ನವದೆಹಲಿ:ಇದಾಗಲೇ ಚೀನಾದ ಹಲವಾರು ಆ್ಯಪ್​ಗಳನ್ನು ಭಾರತದಲ್ಲಿ ನಿಷೇಧ ಮಾಡಲಾಗಿದೆ. ಭಾರತದಿಂದಲೇ ಸಹಸ್ರಾರು ಕೋಟಿ ರೂಪಾಯಿಗಳ ಆದಾಯವನ್ನು ಸೃಷ್ಟಿಸಿಕೊಂಡು ಭಾರತಕ್ಕೇ ಚೂರಿ ಹಾಕುತ್ತಿರುವ ಚೀನಾಕ್ಕೆ ಈ ಮೂಲಕವಾಗಿ ಭಾರತ ತಿರುಗೇಟು ನೀಡಿದ್ದರೆ, ಹಲವು ದೇಶಗಳು ಕೂಡ ಚೀನಾಕ್ಕೆ ಬೇರೆ ಬೇರೆ ರೀತಿಯಾಗಿ ಬುದ್ಧಿ ಕಲಿಸಿವೆ.
ಇದೀಗ ಸ್ಮಾರ್ಟ್​ಫೋನ್​ಗೂ ಇದೇ ಗತಿ ಕಾಣಿಸಲು ಭಾರತದ ಸರ್ಕಾರ ನಿರ್ಧರಿಸಿರುವ ಹಿನ್ನೆಲೆಯಲ್ಲಿ 12 ಸಾವಿರ ರೂಪಾಯಿಗಳಿಗಿಂತಲೂ ಕಡಿಮೆ ಬೆಲೆ ಬಾಳುವ ಚೀನಾದ ಸ್ಮಾರ್ಟ್​ಫೋನ್​ಗಳನ್ನು ಭಾರತದಲ್ಲಿ ನಿಷೇಧ ವಿಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಕೆಲ ದಿನಗಳಿಂದ ಸುದ್ದಿಯಾಗುತ್ತಿದೆ. ದೇಶಿ ಮೊಬೈಲ್‌ ಉದ್ಯಮಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಆದ್ದರಿಂದ 12 ಸಾವಿರ ರೂ.ಗಿಂತ ಕಡಿಮೆ ಮೌಲ್ಯದ ವಿದೇಶಿ ಫೋನ್‌ಗಳ ಮಾರಾಟದ ಮೇಲೆ ನಿರ್ಬಂಧ ಹೇರಲು ಚಿಂತನೆ ನಡೆಸಿದೆ. ಇದಾಗಲೇ ಕೇಂದ್ರ ಸರ್ಕಾರಕ್ಕೆ ಸಹಸ್ರಾರು ಕೋಟಿ ರೂಪಾಯಿಗಳ ತೆರಿಗೆಯನ್ನು ವಂಚಿಸಿರುವ ಒಪ್ಪೊ, ವಿವೊ ಕಂಪೆನಿ ಸೇರಿದಂತೆ ಬಹುಬೇಡಿಕೆ ಇರುವ ಶಿಯೋಮಿ, ಒನ್​ಪ್ಲಸ್​ ಕಂಪೆನಿಗಳ ಮೊಬೈಲ್​ಗಳು ಬ್ಯಾನ್​ ಆಗುವ ಸಾಧ್ಯತೆ ಇದೆ ಎಂದು ಸುದ್ದಿ ಹರಡುತ್ತಿದೆ.
ಈ ಸುದ್ದಿಯಿಂದ ಲಕ್ಷಾಂತರ ಮಂದಿ ನೊಂದುಕೊಂಡಿದ್ದರು ಜತೆಗೆ ಗೊಂದಲವೂ ಏರ್ಪಟ್ಟಿತ್ತು. ಏಕೆಂದರೆ 12 ಸಾವಿರ ರೂಪಾಯಿಗಳಿಗಿಂತಲೂ ಕಡಿಮೆ ಬೆಲೆಯ ಮೊಬೈಲ್​ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಒಂದು ವೇಳೆ ಇದು ಬ್ಯಾನ್​ ಆದರೆ ಅದು ಈಗಾಗಲೇ ಮೊಬೈಲ್​ ಫೋನ್​ ಹೊಂದಿರುವವರ ಮೇಲೂ ಪರಿಣಾಮ ಬೀರುತ್ತಾ ಅಥವಾ ಈ ಬೆಲೆಯ ಫೋನ್​ಗಳು ಸಿಗದೇ ಹೋದರೆ ದುಬಾರಿಯದ್ದೇ ಕೊಂಡುಕೊಳ್ಳಬೇಕಾ ಎಂದೆಲ್ಲಾ ಚಿಂತೆ ಕಾಡತೊಡಗಿತ್ತು.
ಆದರೆ ಈ ಬಗ್ಗೆ ಇದೀಗ ಸ್ಪಷ್ಟನೆ ನೀಡಿರುವ ಕೇಂದ್ರದ ಇಲೆಕ್ಟ್ರಾನಿಕ್ಸ್ ಮತ್ತು ಐಟಿ ಖಾತೆಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು, ಇಂಥ ಯಾವುದೇ ಪ್ರಸ್ತಾವ ಸದ್ಯ ಕೇಂದ್ರದ ಮುಂದೆ ಇಲ್ಲ. ಇದು ಹೇಗೆ ಸುದ್ದಿಯಾಯಿತು ಎಂದು ತಿಳಿದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
12 ಸಾವಿರ ರೂ. ಒಳಗಿನ ಕಡಿಮೆ ಬಜೆಟ್ ಸ್ಮಾರ್ಟ್‌ಫೋನ್‌ಗಳನ್ನು ನಿಷೇಧಿಸುವ ಯಾವುದೇ ಯೋಜನೆಯನ್ನು ಕೇಂದ್ರ ಸರ್ಕಾರ ಹೊಂದಿಲ್ಲ.. ಇಂಥ ಪ್ರಸ್ತಾವ ಇಲ್ಲ ಎಂದು ಉತ್ತರಿಸಿದ್ದಾರೆ ಭಾರತದಿಂದ ರಫ್ತುಗಳನ್ನು ಹೆಚ್ಚಿಸಲು ಚೀನಾದ ಸ್ಮಾರ್ಟ್‌ಫೋನ್ ಕಂಪನಿಗಳಿಗೆ ಸರ್ಕಾರ ಮನವಿ ಮಾಡಿದೆ. ಮುಂಬರುವ ನಾಲ್ಕು ವರ್ಷಗಳಲ್ಲಿ 300 ಬಿಲಿಯನ್ ಡಾಲರ್‌ ಎಲೆಕ್ಟ್ರಾನಿಕ್ ಉತ್ಪಾದನೆಯನ್ನು ತಲುಪಲು ಸರ್ಕಾರ ಎದುರು ನೋಡುತ್ತಿದೆ. ಪ್ರಸ್ತುತ ಉತ್ಪಾದನೆಯು ಸುಮಾರು 76 ಶತಕೋಟಿ ಡಾಲರ್‌ ಎಂದು ಅಂದಾಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)
55ರ ವರ- 18ರ ವಧು: ‘ನನ್ನನ್ನು ಹೆಚ್ಚಿಗೆ ಭೇಟಿಯಾಗಬೇಡ’ ಎಂದು ಹಾಡುತ್ತಲೇ ಲವ್​ಗೆ ಬಿದ್ದ ಜೋಡಿಯ ಕಥೆ ಇದು…

ಸುಪ್ರೀಂ ​ಮೆಟ್ಟಿಲೇರಿದ ಹುಬ್ಬಳ್ಳಿಯ ಈದ್ಗಾ ಮೈದಾನದ ಗಣೇಶೋತ್ಸವ: ಹೈಕೋರ್ಟ್​ತೀರ್ಪು ಪ್ರಶ್ನಿಸಿ ಮೇಲ್ಮನವಿ

ಸೆಲ್ಫಿ ಹುಚ್ಚಿಗೆ ಬಲಿಯಾಯ್ತು ಇಡೀ ಕುಟುಂಬ: ಇಬ್ಬರ ಉಳಿಸಲು ಹೋಗಿ ಜಲಪಾತದಲ್ಲಿ ಕೊಚ್ಚಿಹೋದ ಆರು ಮಂದಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + six =
Remember me
