ಹೈದರಾಬಾದ್:ಕಳೆದೊಂದು ವರ್ಷದಿಂದ ಕರೊನಾ ಹಾವಳಿ ಹೆಚ್ಚಾಗಿ ಬಹುತೇಕ ಶಾಲೆಗಳು ಆನ್‌ಲೈನ್‌ ಕ್ಲಾಸ್‌ ಮಾಡುತ್ತಿದ್ದ ಸಂದರ್ಭಗಳಲ್ಲಿ ನೆಟ್‌ವರ್ಕ್‌ ಸಿಗದೇ ವಿದ್ಯಾರ್ಥಿಗಳು, ಶಿಕ್ಷಕರು ಗುಡ್ಡದ ಮೇಲೆ, ಮರದ ಮೇಲೇರಿ ನೆಟ್‌ವರ್ಕ್‌ ಹುಡುತ್ತಿದ್ದರು, ಈಗಲೂ ಮಾಡುತ್ತಿದ್ದಾರೆ. ಆದರೆ ಇಲ್ಲೊಬ್ಬ ಕರೊನಾ ಸೋಂಕಿತ ವಿದ್ಯಾರ್ಥಿ ಮನೆಯಲ್ಲಿ ಜಾಗವಿಲ್ಲದೇ ಮರವನ್ನೇರಿ ಕುಳಿತಿರಬೇಕಾದ ದಾರುಣ ಘಟನೆ ನಡೆದಿದೆ.
ತೆಲಂಗಾಣದ ನಲಗೊಂಡ ಜಿಲ್ಲೆಯ ಕೊತಾನಂದಿಕೊಂಡ ಗ್ರಾಮದಲ್ಲಿ ವಾಸವಿರುವ ಶಿವ ಎಂಬ ವಿದ್ಯಾರ್ಥಿ 11 ದಿನಗಳಿಂದ ಮರದ ಮೇಲೆಯೇ ಕುಳಿತಿದ್ದಾನೆ. ಈತನಿಗೆ ಕರೊನಾ ಸೋಂಕು ಕಾಣಿಸಿಕೊಂಡಿತ್ತು. ಅದು ಮನೆಯವರಿಗೆ ಹರಡಬಾರದು ಎಂದು ಪ್ರತ್ಯೇಕವಾಗಿ ಮನೆಯಲ್ಲಿ ಹೋಂ ಐಸೋಲೇಷನ್‌ನಲ್ಲಿ ಇರುವಂತೆ ಸೂಚಿಸಲಾಗಿತ್ತು. ಆದರೆ ಇರುವ ಚಿಕ್ಕ ಮನೆಯಲ್ಲಿ ಪ್ರತ್ಯೇಕ ವಾಸ ಅಸಾಧ್ಯವೇ ಸರಿ. ಅದಕ್ಕಾಗಿಯೇ ಆತ ಪ್ರತ್ಯೇಕವಾಗಿ ಇರಲು ಮರವನ್ನೇರಿ ಕುಳಿತಿದ್ದಾನೆ.
ಇದು ಶಿವನೊಬ್ಬನ ಪಾಡಲ್ಲ. ಮನೆಯಲ್ಲಿ ಜಾಗವಿಲ್ಲದೇ, ಐಸೋಲೇಷನ್‌ ಸೆಂಟರ್‌ಗಳೂ ಇಲ್ಲದ ಎಲ್ಲಾ ಊರುಗಳ ಜನರ ಸ್ಥಿತಿಯೂ ಇದೇ ಆಗಿದೆ. ಈ ಕುರಿತು ತಾನು ಅನುಭವಿಸಿದ ನೋವನ್ನು ಹಂಚಿಕೊಂಡಿರುವ ಶಿವ, ’ನಮ್ಮಲ್ಲಿ ಯಾವುದೇ ಐಸೋಲೇಷನ್ ಸೆಂಟರ್‌ಗಳು ಇಲ್ಲ. ಇರುವುದು ಚಿಕ್ಕ ಮನೆ. ಅಲ್ಲಿ ಪ್ರತ್ಯೇಕ ವಾಸ ಅಸಾಧ್ಯ. ಕುಟುಂಬದ ಸದಸ್ಯರ ಜತೆ ಇದ್ದರೆ ಸೋಂಕು ಹರಡುವ ಭೀತಿ. ಬೇರೆ ಕಡೆಯೂ ಇರುವಂತಿಲ್ಲ. ಆದ್ದರಿಂದ ಏನು ಮಾಡಬೇಕು ಎಂದು ತಿಳಿಯದೇ ಮರವೇರಿ ಕುಳಿತುಕೊಳ್ಳುವ ನಿರ್ಧಾರ ಮಾಡಿದೆ’ ಎನ್ನುತ್ತಾನೆ.
ಇಲ್ಲಿಯವರ ಪಾಡು ಇಷ್ಟೇ ಅಲ್ಲ. ಗ್ರಾಮದಿಂದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಬೇಕಾದರೆ 5 ಕಿ.ಮಿ ಕ್ರಮಿಸಬೇಕು. ತುರ್ತು ಚಿಕಿತ್ಸೆಗಾಗಿ 30 ಕಿ.ಮಿ ಕ್ರಮಿಸಬೇಕಾದಂತಹ ಪರಿಸ್ಥಿತಿಯೂ ಇದೆ.
ಪ್ರಧಾನಿ ವಿರುದ್ಧದ ಪೋಸ್ಟರ್‌ನ ಕಿಂಗ್‌ಪಿನ್‌ ತನಿಖೆ ಬೆನ್ನಲ್ಲೇ ‘ನನ್ನನ್ನೂ ಬಂಧಿಸಿ’ ಎಂದ ರಾಹುಲ್‌ ಗಾಂಧಿ!

ಪದವೀಧರರಿಗೆ ಎಸ್‌ಬಿಐನಲ್ಲಿ ಭರ್ಜರಿ ಉದ್ಯೋಗಾವಕಾಶ: 5237 ಹುದ್ದೆಗಳಿಗೆ ಆಹ್ವಾನ

ಅವನ ದೇಹ ಬೇಕು ಎಂದು ವರದಕ್ಷಿಣೆ ಕೇಸ್‌ ಧಮ್ಕಿ ಹಾಕ್ತಾಳೆ: ಏನು ಮಾಡಲಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
