ಟೆಹ್ರಾನ್:ಸಾರ್ವಜನಿಕ ಸ್ಥಳದಲ್ಲಿ ಹಿಜಾಬ್ ಧರಿಸದ ಕಾರಣಕ್ಕಾಗಿ ಇರಾನ್​ನಲ್ಲಿ ಯುವತಿಯೊಬ್ಬಳನ್ನು ಪೊಲೀಸರು ಬಂಧಿಸಿ, ವ್ಯಾನ್​ನಲ್ಲಿ ಹಿಗ್ಗಾಮುಗ್ಗಾ ಥಳಿಸಿದ್ದರಿಂದ ಕೆಲ ದಿನಗಳ ಹಿಂದೆ ಯುವತಿಯೊಬ್ಬಳು ಮೃತಪಟ್ಟಿದ್ದಳು. ಈ ಘಟನೆಯ ನಂತರ ಇರಾನ್​ನಲ್ಲಿ ಮಹಿಳೆಯರು ಹಿಂದೆಂದೂ ಕಾಣದ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆ ಐದನೆ ದಿನವೂ ಮುಂದುವರೆದಿದೆ.
ಕುರ್ದಿಸ್ತಾನ್ ಪ್ರಾಂತ್ಯದ ಮಹ್ಸಾ ಆಮಿನಿ ಎಂಬ 22 ವರ್ಷದ ಯುವತಿ ಪೊಲೀಸರ ದೌರ್ಜನ್ಯಕ್ಕೆ ಬಲಿಯಾದವಳು. ಸಂಬಂಧಿಕರನ್ನು ಭೇಟಿಯಾಗಲು ಆಮಿನಿ ಪಶ್ಚಿಮ ಪ್ರಾಂತ್ಯವಾದ ಕುರ್ದಿಸ್ತಾನದಿಂದ ಇರಾನ್​ನ ರಾಜಧಾನಿ ತೆಹರಾನ್​ಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಳು. ಈ ವೇಳೆ ಮಹಿಳೆಯರ ವಸ್ತ್ರಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಆಕೆಯನ್ನು ಬಂಧಿಸಿ ಹಿಂಸೆ ನೀಡಲಾಗಿತ್ತು. ನಂತರ ಆಕೆ ಮೃತಪಟ್ಟಿದ್ದಳು. ಇಲ್ಲಿಂದ ಶುರುವಾಗಿರುವ ಮಹಿಳೆಯರ ಆಕ್ರೋಶ ಇನ್ನೂ ನಿಂತಿಲ್ಲ.
ಪ್ರತಿಭಟನೆ ಶುರುವಾದಾಗಿನಿಂದ ಏಳು ಮಂದಿ ಪ್ರಾಣ ಕಳೆದುಕೊಂಡಿರುವುದಾಗಿ ವರದಿಯಾಗಿದೆ. ಈ ಪ್ರತಿಭಟನೆ ಹಿಂಸಾಚಾರ ಸ್ವರೂಪ ಪಡೆಯುತ್ತಿದ್ದಂತೆಯೇ ಸರ್ಕಾರವು ಸಾಮಾಜಿಕ ಮಾಧ್ಯಮಗಳ ಮೇಲೆ ನಿರ್ಬಂಧ ವಿಧಿಸಿದೆ. ಇರಾನ್​ನ 50ಕ್ಕೂ ಹೆಚ್ಚು ನಗರಗಳು ಮತ್ತು ಪಟ್ಟಣಗಳಲ್ಲಿ ಪ್ರತಿಭಟನೆ ಹಿನ್ನೆಲೆ ಇಂಟರ್​ನೆಟ್​ ಸ್ಥಗಿತಗೊಳಿಸಲಾಗಿದೆ.
ನೆಟ್‌ಬ್ಲಾಕ್‌ಗಳು ನೀಡಿದ ಮಾಹಿತಿ ಅನ್ವಯ ಇಲ್ಲಿನ ನಾಗರಿಕರಿಗೆ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿರ್ಬಂಧಿಸಿವೆ. ವಾಟ್ಸ್​ಆ್ಯಪ್​ ಬಳಕೆದಾರರು ಮೆಸೇಜ್​ ಮಾತ್ರ ಕಳಹಿಸಬಹುದಾಗಿದ್ದು, ಫೋಟೋ ಕಳುಹಿಸಲು ಸಾಧ್ಯವಿಲ್ಲ. ಕುರ್ದಿಸ್ತಾನ್ ಪ್ರಾಂತ್ಯದಲ್ಲಿ ಇಂಟರ್ನೆಟ್​ ಸಂಪೂರ್ಣ ಸ್ಥಗಿತಗೊಂಡಿದೆ.
ಸದ್ಯ ಇರಾನ್​ನಲ್ಲಿ ಇರುವ ಕಾನೂನಿನ ಅನ್ವಯ ಏಳು ವರ್ಷಕ್ಕಿಂತ ಮೇಲ್ಪಟ್ಟವರು ಹಿಜಾಬ್​ ಧರಿಸಬೇಕು. ಕೂದಲು ಕಾಣದಂತೆ ಸಂಪೂರ್ಣವಾಗಿ ಹಿಜಾಬ್​ ಧರಿಸಿಕೊಳ್ಳಬೇಕು, ಕೂದಲನ್ನು ಕೂಡ ಕತ್ತರಿಸಿಕೊಳ್ಳಬಾರದು ಎಂದಿದೆ. ಕೆಲ ತಿಂಗಳಿನಿಂದಲೇ ಇದರ ವಿರುದ್ಧ ಇರಾನ್​ನಲ್ಲಿ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಇದೀಗ ಯುವತಿಯ ಸಾವಿನ ನಂತರ ಅದು ತೀವ್ರ ಸ್ವರೂಪ ಪಡೆದುಕೊಂಡಿದೆ.(ಏಜೆನ್ಸೀಸ್​)
VIDEO: ಹಿಜಾಬ್​ ಸುಟ್ಟರು, ಕೂದಲು ಕತ್ತರಿಸಿಕೊಂಡರು… ಮಹಿಳೆಯರ ಪ್ರತಿಭಟನೆಗೆ ಮುಸ್ಲಿಂ ರಾಷ್ಟ್ರ ತತ್ತರ
ರೋಚಕ ಘಟ್ಟ ತಲುಪಿದ ಕಾಂಗ್ರೆಸ್​ ಅಧ್ಯಕ್ಷ ಸ್ಥಾನ: ಎರಡು ದಶಕಗಳ ನಂತರವೂ ಬದಲಾಗೋದು ಡೌಟಾ?
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:5 × 1 =
Remember me
