ರೋಮ್‌:ಮದುವೆಯಾಗಿಲ್ಲ ಎಂದು ಎಷ್ಟೋ ಯುವಕ,ಯುವತಿಯರು ಖಿನ್ನತೆಗೆ ಜಾರುವುದಿದೆ, ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳೂ ನಡೆದಿವೆ. ಅದೇ ರೀತಿ ಮದುವೆಯಾದವರು ಯಾಕಾದರೂ ಮದುವೆಯಾದೆನೋ ಎಂದು ಆತ್ಮಹತ್ಯೆಗೆ ಶರಣಾಗಿದ್ದಾರೆ, ಸಂಗಾತಿಯ ಕೊಲೆ ಮಾಡಿದ್ದಾರೆ. ಸಹವಾಸವೇ ಬೇಡ ಎಂದು ವಿಚ್ಛೇದನವನ್ನೂ ಪಡೆದಿದ್ದಾರೆ.
ಇದಕ್ಕಿಂತ ಭಿನ್ನವಾದ ಘಟನೆಯೊಂದು ಇಟಲಿಯಲ್ಲಿ ನಡೆದಿದೆ. ಅಲ್ಲಿ ನಡೆದ ಸುದ್ದಿ ಜಗತ್ತಿನಾದ್ಯಂತ ವೈರಲ್‌ ಆಗಲು ಕಾರಣವೆಂದರೆ ಹೆಂಡತಿಯ ಹಿಂಸೆ ತಾಳದೇ ಗಂಡನೊಬ್ಬ ತನ್ನ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾನೆ. ಹಾಗಂತ ಪತ್ನಿಯ ವಿರುದ್ಧ ಕೇಸ್‌ ಹಾಕಿ ಆಕೆಯನ್ನು ತೊಂದರೆಗೆ ಸಿಲುಕಿರುವ ಉದ್ದೇಶ ಈ ಪತಿಯದ್ದು ಅಲ್ಲ, ಬದಲಿಗೆ ಖುದ್ದು ಜೈಲಿಗೆ ಹೋಗಿ ನೆಮ್ಮದಿ ಕಾಣಲು ಬಯಸಿದ್ದಾನೆ ಈ ಪತಿರಾಯ!ಪ್ಲೀಸ್‌ ನನ್ನನ್ನು ಅರೆಸ್ಟ್‌ ಮಾಡಿ. ನನ್ನ ಪತ್ನಿ ಇಟಲಿಯವಳು, ಅವಳ ಕಾಟವನ್ನು ನಾನು ತಾಳಲಾರೆ. ನಾನು ಅಲ್ಬೇನಿಯನ್‌ದವನು. ಯಾವ ಗಳಿಗೆಯಲ್ಲಿ ಈ ಇಟಲಿಯವಳ ಜತೆ ಮದುವೆಯಾಯಿತೋ ಗೊತ್ತಿಲ್ಲ. ಮದುವೆಯಾದಾಗಿನಿಂದಲೂ ಇವಳ ಹಿಂಸೆ ತಾಳಲು ಆಗುತ್ತಿಲ್ಲ. ದಿನವೂ ಅವಳಿಂದ ಹಿಂಸೆ ಪಡುವ ಬದಲು ಜೈಲಿನಲ್ಲಿ ನೆಮ್ಮದಿಯಿಂದ ಇರುತ್ತೇನೆ. ಆದ್ದರಿಂದ ನನ್ನನ್ನು ಜೈಲಿಗೆ ತಳ್ಳಿ ಎಂದು ಪೊಲೀಸರ ಮುಂದೆ ಅಂಗಲಾಚಿದ್ದಾನೆ.
ಹಾಗಿದ್ದರೆ ಆತ ಮನೆ ಬಿಟ್ಟು ಹೋಗಬಹುದಿತ್ತಲ್ಲವೇ? ಇಷ್ಟೊಂದು ಡ್ರಾಮಾ ಮಾಡುವ ಅಗತ್ಯವಿತ್ತೇ ಎಂದು ಪ್ರಶ್ನಿಸಬಹುದು. ಹಾಗೆ ಮಾಡಲು ಸಾಧ್ಯವಿಲ್ಲ. ಏಕೆಂದರೆ, ಈತನ ಹಿನ್ನೆಲೆ ಭಯಂಕರವಾಗಿದೆ. ಡ್ರಗ್ಸ್‌ ಕೇಸ್‌ನಲ್ಲಿ ಈತ ಪೊಲೀಸರಿಗೆ ಬೇಕಾಗಿರುವ ವ್ಯಕ್ತಿ. ಆತನನ್ನು ಪೊಲೀಸರು ಗೃಹಬಂಧನದಲ್ಲಿ ಇಟ್ಟಿದ್ದಾರೆ. ಆದ್ದರಿಂದ ಷರತ್ತಿನ ಅನ್ವಯ ಆತ ಮನೆ ಬಿಟ್ಟು ಎಲ್ಲಿಯೂ ಹೋಗುವಂತೆ ಇಲ್ಲ. ಇದೀಗ ಗೃಹಬಂಧನದಲ್ಲಿ ಪತ್ನಿಯ ಜತೆಗೆ ಇರಲು ಸಾಧ್ಯವಾಗಲೇ ಜೈಲಿನಲ್ಲಿಯೇ ಇರಿಸಿ ಎಂದು ಗೋಗರೆಯುತ್ತಿದ್ದಾನೆ.
ಮನೆಯಿಂದ ಹೊರಕ್ಕೆ ಬರಬಾರದು ಎನ್ನುವ ರೂಲ್ಸ್‌ ಮುರಿದಿದ್ದರಿಂದ ಕೊನೆಗೂ ಅವನ ಆಸೆ ಈಡೇರಿದ್ದು, ನಿಯಮ ಉಲ್ಲಂಘಿಸಿದ್ದಾಗಿ ಜೈಲಿನಲ್ಲಿ ಇರಿಸಿದ್ದಾರೆ! ಜೈಲಿನಲ್ಲಿ ಒಳ್ಳೆಯ ನಡತೆ ತೋರಿದರೆ ಪುನಃ ಗೃಹಬಂಧನದಲ್ಲಿ ಇರಿಸಲಾಗುವುದು ಈ ಕೇಸ್‌ನ ನಿಯಮ!
ಈತನ ಕೋರಿಕೆ ಬಗ್ಗೆ ಪೊಲೀಸರು ಜಾಲತಾಣದಲ್ಲಿ ಸುದ್ದಿ ಶೇರ್‌ ಮಾಡಿಕೊಂಡಿದ್ದು, ಅದೀಗ ಸಕತ್‌ ವೈರಲ್‌ ಆಗಿದೆ.
ಶಾರುಖ್‌ರಿಂದ ದೀಪಾವಳಿ ಸಂದೇಶ ಕೊಡಿಸಿದ ಕ್ಯಾಡ್‌ಬರೀಸ್‌ಗೆ ಗ್ರಹಚಾರ- ಶುರುವಾಯ್ತು ಬೈಕಾಟ್‌ ಅಭಿಯಾನ

ವಿಡಿಯೋಕ್ಕೆ ಸಹಿ ಹಾಕಿಸಿಕೊಂಡ್ರು, ಲೈಫ್‌ ಹಾಳು ಮಾಡಿದ್ರು: ಶಿಲ್ಪಾ ವಿರುದ್ಧ 50 ಕೋಟಿ ರೂ. ಪರಿಹಾರಕ್ಕೆ ನಟಿ ಶೆರ್ಲಿನ್‌ ಕೇಸ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × one =
Remember me
