ವಾಷಿಂಗ್ಟನ್​:ಮಾಡಿಕೊಂಡಿರುವ ಉಪಗ್ರಹ ಒಪ್ಪಂದವೊಂದನ್ನು ರದ್ದುಪಡಿಸಿರುವ ಹಿನ್ನೆಲೆಯಲ್ಲಿ ಇಸ್ರೋ ವಾಣಿಜ್ಯ ಘಟಕ ಆ್ಯಂಟ್ರಿಕ್ಸ್‌ ಕಾರ್ಪೊರೇಷನ್‌ ಇದೀಗ ಬೃಹತ್​ ಮೊತ್ತದ ಪರಿಹಾರ ರೂಪದ ದಂಡಕ್ಕೆ ಒಳಗಾಗಿದೆ.
ಬೆಂಗಳೂರು ಮೂಲದ ಸ್ಟಾರ್ಟ್​ಅಪ್​ ದೇವಾಸ್ ಮಲ್ಟಿಮೀಡಿಯಾಕ್ಕೆ 1.2 ಶತಕೋಟಿ ಡಾಲರ್‌ ಪರಿಹಾರ ನೀಡಬೇಕು ಎಂದು ಆ್ಯಂಟ್ರಿಕ್ಸ್‌ ಕಾರ್ಪೊರೇಷನ್​ಗೆ ಅಮೆರಿಕದ ನ್ಯಾಯಾಲಯ ಸೂಚಿಸಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ವಾಣಿಜ್ಯ ಘಟಕವಾಗಿರುವ ಆ್ಯಂಟ್ರಿಕ್ಸ್‌ ಕಾರ್ಪೊರೇಷನ್‌ 2005ರ ಜನವರಿಯಲ್ಲಿ ದೇವಾಸ್ ಮಲ್ಟಿಮೀಡಿಯಾದ ಜತೆ ಒಪ್ಪಂದ ಮಾಡಿಕೊಂಡಿತ್ತು. 70 ಮೆಗಾಹರ್ಟ್ಸ್ ಎಸ್‌-ಬ್ಯಾಂಡ್‌ ತರಂಗಾಂತರದ ಎರಡು ಉಪಗ್ರಹಗಳನ್ನು ನಿರ್ಮಿಸಿ, ಉಡಾವಣೆ ಮಾಡಿ, ಕಾರ್ಯಾಚರಣೆ ಮಾಡುವ ಒಪ್ಪಂದ ಇದಾಗಿದೆ. ಈ ಉಪಗ್ರಹಗಳನ್ನು ದೇವಾಸ್‌ ಭಾರತದಾದ್ಯಂತ ಸಂವಹನ ಸೇವೆ ಒದಗಿಸಲು ಬಳಸುವ ಉದ್ದೇಶ ಹೊಂದಿತ್ತು.
ಇದನ್ನೂ ಓದಿ:ಅಂದು ಅವನೆಲ್ಲಿ ತಪ್ಪಿದ..? ಇಂದು ನಾವೆಲ್ಲಿ ತಪ್ಪುತ್ತಿದ್ದೇವೆ..?
ಆದರೆ ಏಕಾಏಕಿಯಾಗಿ 2011ರ ಫೆಬ್ರುವರಿ 2011ರಲ್ಲಿ ಆ್ಯಂಟ್ರಿಕ್ಸ್‌ ಕಾರ್ಪೊರೇಷನ್​ ಈ ಒಪ್ಪಂದವನ್ನು ರದ್ದುಪಡಿಸಿತು.ಇದನ್ನು ಪ್ರಶ್ನಿಸಿ ದೇವಾಸ್‌ ಕೋರ್ಟ್​ ಮೆಟ್ಟಿಲೇರಿತ್ತು. ಇದರ ತೀರ್ಪು ಇದೀಗ ಹೊರಕ್ಕೆ ಬಂದಿದೆ. ಆ್ಯಂಟ್ರಿಕ್ಸ್‌ ಕಾರ್ಪೊರೇಷನ್​, ದೇವಾಸ್​ಗೆ 56.5 ಕೋಟಿ ಡಾಲರ್ ಪರಿಹಾರ ನೀಡಬೇಕು. ಇದಕ್ಕೆ ಈವರೆಗಿನ ಬಡ್ಡಿ ಸೇರಿಸಿದರೆ ಒಟ್ಟು ಮೊತ್ತು 1.2 ಶತಕೋಟಿ ಡಾಲರ್‌ ಆಗುತ್ತದೆ’ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಈ ಒಪ್ಪಂದದ ಕುರಿತಂತೆ ಅಮೆರಿಕದ ಸುಪ್ರೀಂಕೋರ್ಟ್​ ನಿರ್ದೇಶನದ ಮೇರೆಗೆ ಈ ಹಿಂದೆ ಅಂತಾರಾಷ್ಟ್ರಿಯ ಪ್ರಾಧಿಕಾರದ ರಚನೆಗೆ ಆದೇಶಿಸಿತ್ತು. ಪ್ರಾಧಿಕಾರ ಕೂಡ ಈ ಕ್ರಮದ ವಿರುದ್ಧ ಆದೇಶ ಹೊರಡಿಸಿತ್ತು. ಇದನ್ನು ಪರಿಗಣನೆಗೆ ತೆಗೆದುಕೊಂಡಿರುವ ಕೋರ್ಟ್​, ಪರಿಹಾರ ನೀಡಲು ಸೂಚಿಸಿದೆ.
‘ಅಮೆರಿಕದ ನ್ಯಾಯಾಲಯವು ಈ ಪ್ರಕರಣದ ವಿಚಾರಣೆ ನಡೆಸಲು ಅಧಿಕಾರ ಹೊಂದಿಲ್ಲ ಎಂದು ಕೂಡ ಆ್ಯಂಟ್ರಿಕ್ಸ್​ ವಾದಿಸಿತ್ತು. ಆದರೆ ಅಮೆರಿಕದ ಸೀಟಲ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ದೇವಾಸ್‌, ಅಮೆರಿಕದಾದ್ಯಂತ ಸೇವೆ ಒದಗಿಸುತ್ತಿದೆ. ಹೀಗಾಗಿ ಈ ಪ್ರಕರಣದ ವಿಚಾರಣೆ ನಡೆಸಬಹುದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದ್ದು, ಪರಿಹಾರ ರೂಪದ ದಂಡ ವಿಧಿಸಿದೆ.
ಶ್ರೀರಾಮುಲು ಆಪ್ತನ ಮಗಳ ಅದ್ದೂರಿ ಮದುವೆ: ಮಾಸ್ಕ್​ ಇಲ್ಲ… ಅಂತರವಿಲ್ಲ..?

ಜೀನ್ಸ್​ ಬ್ಯಾನ್​ ಮಾಡಿದ್ದಕ್ಕೆ ಲುಂಗಿ ಧರಿಸಿ ಬಂದ್ರಾ ಈ ಯುವತಿಯರು?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eight − eight =
Remember me
