ನವದೆಹಲಿ:ಟಿ.ವಿಯಲ್ಲಿ ಇರುವ ಜಾಹೀರಾತುಗಳು ಹಲವರಿಗೆ ಕಿರಿಕಿರಿ ಎನ್ನಿಸುವುದು ಉಂಟು. ತಮ್ಮ ನೆಚ್ಚಿನ ಧಾರಾವಾಹಿ, ನ್ಯೂಸ್‌, ಸಿನಿಮಾ ಇತ್ಯಾದಿಗಳನ್ನು ನೋಡುವಾಗ ನಡುವೆ ಜಾಹೀರಾತು ಬಂದರೆ ಛೇ ಎನ್ನುವವರು ಹಲವರು.
ಆದರೆ ಚಿಕ್ಕಮಕ್ಕಳು ಇರುವ ಮನೆಯಲ್ಲಿನ ಅಮ್ಮಂದಿರಿಗೆ ಮಾತ್ರ ಜಾಹೀರಾತು ಎಂದರೆ ಬಲು ಖುಷಿ. ಏಕೆಂದರೆ ಚಿಕ್ಕಮಕ್ಕಳು ಊಟ ಮಾಡುವಾಗ ಅವರ ಬಾಯಿಗೆ ತುತ್ತು ಹೋಗುವುದು ಜಾಹೀರಾತು ಬಂದರೆ ಮಾತ್ರ. ಅದೇ ರೀತಿ ಚಿಕ್ಕಮಕ್ಕಳಿಗೆ ಹಲವಾರು ಜಾಹೀರಾತುಗಳು ಅಚ್ಚುಮೆಚ್ಚು.
#EveningQuiz–#CanYouIdentifyall the brands in the pic?Let's see who identifies maximum names.pic.twitter.com/VwI6CNvNZB
— Dipanshu Kabra (@ipskabra)August 23, 2020

ಅದೇನೇ ಇದ್ದರೂ, ಕೆಲವೊಂದು ಜಾಹೀರಾತುಗಳು ಮಾತ್ರ ದಶಕ ಕಳೆದರೂ ಮನದಾಳದಲ್ಲಿ ಅಚ್ಚಳಿಯದೇ ಉಳಿದುಬಿಟ್ಟಿದೆ. ತುಂಬಾ ಪ್ರಸಿದ್ಧವಾಗಿರುವ, ತೀರಾ ಅಪರೂಪ ಎನಿಸಿರುವ ಎಷ್ಟೋ ಜಾಹೀರಾತುಗಳು ಇಂದಿಗೂ ಹಲವರ ಮನದಲ್ಲಿ ನೆನಪಿನಲ್ಲಿ ಇವೆ. ಅದರಲ್ಲಿಯೂ ಟಿ.ವಿ ಬಂದ ಹೊಸತರಲ್ಲಿ ಬರುತ್ತಿದ್ದ ಜಾಹೀರಾತುಗಳು ಮನಪಟಲದಲ್ಲಿ ಉಳಿದಿವೆ.
ಅಂಥ ಕೆಲವು ಪ್ರಸಿದ್ಧ ಜಾಹೀರಾತುಗಳನ್ನು ಹೆಕ್ಕಿ ತೆಗೆದು, ಅವುಗಳನ್ನು ಒಂದೆಡೆ ಕಲೆ ಹಾಕಿರುವ, ಆ ಜಾಹೀರಾತುಗಳ ಪ್ರಮುಖ ಪಾತ್ರ ಅಥವಾ ಲೋಗೋವನ್ನು ಒಂದೇ ಫ್ರೇಮ್‌ನಲ್ಲಿಟ್ಟಿರುವ ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ ನಿಮಗೊಂದು ಟಾಸ್ಕ್‌ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಇದು ಯಾವ ಜಾಹೀರಾತು ಹೇಳಿ ಎಂದು ಸವಾಲು ಹಾಕಿದ್ದಾರೆ. ಇದಕ್ಕೆ ಹಲವಾರು ಕಮೆಂಟಿಗರು ಪ್ರತಿಕ್ರಿಯೆ ನೀಡಿದ್ದಾರೆ. ನೀವೂ ಒಮ್ಮೆ ಟ್ರೈ ಮಾಡಿ ನೋಡಿ…
ಕೈಕೊಟ್ಟ ಹೆಂಡತಿಯನ್ನು ವಿವಸ್ತ್ರಗೊಳಿಸಿ ಪ್ರೇಯಸಿಯ ಮುಂದೆ ಭಯಾನಕ ವಿಕೃತಿ ಮೆರೆದ!

ಮನೆಯೊಳಕ್ಕೆ ನುಗ್ಗಿದ ಹಾವನ್ನೇ ತಿಂದು ತೇಗಿದ ಭೂಪ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nine − three =
Remember me
