ಮುಂಬೈ:ಉದ್ಯಮಿ, ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಬ್ಲೂಫಿಲ್ಮ್ಂ ಕೇಸ್‌ನಲ್ಲಿ ಸಿಲುಕಿ ಜೈಲುಪಾಲಾಗಿದ್ದರೆ, ಶಿಲ್ಪಾ ಶೆಟ್ಟಿ ವಿರುದ್ಧವೂ ಸಾಕಷ್ಟು ಇಲ್ಲಸಲ್ಲದ ಆರೋಪಗಳು ಬರುತ್ತಿವೆ. ಇವರ ಮಧ್ಯೆ ಅವರ 9 ವರ್ಷದ ಮಗ ವಿಹಾನ್ ಕುಂದ್ರಾ ಕಂಗಾಲಾಗಿ ಹೋಗಿದ್ದಾನೆ.
ಈ ಬಗ್ಗೆ ಏನನ್ನೂ ಮಾತನಾಡದ ಮಗ, ಇನ್‌ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್‌ ಮಾಡಿದ್ದಾನೆ. ಇದರಲ್ಲಿ ಆತ ತನ್ನ ಅಮ್ಮ ಶಿಲ್ಪಾರನ್ನು ಅಪ್ಪಿಕೊಂಡಿರುವ ಫೋಟೋ ಇದೆ. ಈ ಪೋಸ್ಟ್‌ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ತಾಯಿಯನ್ನು ತಬ್ಬಿಕೊಂಡಿರುವ 3 ಚಿತ್ರವನ್ನು ವಿಹಾನ್ ಶೇರ್ ಮಾಡಿದ್ದಾರೆ, ಇದರ ಜತೆಗೆ ಈ ಸಮಯವೂ ಕಳೆದು ಹೋಗುತ್ತದೆ ಎಂದು ಬರೆದುಕೊಂಡಿದ್ದಾನೆ.

ಜತೆಗೆ ತನ್ನ ಅಮ್ಮ ಶಿಲ್ಪಾ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿರುವ ಹೇಳಿಕೆಯನ್ನು ವಿಹಾನ್‌ ಲಿಂಕ್‌ ಮಾಡಿದ್ದಾನೆ. ಕಾನೂನಿನ ಅನ್ವಯ ಎಲ್ಲಾ ಪ್ರಕ್ರಿಯೆ ನಡೆಯುತ್ತಿದೆ. ದಯವಿಟ್ಟು ಅಲ್ಲಿಯವರೆಗೆ ನಮ್ಮ ಕುಟುಂಬವನ್ನು ಗೌರವಿಸಿ, ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಅರೆಬೆಂದ ಮಾಹಿತಿಯ ಬಗ್ಗೆ ಪ್ರತಿಕ್ರಿಯಿಸಬೇಡಿ. ಅನೇಕ ಜನರು ನನ್ನನ್ನು ಟ್ರೋಲ್ ಮಾಡಿದ್ದಾರೆ ಅನೇಕರು ನನ್ನನ್ನು ಮಾತ್ರವಲ್ಲ ನನ್ನ ಕುಟುಂಬವನ್ನೂ ಪ್ರಶ್ನಿಸಿದ್ದಾರೆ. ದಯವಿಟ್ಟು ಹೀಗೆ ಮಾಡಬೇಡಿ ಎಂದು ಶಿಲ್ಪಾ ಶೆಟ್ಟಿ ಬರೆದುಕೊಂಡಿದ್ದರು. ಈ ಪೋಸ್ಟ್‌ ಅನ್ನು ವಿಹಾನ್‌ ಶೇರ್‌ ಮಾಡಿಕೊಂಡಿದ್ದಾನೆ.
ರಾಜ್ ಕುಂದ್ರಾ ಅವರನ್ನು ಜುಲೈ 19 ರಂದು ಬಂಧಿಸಲಾಗಿದ್ದು, ಜುಲೈ 27ರಿಂದ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿದೆ. ತೀವ್ರ ತನಿಖೆ ನಡೆಯುತ್ತಿದೆ.
A post shared by Viaan Raj Kundra (@viaanrajkundra)

ಕುಂದ್ರಾರ ಆದಾಯ ಮೂಲ ಯಾವ್ದು? ಅಂಥದ್ದೇನು ಕಂಡು ಅವ್ರನ್ನ ಮದ್ವೆಯಾಗಿದ್ರಿ ಎಂದಾಗ ಶಿಲ್ಪಾ ಹೇಳಿದ್ದೇನು?

ಅಳ್ತಾರೆ, ಗಂಡನ ಜತೆ ಜಗಳವಾಡ್ತಾರೆ ಅನ್ನೋ ಸುದ್ದಿ ಮಾನಹಾನಿ ಆಗತ್ತೇನ್ರಿ? ಶಿಲ್ಪಾ ವಿರುದ್ಧ ಕೋರ್ಟ್​ ಗರಂ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
