ಜೆರುಸಲೇಂ:ಇಸ್ರೇಲ್‌ ಮತ್ತು ಗಾಜಾದ ನಡುವೆ ಮತ್ತೆ ಬೆಂಕಿಯ ಕಿಡಿ ಹೊತ್ತಿಕೊಂಡಿದೆ. ಮೇ 21ರಂದು ನಡೆದ ಕದನ ವಿರಾಮ ಒಪ್ಪಂದ ಬಳಿಕ ನಡೆದ ಮೊದಲ ದೊಡ್ಡ ದಾಳಿ ಇದಾಗಿದೆ.
ಕದನ ವಿರಾಮದಿಂದ ಈ ಎರಡೂ ದೇಶಗಳು ಸ್ವಲ್ಪ ಸಮಯ ಶಾಂತವಾಗಿದ್ದವು. ಆದರೆ ಇದೀಗ ಮತ್ತೆ ಕದನ ಶುರುವಾಗಿದೆ. ಗಾಜಾದಲ್ಲಿನ ಪ್ಯಾಲೆಸ್ತೀನಿಯರು ಬೆಂಕಿ ಹಚ್ಚುವ ಬಲೂನುಗಳನ್ನು ಹಾರಿಸಿದ ಬಳಿಕ ಇಸ್ರೇಲ್ ಕೂಡ ಗಾಜಾ ಪಟ್ಟಿಯ ಮೇಲೆ ವೈಮಾನಿಕ ದಾಳಿ ನಡೆಸಿದೆ. ಇದಾಗಲೇ ನಡೆದ 11 ದಿನಗಳ ಕಾಳಗದಲ್ಲಿ 260 ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದರೆ, 13 ಮಂದಿ ಇಸ್ರೇಲ್ ಜನರು ಮೃತಪಟ್ಟಿದ್ದು, ಪುನಃ ಕಾಳಗ ಶುರುವಾಗಿದೆ.

ಇಸ್ರೇಲ್‌ನ ವಾಯುಪಡೆಯು ದಕ್ಷಿಣ ಗಾಜಾ ನಗರವಾದ ಖಾನ್ ಯೂನಸ್‌ ತಾಣವನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದೆ ಎಂದು ಪ್ಯಾಲೇಸ್ತೀನಿಯನ್ ಮೂಲಗಳು ಹೇಳಿವೆ. ಆದರೆ ಇಸ್ರೇಲ್‌ ಪ್ರಕಾರ, ಗಾಜಾ ಪಟ್ಟಿಯಿಂದ ಸ್ಫೋಟಕಗಳಿರುವ ಬಲೂನ್ ಹಾರಾಡಿದ ಪರಿಣಾಮ ಪ್ರತಿಯಾಗಿ, ಹೀಗೆ ಮಾಡಲಾಗಿದೆ ಎಂದಿದೆ.
ಇಸ್ರೇಲ್‌ನಲ್ಲಿ 12 ವರ್ಷಗಳ ಬೆಂಜಮಿನ ನೆತನ್ಯಾಹು ಸರ್ಕಾರ ಉರುಳಿ ಹೊಸ ಸರ್ಕಾರ ಬಂದ ಕೂಡಲೇ ಈ ದಾಳಿಯಾಗಿದೆ. ಸದ್ಯ ಬಹುಮೈತ್ರಿ ಕೂಟ ಸರ್ಕಾರ ಅಸ್ತಿತ್ವದಲ್ಲಿದ್ದು, ನೆಫ್ಟಾಲಿ ಬೆನ್ನೆಟ್ ನೇತೃತ್ವದಲ್ಲಿದೆ.
ಅಪ್ರಾಪ್ತ ಗಂಡನಿಂದ ಆಂಟಿಗೆ ಮಗು! ಬಾಲಕ ಪತಿಯ ಜೀವನ ನಿಮ್‌ ಕೈಗೆ ಕೊಡಲಾಗದು ಎಂದ ಹೈಕೋರ್ಟ್‌

ಮದ್ಯ ಖರೀದಿಗೆ ಮುನ್ನವೇ ಖುಷಿಯಲ್ಲಿ ಟೈಟ್‌! ಬಾಟ್ಲಿಗೆ ಪೂಜೆ ಮಾಡಿದ ಎಣ್ಣೆಭಕ್ತ- ಕುಳಿತಲ್ಲೇ ನಮಸ್ಕರಿಸಿದ್ರು ಪ್ರಿಯರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 10 =
Remember me
