಗೊರೆ ಹರಾಜಿಗೆ- ಪಾಲ್ಗೊಳ್ಳುವುದು ಹೇಗೆ? ಇದರ ಫುಲ್​ ಡಿಟೇಲ್ಸ್​ ಇಲ್ಲಿದೆ…
ಸಿಡ್ನಿಯಲ್ಲಿ ಸಿಕ್ಕಿತು ಎಲಿಜಬೆತ್​ ಬರೆದ ನಿಗೂಢ ಪತ್ರ: ಇದರ ರಹಸ್ಯ ಅರಿಯಲು ಇನ್ನೂ 63 ವರ್ಷ ಕಾಯಬೇಕು!
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:eleven + 20 =
Remember me
