ನವದೆಹಲಿ:ಹೆಜ್ಜೆಹೆಜ್ಜೆಗೂ ಆತಂಕ ಸೃಷ್ಟಿಸುತ್ತಿರುವ ಕರೊನಾದಿಂದ ಆಗುತ್ತಿರುವ ಅನಾಹುತಗಳು ಅಷ್ಟಿಷ್ಟಲ್ಲ. ಕರೊನಾವನ್ನು ಹೊಡೆದೋಡಿಸಲು ತಜ್ಱರೆಲ್ಲರೂ ಸೇರಿ ವರ್ಷದಿಂದಲೂ ಏನೆಲ್ಲಾ ಸರ್ಕಸ್​ ಮಾಡುತ್ತಿದ್ದರೂ ಅದು ಸಂಪೂರ್ಣವಾಗಿ ಯಶಸ್ಸು ಕಂಡಿಲ್ಲ.
ಕರೊನಾ ಲಸಿಕೆ ಕಂಡುಹಿಡಿದರೂ, ಲಸಿಕೆ ಹಾಕಿಸಿಕೊಂಡ ನಂತರ ಕರೊನಾ ವೈರಸ್​ ಹತ್ತಿರ ಸುಳಿಯುವುದಿಲ್ಲ ಎಂಬ ಮಾತು ಹುಸಿಯಾಗತೊಡಗಿದೆ. ಲಸಿಕೆ ಹಾಕಿಸಿಕೊಂಡವರಿಗೂ ಸೋಂಕು ತಗುಲಿ ಅನಾಹುತವನ್ನೇ ಸೃಷ್ಟಿಸಿರುವ ಘಟನೆಗಳು ಅಲ್ಲಲ್ಲಿ ವರದಿಯಾಗುತ್ತಿವೆ.
ಇಡೀ ವೈದ್ಯಕೀಯ ಲೋಕವೇ ಈ ಮಹಾಮಾರಿಯ ಹಿಂದೆ ಬಿದ್ದಿರುವಾಗ ಇಲ್ಲೊಬ್ಬ ಮಹಿಳೆ ಮಾತ್ರ ಕರೊನಾಕ್ಕೆ ಒಂದು ಐಡಿಯಾ ಕೊಟ್ಟು, ಸಕತ್​ ಫೇಮಸ್​ ಆಗಿದ್ದಾಳೆ.
#WATCHDelhi: A woman, who has come to purchase liquor, at a shop in Shivpuri Geeta Colony, says, "…Injection fayda nahi karega, ye alcohol fayda karegi…Mujhe dawaion se asar nahi hoga, peg se asar hoga…"pic.twitter.com/iat5N9vdFZ
— ANI (@ANI)April 19, 2021

ಅಷ್ಟಕ್ಕೂ ಈ ಮಹಿಳೆ ಹೇಳಿದ್ದೇನೆಂದರೆ, ಇಂಜೆಕ್ಷನ್​ನಿಂದ ಯಾವುದೇ ಲಾಭವಿಲ್ಲ. ಲಸಿಕೆ ಹಾಕಿಸಿಕೊಂಡರೆ ಕರೊನಾ ಹೋಗಲ್ಲ. ಆದರೆ ಇದನ್ನೊಮ್ಮೆ ಏರಿಸಿ ನೋಡಿ ಎಂದು ಮದ್ಯದ ಬಾಟಲಿಯನ್ನು ತೋರಿಸಿದ್ದಾಳೆ. ದೆಹಲಿಯ ಶಿವಪುರಿ ಗೀತಾ ಕಾಲೋನಿಯಲ್ಲಿ ಇರುವ ಮದ್ಯದಂಗಡಿಗೆ ಮದ್ಯ ಖರೀದಿಗೆ ಬಂದಿದ್ದ ಈ ಮಹಿಳೆಯನ್ನು ಮಾತನಾಡಿದಾಗ, ನನಗೆ ಬೇರೆ ಯಾವುದೇ ಔಷಧಗಳಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ಪ್ರಯೋಜನ ಆಗಬೇಕೆಂದರೆ ಇದೊಂದು ಔಷಧ ಬೇಕು ಎಂದಿದ್ದಾರೆ. ಈಕೆ ಆಡಿದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕತ್​ ವೈರಲ್​ ಆಗುತ್ತಿದೆ.
ಸಚಿವ ಸುರೇಶ್​ ಕುಮಾರ್​ ಆಪ್ತ ಸಹಾಯಕ ರಮೇಶ್​ ಕರೊನಾಕ್ಕೆ ಬಲಿ

ಸಾವಿನ ದವಡೆಗೆ ನೂಕುವ ಕ್ರಿಮಿ…. ಮತ್ತೆ ಸುದ್ದಿಯಲ್ಲಿ ಬಿಗ್​ಬಾಸ್​ ಸ್ಪರ್ಧಿ ಚೈತ್ರಾ ಕೋಟೂರು

ಇನ್ನೂ ಸುಂದರಿಯಾಗಲು ಚಿಕಿತ್ಸೆ ಪಡೆದ ಖ್ಯಾತ ನಟಿ ಕನ್ನಡಿ ನೋಡಿದಾಗ ಮೂರ್ಛೆ ಹೋದಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − five =
Remember me
