ನವದೆಹಲಿ:ಫ್ಯಾಕ್ಟ್​ ಚೆಕ್​ ವೆಬ್​ಸೈಟ್​ ಹೆಸರಿನಲ್ಲಿ ಜಾಲತಾಣದಲ್ಲಿ ಕೋಮುದ್ವೇಷ ಬಿತ್ತುವಂಥ ಪೋಸ್ಟ್‌ ಹಾಕಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದೂ ಅಲ್ಲದೇ ಕೋಮು ಗಲಭೆಗೆ ಕಾರಣೀಕರ್ತನಾಗುತ್ತಿರುವ ಆರೋಪದ ಮೇಲೆ ಬಂಧಿತನಾಗಿರುವ ಆಲ್ಟ್‌ ನ್ಯೂಸ್‌ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್​ನ ಪರ ವಹಿಸಿಕೊಂಡು ಮಾತನಾಡಿರುವ ಕಾಂಗ್ರೆಸ್​ ನಾಯಕ, ಸಂಸದ ರಾಹುಲ್​ ಗಾಂಧಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
2017ರಲ್ಲಿ ಆರಂಭವಾದ ಫ್ಯಾಕ್ಟ್‌ ಚೆಕ್‌ (ಸತ್ಯ ಶೋಧನೆ) ವೆಬ್‌ಸೈಟ್‌, ಆಲ್ಟ್‌ ನ್ಯೂಸ್‌ನ ಮೊಹಮ್ಮದ್ ಜುಬೈರ್​ ವಿರುದ್ಧ ಸಾಕಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸಿದ ಬಳಿಕ ದೆಹಲಿ ಪೊಲೀಸರು ಬಂಧಿಸಿದ್ದಾರೆ. 2018ರಲ್ಲಿ ಈತನ ವಿರುದ್ಧ ವ್ಯಕ್ಯಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಜುಬೈರ್​ ವಿರುದ್ಧ ಸೆಕ್ಷನ್ 153 (ಗಲಭೆ ಉಂಟು ಮಾಡುವ ಉದ್ದೇಶದಿಂದ ಪ್ರಚೋದನೆ ನೀಡುವುದು) ಮತ್ತು ಸೆಕ್ಷನ್ 295ಎ (ಯಾವುದೇ ವರ್ಗದ ಧರ್ಮ ಹಾಗೂ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಆಕ್ರೋಶಗೊಳಿಸುವಂತಹ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರ್ವಕ ಕೃತ್ಯಗಳು) ದಾಖಲು ಮಾಡಿದ್ದಾರೆ. ಈತನನ್ನು ಪೊಲೀಸರು ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಈ ಘಟನೆ ರಾಜಕೀಯ ತಿರುವು ತೆಗೆದುಕೊಂಡಿದ್ದು, ಕಾಂಗ್ರೆಸ್ ಮುಖಂಡರು ಬಂಧನದ ವಿರುದ್ಧ ತಿರುಗಿ ಬಿದ್ದಿದ್ದಾರೆ. ರಾಹುಲ್​ ಗಾಂಧಿ ಕೂಡ ಟ್ವೀಟ್​ ಮಾಡಿ, ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ದುರುದ್ದೇಶಪೂರ್ವಕವಾಗಿ ಇವರನ್ನು ಬಂಧಿಸಿದೆ. ಸತ್ಯವನ್ನು ದಮನ ಮಾಡುವ ಪ್ರಯತ್ನದಲ್ಲಿ ಬಿಜೆಪಿ ತೊಡಗಿದೆ, ಜುಬೈರ್​ ಅಮಾಯಕರು ಎಂದಿದ್ದಾರೆ.
https://twitter.com/vivekagnihotri/status/1541465315640582150
ಇದರಿಂದ ಆಕ್ರೋಶಗೊಂಡಿರುವ ಖ್ಯಾತ ಚಿತ್ರ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಅವರು ಟ್ವೀಟ್​ ಮಾಡಿ ಕಿಡಿ ಕಾರಿದ್ದಾರೆ. ಪಂಡಿತರ ಮೊಮ್ಮಗನಾಗಿರುವ ಮೂರ್ಖ ರಾಹುಲ್ ಗಾಂಧಿಯೇ, ಭಾರತದ ಶತ್ರುಗಳಿಗಾಗಿ ಕೆಲಸ ಮಾಡುವ ಹಿಂದೂ ವಿರೋಧಿ ಅರ್ಬನ್ ನಕ್ಸಲೈಟ್‌ಗಳ ಪರವಾಗಿ ನೀವು ನಿಂತಿರುವಿರಾ? ಭಾರತದಲ್ಲಿ ಕೋಮುಗಲಭೆಗೆ ಸಂಚು ರೂಪಿಸುತ್ತಿರುವವರು ಯಾರು? ಯಾರು ಸುಳ್ಳು ಹೇಳುತ್ತಿದ್ದಾರೆ? ಸುಳ್ಳು ಸುದ್ದಿಗಳನ್ನು ಬಿತ್ತರಿಸುತ್ತಿರುವವರು ಯಾರು? ಸತ್ಯವನ್ನು ದಮನ ಮಾಡುತ್ತಿರುವವರು ಯಾರು? ಖಿಲಾಫತ್ 2.0 ನ ಸ್ಲೀಪರ್ ಸೆಲ್ ಅನ್ನು ಯಾರು ನಡೆಸುತ್ತಾರೆ? ಎಂದು ಪ್ರಶ್ನಿಸುವ ಮೂಲಕ ರಾಹುಲ್​ ಗಾಂಧಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದೀಗ ವಿವೇಕ್​ ಅಗ್ನಿಹೋತ್ರಿ ಅವರ ಈ ಟ್ವೀಟ್​ ಕಿಡಿ ಹೊತ್ತಿಕೊಂಡಿದ್ದು, ಕಾಂಗ್ರೆಸ್​ ನಾಯಕರು ಹಾಗೂ ಕಾರ್ಯಕರ್ತರು ಇವರ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಸ್ನೇಹ ಸಂಬಂಧ ಲೈಂಗಿಕ ಸಂಪರ್ಕಕ್ಕೆ ಲೈಸೆನ್ಸ್​ ಕೊಟ್ಟಹಾಗಲ್ಲ ಎಂದ ಹೈಕೋರ್ಟ್​- ಜಾಮೀನು ನಕಾರ

ಇದ್ದ ಮೂವರೂ ಹೆಣ್ಣುಮಕ್ಕಳೆಂದು ಮತ್ತೆ ಗರ್ಭಧಾರಣೆ: ಒಟ್ಟಿಗೇ ಹುಟ್ಟಿದವು ನಾಲ್ಕು ಶಿಶುಗಳು!

ಕಾಲ್​​ ಮಾಡದಿದ್ರೆ ಆತ್ಮಹತ್ಯೆ ಮಾಡಿಕೊಳ್ತೇನೆಂದ ಗೆಳೆಯ: ಅವನು ಸತ್ತನೆಂದು ತಿಳಿದು ವಿಷ ಸೇವಿಸಿ ಪ್ರಾಣ ಬಿಟ್ಟ ಯುವತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − two =
Remember me
