ಮುಂಬೈ:ಆಯಸ್ಸು ಇದ್ದರೆ ಎಂಥ ಬಂಡೆಗಲ್ಲು ಉರುಳಿಬಿದ್ದರೂ ಸಾಯುವುದಿಲ್ಲ, ಎಷ್ಟೇ ಎತ್ತರದಿಂದ ಧುಮುಕಿದರೂ ಉಸಿರು ಹೋಗುವುದಿಲ್ಲ ಎಂಬಿತ್ಯಾದಿ ಮಾತುಗಳಿವೆ. ಅಂಥದ್ದೇ ಒಂದು ಉದಾಹರಣೆಗೆ ಸಾಕ್ಷಿಯಾಗಿದೆ ಇಲ್ಲೊಂದು ಲೈವ್​ ಆತ್ಮಹತ್ಯೆ ಪ್ರಯತ್ನ.
ಇದು ನಡೆದಿರುವುದು ಮುಂಬೈನ ದುಲೆ ಎಂಬಲ್ಲಿ. 23 ವರ್ಷದ ವ್ಯಕ್ತಿಯೊಬ್ಬ ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಈಗೆಲ್ಲಾ ಆತ್ಮಹತ್ಯೆ ಮಾಡಿಕೊಳ್ಳುವವರು ಫೇಸ್​ಬುಕ್​ ಲೈವ್​ ಮಾಡುವುದು ಸಾಮಾನ್ಯ ಎನಿಸಿಬಿಟ್ಟಿದೆ. ಅದೇ ರೀತಿ ಈ ಯುವಕ ಕೂಡ ಫೇಸ್​ಬುಕ್​ ಲೈವ್​ಗೆ ಬಂದಿದ್ದಾನೆ. ಅಳುತ್ತಲೇ ತನಗಾಗಿರುವ ಕಷ್ಟ, ತನ್ನ ನೋವು, ತಾನೇಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಇತ್ಯಾದಿ ಕಥೆ ಹೇಳಿದ್ದಾನೆ.
ಇಷ್ಟು ಹೇಳುತ್ತಲೇ ಕುತ್ತಿಗೆಯನ್ನು ರೇಸರ್​ನಿಂದ ಕತ್ತರಿಸಿಕೊಂಡುಬಿಟ್ಟಿದ್ದಾನೆ. ಎಲ್ಲೋ ಕುಳಿತು ಈ ಯುವಕನ ಕಷ್ಟ ಕೇಳುತ್ತಿದ್ದವರು ತಡೆಯಲು ಪ್ರಯತ್ನಿಸುವುದಾದರೂ ಹೇಗೆ? ಆದ್ದರಿಂದ ಎಲ್ಲರೂ ಆತನ ಕಥೆ ಮುಗಿಯಿತು ಎಂದೇ ಭಾವಿಸಿ ಮರುಕಪಡುತ್ತಲಿದ್ದರು.ಆದರೆ ಅಲ್ಲಿ ಆಯಿತೊಂದು ವಿಚಿತ್ರ. ಇನ್ನೇನು ಅವನ ಉಸಿರು ಹೋಗುತ್ತದೆ ಎನ್ನುವಾಗಲೇ ನಡೆದ ವಿಚಿತ್ರವಿದು.
ಅದೇನೆಂದರೆ ಈ ಲೈವ್ ವೀಡಿಯೋ ಅನ್ನು ಐರ್ಲ್ಯಾಂಡ್​ನಲ್ಲಿನ ಫೇಸ್​ಬುಕ್ ಮುಖ್ಯ ಕಚೇರಿಯ ಸಿಬ್ಬಂದಿ ನೋಡಿದ್ದಾರೆ. ಈ ಯುವಕನನ್ನು ಕಾಪಾಡಲು ಪ್ರಯತ್ನಿಸಿದ ಸಿಬ್ಬಂದಿ ಕೂಡಲೇ ಮುಂಬೈ ಸೈಬರ್ ಡಿಸಿಪಿ ರಶ್ಮಿ ಕರಂಡಿಕರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದಾರೆ. ಮುಂಬೈನ ವ್ಯಕ್ತಿಯೊಬ್ಬ ಫೇಸ್​ಬುಕ್​ ಲೈವ್​ನಲ್ಲಿ ಬಂದಿದ್ದು, ಆತನನ್ನು ಪತ್ತೆ ಹಚ್ಚಿ ರಕ್ಷಿಸುವಂತೆ, ಆತನ ಪೋಟೋ ಹಾಕೂ ಲೈವ್ ವೀಡಿಯೋ ಲಿಂಕ್ ಶೇರ್ ಮಾಡಿದ್ದಾರೆ.
ತಡ ಮಾಡದ ಮುಂಬೈನ ಸೈಬರ್ ಪೊಲೀಸರು, ಈ ಯುವಕನ ಲೊಕೇಷನ್ ಪತ್ತೆ ಹಚ್ಚಿದ್ದಾರೆ. ದುಲೆ ಪ್ರಾಂತದಲ್ಲಿ ಆತನ ಮನೆ ಇರೋದನ್ನು ಪತ್ತೆ ಹಚ್ಚಿದ ಅವರು, ಹತ್ತೇ ನಿಮಿಷದಲ್ಲಿ ಅಲ್ಲಿಗೆ ತೆರಳಿದ್ದಾರೆ. ಅದಾಗಲೇ ಯುವಕ ಕತ್ತು ಕುಯ್ದುಕೊಂಡು, ರಕ್ತದ ಮಡುವಿನಲ್ಲಿ ಬಿದ್ದಿದ್ದ. ಆದರೆ ಆತ ಉಸಿರಾಡುತ್ತಿದ್ದ. ಆತನನ್ನು ಕೂಡಲೇ ಅಂಬ್ಯುಲೆನ್ಸ್​ಮೂಲಕ ಆಸ್ಪತ್ರೆಗೆ ಸಾಗಿಸಿದ್ದಾರೆ.
ಸದ್ಯ ಯುವಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟಿನಲ್ಲಿ, ಫೇಸ್​ಬುಕ್​ ಲೈವ್​ ಬಂದುದಕ್ಕೆ ಯುವಕನ ಪ್ರಾಣ ಉಳಿದಿದೆ. 10-15 ನಿಮಿಷದಲ್ಲಿಯೇ ದೂರದ ದೇಶದಿಂದ ಮುಂಬೈ ನಿವಾಸಿಯೊಬ್ಬನ ಪ್ರಾಣ ಉಳಿದಿರುವುದು ವಿಚಿತ್ರವೇ ಸರಿ.
ಅರ್ಚಕರ ಮದುವೆಯಾಗುವ ವಧುಗಳಿಗೆ ಸಿಗಲಿದೆ ಭರ್ಜರಿ ಮೊತ್ತ- ನಾಳೆ ಸಿಎಂ ಚಾಲನೆ

ಮಗಳು ದೊಡ್ಡವಳಾಗಿದ್ದಾಳೆ, ಅವಳ ಆರೈಕೆ ಹೇಗೆ ಮಾಡುವುದು? ತಿಂಡಿ ಯಾವುದು ಕೊಡಬೇಕು?

ವಿಚ್ಛೇದನ ನೀಡದೇ ಮರುವಿವಾಹವಾದಾಕೆಗೆ ಮಗುವಿನ ಹಕ್ಕು ಇದ್ಯಾ? ಹೈಕೋರ್ಟ್​ ಏನು ಹೇಳಿದೆ ನೋಡಿ…

ಒಬ್ಬನ ಅಂತ್ಯಸಂಸ್ಕಾರಕ್ಕೆ ಬಂದು ಹೆಣವಾದ 16 ಮಂದಿ: ₹10 ಲಕ್ಷ ಪರಿಹಾರ, ಉದ್ಯೋಗದ ಭರವಸೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:18 − six =
Remember me
