ಮುಂಬೈ:80-90ರ ದಶಕಗಳಲ್ಲಿ ಇಡೀ ಚಿತ್ರರಂಗವನ್ನೇ ಆಳಿದ ಬಾಲಿವುಡ್​ ತಾರೆ ಶ್ರೀದೇವಿ ನಟನೆಗೆ ಮಾತ್ರವಲ್ಲದೇ, ನೃತ್ಯದಲ್ಲೂ ಸಾಕಷ್ಟು ಹೆಸರು ಮಾಡಿದವರು. ಇದೀಗ ಅದೇ ಹಾದಿಯನ್ನು ಅವರ ಪುತ್ರಿ ಜಾನ್ಹವಿ ಕಪೂರ್​ ತುಳಿಯುತ್ತಿದ್ದಾರೆ.
ಇದಾಗಲೇ ನಟನೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ಜಾಹ್ನವಿ ಇದೀಗ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ತಾವು ಬೆಲ್ಲಿ ಡಾನ್ಸ್​ ಮಾಡಿರುವ ವಿಡಿಯೋ ಪೋಸ್ಟ್​ ಮಾಡುವ ಮೂಲಕ ಅಭಿಮಾನಿಗಳಲ್ಲಿ ಹುಚ್ಚೆಬ್ಬಿಸಿದ್ದಾರೆ. ಬಾಲಿವುಡ್​ ನಟಿ ಕರೀನಾ ಕಪೂರ್ ಅಭಿನಯದ ಸಿನಿಮಾ ಅಶೋಕ ಚಿತ್ರದ ಸನ್​ ಸನನ್​ ಹಾಡಿಗೆ ಬೆಲ್ಲಿ ಡ್ಯಾನ್ಸ್ ಮಾಡಿದ್ದಾರೆ.


A post shared by Janhvi Kapoor (@janhvikapoor)

39 ಕೋಟಿಯ ಅಪಾರ್ಟ್‌ಮೆಂಟ್ ಖರೀದಿಸಿ ಈಚೆಗಷ್ಟೇ ಸುದ್ದಿಯಾಗಿದ್ದ 23ರ ಹರೆಯದ ಜಾಹ್ನವಿ, ಇದೀಗ ಬೆಲ್ಲಿ ಡಾನ್ಸ್​ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಬಿಳಿ ಬಣ್ಣದ ಪೈಜಾಮಾ ಹಾಗೂ ಕ್ರಾಪ್​ ಟಾಪ್​ ಧರಿಸಿರುವ ಈಕೆ, ಅದ್ಭುತವಾಗಿ ನೃತ್ಯ ಮಾಡಿದ್ದಾರೆ.ಹಾಡಿನ ಮೂಲ ವಿಡಿಯೋದಲ್ಲಿ ಕರೀನಾ ಕಪೂರ್ ಕಾಣಿಸಿಕೊಂಡಿದ್ದರು. ಈ ಗೀತೆಯನ್ನು ಅಲ್ಕಾ ಯಾಗ್ನಿಕ್ ಮತ್ತು ಹೇಮಾ ಸರ್ದೇಸಾಯಿ ಹಾಡಿದ್ದಾರೆ.
ಧಡಕ್​ ಸಿನಿಮಾ ಮೂಲಕ ಬಾಲಿವುಡ್​ಗೆ 2018ರಲ್ಲಿ ಪದಾರ್ಪಣೆ ಮಾಡಿದ್ದ ಜಾಹ್ನವಿ, ಗುಂಜನ್​ ಸಕ್ಸೇನಾ ಅವರ ‘ದ ಕಾರ್ಗಿಲ್​ ಗರ್ಲ್, ದೋಸ್ತಾನಾ 2, ರೂಹಿಅಫ್ಜಾ, ತಾಕತ್​ ಸೇರಿದಂತೆ ಹಲವಾರು ಸಿನಿಮಾಗಳ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ.
ನನ್ನಂತೆ ಹೊಳೆಯಬೇಕೆ? ಹಾಗಿದ್ದರೆ ಹೀಗೆ ಮಾಡಿ ಎಂದಳು ಈ ಸುಂದರಿ: ಓದಿ ‘ವ್ಯಾಕ್’​ ಅನ್ನಬೇಡಿ!

ಕೆಜಿಎಫ್ 2 ಟೀಸರ್​ ಬಿಡುಗಡೆ ಬೆನ್ನಲ್ಲೇ ಯಶ್​ಗೆ ಬಿಗ್​ ಶಾಕ್​- ನೋಟಿಸ್​ ನೀಡಿದ ಆರೋಗ್ಯ ಇಲಾಖೆ!

ಪ್ರೀತಿ ಹೆಸರಲ್ಲಿ ಲೂಟಿಮಾಡಿ ಈಗ ನನಗೆ ಬೇಕಾದಷ್ಟು ಜನ ಇದ್ದಾರೆ ಎನ್ನುತ್ತಿದ್ದಾಳೆ- ಬರೀ ಗಂಡಿಗೇಕೆ ಶಿಕ್ಷೆ?

ಅಮಿತಾಭ್​ ಮನೆ ಹತ್ತಿರ ಮನೆ ಖರೀದಿಸಿದ ಜಾಹ್ನವಿ … ಬೆಲೆ ಎಷ್ಟು ಗೊತ್ತಾ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × two =
Remember me
