ನವದೆಹಲಿ:ಟಿ.ವಿ, ಸಿನಿಮಾ, ವೆಬ್​ಸಿರೀಸ್​ಗಳಲ್ಲಿ ಬರುವ ಅಪರಾಧ ದೃಶ್ಯಗಳನ್ನು ನೋಡಿ ಹಲವಾರು ಯುವಕರು ಇದಾಗಲೇ ಅಪರಾಧ ಲೋಕಕ್ಕೆ ಇಳಿದಿರುವುದು ಹೊಸ ವಿಷಯವೇನಲ್ಲ. ಅದರಲ್ಲಿಯೂ ಇತ್ತೀಚಿನ ಹಲವು ಸಿನಿಮಾ ನಾಯಕರು ಮಾಡುವ ಕೆಟ್ಟ ಪಾತ್ರಗಳಿಗೆ ಮರುಳಾಗಿ ಅವರ ಅಭಿಮಾನಿಗಳು ಕೂಡ ಕೆಟ್ಟ ಹಾದಿಯನ್ನು ಹಿಡಿಯುತ್ತಿರುವುದೂ ಹೊಸ ವಿಷಯವೇನಲ್ಲ.
ಅಂಥದ್ದೇ ಒಂದು ಅಪರಾಧ ಕೃತ್ಯ ಮಾಡಹೋಗಿ 22 ವರ್ಷದ ಸಹೋದರರಿಬ್ಬರು ಪೊಲೀಸರ ಕೈಗೆ ಸಿಕ್ಕುಬಿದ್ದಿದ್ದಾರೆ. ಸುಲಭದಲ್ಲಿ ಹಣ ಮಾಡಲು ಇರಲು ಮಾರ್ಗಗಳೇನು ಎಂಬ ಬಗ್ಗೆ ಸೋದರಸಂಬಂಧಿಗಳಾದ ನದೀಮ್ ಮತ್ತು ಅಫ್ತಾಬ್ ಯೋಚನೆ ಮಾಡುತ್ತಿದ್ದಾಗಲೇ ಅವರಿಗೆ ಕಂಡುಬಂದದ್ದು ಕ್ರೈ ಸಂಬಂಧಿತ ವೆಬ್​ಸೈಟ್​ನಲ್ಲಿ ಇರುವ ಸರಣಿ.
ಅದರಂತೆಯೇ ಯೋಚನೆ ಮಾಡಿದ ಇವರು ಖತರ್ನಾಕ್​ ಪ್ಲ್ಯಾನ್​ ಹಾಕಿಕೊಂಡಿದ್ದಾರೆ. ಅದೇನೆಂದರೆ, ನದೀಮ್​ನನ್ನು ಅಪಹರಣ ಮಾಡುವ ಪ್ಲ್ಯಾನ್​ ಮಾಡಿದ್ದಾನೆ ಅಫ್ತಾಬ್​. ಅದರಂತೆ ನದೀಮ್​ನನ್ನು ಯಾರೋ ಅಪಹರಿಸಿರುವುದಾಗಿ ಆತನ ಪಾಲಕರಿಗೆ ಕರೆ ಮಾಡಿ ದುಡ್ಡನ್ನು ಕೊಡುವಂತೆ ಹೇಳಿದ್ದಾನೆ.
ಎರಡು ಲಕ್ಷ ರೂಪಾಯಿ ಕೊಟ್ಟರೆ ಮಾತ್ರ ಬಿಡುಗಡೆ ಮಾಡುತ್ತೇನೆ. ಈ ವಿಷಯ ಪೊಲಿಸರಿಗೆ ತಿಳಿಸಿದರೆ ಮಗನ ಕೊಲೆಯಾಗುತ್ತದೆ ಎಂದಿದ್ದಾನೆ. ಆದರೆ ಈತನ ಪಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಸಿಸಿಟಿವಿ ದೃಶ್ಯಾವಳಿಯನ್ನು ಆಧರಿಸಿ ಹೋದಾಗ ಇಡೀ ಪ್ರಕರಣ ಬೆಳಕಿಗೆ ಬಂದಿದೆ.ನಂತರ ಇಬ್ಬರೂ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಸದ್ಯ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಕ್ತನಾಳದ ತುಂಬೆಲ್ಲಾ ಬೆಳೆಯಿತು ವಿಚಿತ್ರ ‘ಮ್ಯಾಜಿಕ್‌’ ಅಣಬೆಗಳು! ಚಿಕಿತ್ಸೆ ನೀಡಿದ ವೈದ್ಯರೇ ಸುಸ್ತು!

ಅತಿದೊಡ್ಡ ಮಾರುಕಟ್ಟೆಯಿಂದ ಹೊರಬಿತ್ತು ಹಕ್ಕಿಜ್ವರದ ರಿಪೋರ್ಟ್‌- ಚಿಕನ್‌ ಪ್ರಿಯರಿಗೆ ಸಿಕ್ತು ಗುಡ್‌ನ್ಯೂಸ್‌

ಮದ್ವೆಯಾಗುತ್ತಾನೆಂದು ನಂಬಿ ಎಲ್ಲವನ್ನೂ ಅರ್ಪಿಸಿಬಿಟ್ಟೆ- ಈಗ ಬೇರೆಯವಳನ್ನು ಕಟ್ಟಿಕೊಂಡಿದ್ದಾನೆ: ನಾನೇನು ಮಾಡಲಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 10 =
Remember me
