ನವದೆಹಲಿ:ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಇಬ್ಬರೂ ಮಕ್ಕಳ ಇನ್‌ಸ್ಟಾಗ್ರಾಂ ಖಾತೆ ಹ್ಯಾಕ್‌ ಆಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಖುದ್ದು ಪ್ರಿಯಾಂಕಾ ಅವರೇ ಗಂಭೀರ ಆರೋಪ ಮಾಡಿದ್ದು, ಇದಕ್ಕೆ ನೇರವಾಗಿ ಕೇಂದ್ರ ಸರ್ಕಾರ, ಉತ್ತರ ಪ್ರದೇಶದ ಯೋಗಿ ಸರ್ಕಾರವೇ ಕಾರಣ ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರಿಯಾಂಕಾ ಅವರ ಮಗ ರೆಹಾನ್​ ವಾದ್ರಾ (20) ಹಾಗೂ ಮಗಳು ಮಿರಾಯಾ ವಾದ್ರಾ (18) ಇವರಿಬ್ಬರ ಇನ್‌ಸ್ಟಾಗ್ರಾಂ ಖಾತೆ ಹ್ಯಾಕ್‌ ಆಗಿದೆ ಎನ್ನುವುದು ಪ್ರಿಯಾಂಕಾ ಆರೋಪ. ಹ್ಯಾಕಿಂಗ್‌ ಆಗಿರುವ ಬಗೆಗಿನ ಆರೋಪವನ್ನು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ಗಂಭೀರವಾಗಿ ಪರಿಗಣಿಸಿದ್ದು, ಇದರ ಸತ್ಯಾಸತ್ಯತೆ ತಿಳಿಯಲು ತನಿಖೆಗೆ ಆದೇಶಿಸಿದೆ.
ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಮಾಡಿರುವ ಫೋನ್ ಕದ್ದಾಲಿಕೆ ಆರೋಪಗಳನ್ನು ಈ ಸಂದರ್ಭದಲ್ಲಿ ಅವರು ಉಲ್ಲೇಖ ಮಾಡಿದ್ದರು. ಅದಕ್ಕೂ ಹ್ಯಾಕಿಂಗ್‌ಗೂ ತಾಳೆ ಹಾಕಿದ್ದ ಪ್ರಿಯಾಂಕಾ, ‘ಅವರು ಫೋನ್ ಟ್ಯಾಪಿಂಗ್ ಮಾಡುವುದು ಮಾತ್ರವಲ್ಲದೆ ನನ್ನ ಮಕ್ಕಳ ಇನ್‌ಸ್ಟಾಗ್ರಾಂ ಖಾತೆಗಳನ್ನು ಸಹ ಹ್ಯಾಕ್ ಮಾಡುತ್ತಿದ್ದಾರೆ. ಅವರಿಗೆ ಬೇರೆ ಕೆಲಸವಿಲ್ಲವೆ’ ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಉತ್ತರ ಪ್ರದೇಶದಲ್ಲಿ ಭಾಷಣ ಮಾಡಿದ ಪ್ರಿಯಾಂಕಾ ಹೆಣ್ಣುಮಕ್ಕಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಅಮಿತಾಭ್ ಬಚ್ಚನ್ ಮತ್ತು ಶಶಿ ಕಪೂರ್ ಸಹೋದರರಾಗಿ ನಟಿಸಿರುವ ‘ದೀವಾರ್’ ಚಿತ್ರದ ಸಂಭಾಷಣೆಯನ್ನು ಉಲ್ಲೇಖಿಸಿ, ‘ಉತ್ತರ ಪ್ರದೇಶದ ಸಹೋದರಿಯರು ರಾಜಕೀಯದಲ್ಲಿ ಬದಲಾವಣೆ ತರುತ್ತಾರೆ, ನಮ್ಮನ್ನು ಗೆಲ್ಲಿಸುತ್ತಾರೆ’ ಎಂದಿದ್ದಾರೆ.
ದೀವಾರ್‌ ಚಿತ್ರದಲ್ಲಿ ಅಮಿತಾಭ್ ಬಚ್ಚನ್‌, ಶಶಿ ಕಪೂರ್ ಅವರಿಗೆ, ‘ಮೇರೆ ಪಾಸ್ ಗಾಡಿ ಹೈ, ಬಂಗ್ಲೆ ಹೈ, ಯೇ ಹೈ, ವೋ ಹೈ, ತುಮ್ಹಾರೆ ಪಾಸ್‌ ಕ್ಯಾ ಹೈ (ನನ್ನ ಹತ್ತಿರ ಗಾಡಿ, ಬಂಗಲೆ ಅದು ಇದು ಎಲ್ಲವೂ ಇವೆ, ನಿನ್ನ ಹತ್ತಿರ ಏನಿದೆ?) ಎಂದು ಕೇಳುತ್ತಾರೆ. ಆದರೆ ಶಶಿ ಕಪೂರ್ ‘ಮೇರೆ ಪಾಸ್ ಮಾ ಹೈ‘ (ನನ್ನ ಬಳಿ ತಾಯಿ ಇದ್ದಾರೆ) ಎಂದು ಹೇಳುತ್ತಾರೆ. ಇದನ್ನು ಉಲ್ಲೇಖಿಸಿದ ಪ್ರಿಯಾಂಕಾ ಇದೀಗ ಮೇರೆ ಪಾಸ್‌ ಬೆಹೆನೇ ಹೈ (ನನ್ನ ಬಳಿ ಸಹೋದರಿಯರು ಇದ್ದಾರೆ) ಎಂದು ಹೇಳುತ್ತೇನೆ ಎಂದು ಉತ್ತರ ಪ್ರದೇಶದ ಮಹಿಳೆಯರನ್ನು ಮತವನ್ನು ಕೋರಿದ್ದಾರೆ.
‘ಮಿಲನ’ ಬೆಡಗಿ ಪಾರ್ವತಿಗೆ ಕಿರುಕುಳ: ಆಹಾರ ಪೊಟ್ಟಣ ತರುತ್ತಿದ್ದವ ಕೊನೆಗೂ ಸಿಕ್ಕಬಿದ್ದ!

ಭಾವಿ ಪತ್ನಿ ವೈಯಾರದಿಂದ ಕೊಟ್ಟ ಚಹ ಕುಡಿದ: ಕೊನೆಗೆ ಆಕೆಯ ತಂಗಿಗೆ ತಾಳಿ ಕಟ್ಟಿದ! ಹೀಗೊಂದು ಮದುವೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
