ನವದೆಹಲಿ:ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಈ ಶುಭ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಹಿಳಾ ಶಕ್ತಿಗೆ ನಮನ ಸಲ್ಲಿಸಿದ್ದಾರೆ.
ಮಹಿಳಾ ದಿನದಂದು ನಮ್ಮ ನಾರಿ ಶಕ್ತಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ಮಹಿಳೆಯರಿಗೆ ನಾನು ವಂದಿಸುತ್ತೇನೆ. ಆರ್ಥಿಕ ಸೇರ್ಪಡೆಯಿಂದ ಸಾಮಾಜಿಕ ಭದ್ರತೆ, ಗುಣಮಟ್ಟದ ಆರೋಗ್ಯ ಸೇವೆಯಿಂದ ವಸತಿ, ಶಿಕ್ಷಣದಿಂದ ಉದ್ಯಮಶೀಲತೆಗೆ ನಾರಿ ಶಕ್ತಿ ಭಾರತವನ್ನು ಮುಂಚೂಣಿಯಲ್ಲಿಡಲು ಹಲವು ಪ್ರಯತ್ನಗಳನ್ನು ಮಾಡಿದೆ. ಮುಂದಿನ ದಿನಗಳಲ್ಲಿ ಈ ಪ್ರಯತ್ನಗಳು ಇನ್ನೂ ಹೆಚ್ಚಿನ ಹುರುಪಿನೊಂದಿಗೆ ಮುಂದುವರಿಯಲಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಇದೇ ವೇಳೆ, ಮನ್​ ಕೀ ಬಾತ್​ ರೇಡಿಯೋ ಕಾರ್ಯಕ್ರಮದಲ್ಲಿ ಈ ಹಿಂದೆ ಮಹಿಳಾ ಶಕ್ತಿಗಳ ಕುರಿತು ತಾವು ಆಡಿರುವ ಮಾತುಗಳ ವಿಡಿಯೋವನ್ನು ಟ್ವಿಟರ್​ನಲ್ಲಿ ಪ್ರಧಾನಿ ಶೇರ್​ ಮಾಡಿಕೊಂಡಿದ್ದಾರೆ. ’
ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಹಿಳೆಯರನ್ನು ಶ್ಲಾಘಿಸುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಮನ್ ಕಿ ಬಾತ್ ಕಾರ್ಯಕ್ರಮದ ವಿವಿಧ ಸಂಚಿಕೆಗಳಲ್ಲಿ ನಾವು ಮಹಿಳಾ ಸಬಲೀಕರಣದ ವಿವಿಧ ಅಂಶಗಳನ್ನು ತೋರಿಸಿದ್ದೇವೆ. ತಳಮಟ್ಟದಿಂದ ಮಹಿಳೆಯರನ್ನು ಪ್ರೇರೇಪಿಸುವ ಜೀವನ ಪಯಣವನ್ನು ಪ್ರದರ್ಶಿಸಿದ್ದೇವೆ. ಮನ್ ಕಿ ಬಾತ್ ಕಾರ್ಯಕ್ರಮ ನಾರಿ ಶಕ್ತಿಯ ಸಂಭ್ರಮವನ್ನು ಆಚರಿಸಿರುವ ವೀಡಿಯೋ ಇಲ್ಲಿದೆ ಎಂದು ಅವರು ಹೇಳಿದ್ದಾರೆ.
ನಮ್ಮ ಸರ್ಕಾರ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದೆ. ಇದಕ್ಕಾಗಿ ಮಹಿಳೆಯರಿಗೆ ಘನತೆ ಹಾಗೂ ಅವಕಾಶಗಳನ್ನೂ ನೀಡಿದೆ ಎಂದು ಪ್ರಧಾನಿ ಈ ಸಂದರ್ಭದಲ್ಲಿ ಹೇಳಿದ್ದಾರೆ.
ಇಲ್ಲಿದೆ ಪ್ರಧಾನಿಯವರು ಶೇರ್​ ಮಾಡಿಕೊಂಡಿರುವ ಟ್ವೀಟ್​:
During the various#MannKiBaatepisodes, we have showcased different aspects of women empowerment and highlighted the life journeys of inspiring women who have brought grassroot level changes.
Here is a video that highlights how ‘Mann Ki Baat’ has celebrated our Nari Shakti….pic.twitter.com/wIo6kHC234
— Narendra Modi (@narendramodi)March 8, 2022

ಬೆಕ್ಕು ತಾನೆ? ಕಚ್ಚಿದರೆ ಏನಾಗುವುದಿಲ್ಲ ಎಂಬ ನಿರ್ಲಕ್ಷ್ಯ ಬೇಡ: ಪ್ರಾಣ ಕಳೆದುಕೊಂಡ ಮಹಿಳೆಯರು!

ವೇಶ್ಯೆ ಪಾತ್ರದ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಹಾಲಿವುಡ್​ ಅಂಗಳಕ್ಕೆ ಆಲಿಯಾ: ‘ವಂಡರ್​ ವುಮೆನ್​’ ಜತೆ ಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 12 =
Remember me
