ನವದೆಹಲಿ:ಉದ್ಯಮಿ ವಿಜಯ್​ ಮಲ್ಯ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇವರಿಗೆ ಸುಪ್ರೀಂಕೋರ್ಟ್​ ನಾಲ್ಕು ತಿಂಗಳ ಶಿಕ್ಷೆ ವಿಧಿಸಿದೆ, ಜತೆಗೆ ಎರಡು ಸಾವಿರ ರೂಪಾಯಿಗಳ ದಂಡ ವಿಧಿಸಿದೆ.
2017ರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ನಿಂದನೆ ಪ್ರಕರಣ ಇದಾಗಿದೆ. ಕೋರ್ಟ್​ ಆದೇಶಗಳನ್ನು ಉಲ್ಲಂಘಿಸಿ ತಮ್ಮ ಮಕ್ಕಳಿಗೆ 40 ಮಿಲಿಯನ್ ಡಾಲರ್ ಹಣ ವರ್ಗಾವಣೆ ಮಾಡಿದ ಆರೋಪ ಇವರ ಮೇಲೆ ಇತ್ತು. ಇದಕ್ಕೆ ಸಂಬಂಧಿಸಿದ ವಿಚಾರಣೆಗೆ ಅವರು ಖುದ್ದು ಹಾಜರಿ ಆಗಬೇಕಿತ್ತು. ಆದರೆ ಪದೇ ಪದೇ ತಪ್ಪಿಸಿಕೊಂಡ ಹಿನ್ನೆಲೆಯಲ್ಲಿ ಇದು ನ್ಯಾಯಾಂಗ ನಿಂದನೆ ಎಂದಿರುವ ಕೋರ್ಟ್​, ಶಿಕ್ಷೆ ವಿಧಿಸಿದೆ. ದಂಡವನ್ನು ನಾಲ್ಕು ವಾರಗಳಲ್ಲಿ ನೀಡುವಂತೆ ಹೇಳಿದೆ. ಸುಪ್ರೀಂಕೋರ್ಟ್​ನ ಕಾನೂನು ಸೇವಾ ಪ್ರಾಧಿಕಾರಕ್ಕೆ ಠೇವಣಿ ಇಡಬೇಕು ಎಂದು ಹೇಳಿದೆ.
ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿ 2017ರಲ್ಲಿ ದೇಶ ಬಿಟ್ಟು ಹೋಗಿದ್ದ ಉದ್ಯಮಿ ವಿಜಯ್ ಮಲ್ಯ ನಂತರ ತಮ್ಮ ಮಕ್ಕಳಿಗೆ 40 ಮಿಲಿಯನ್ ಡಾಲರ್ ವರ್ಗಾಯಿಸಿದ್ದರು. ಈ ಪ್ರಕರಣದ ವಿಚಾರಣೆಯನ್ನು ಕೋರ್ಟ್​ ನಡೆಸುತ್ತಿದೆ.
ಕೋರ್ಟ್​ ಆದೇಶದ ಹೊರತಾಗಿಯೂ ಹಾಜರಾಗದ ಅವರು, ತಮ್ಮ ನಡವಳಿಕೆ ಬಗ್ಗೆ ಪಶ್ಚಾತ್ತಾಪ ತೋರಿಸಲಿಲ್ಲ. ಶಿಕ್ಷೆಯ ವಿಚಾರಣೆಯ ಸಮಯದಲ್ಲಿ ಹಾಜರಾಗಲಿಲ್ಲ. ಕಾನೂನಿನ ಘನತೆ ಎತ್ತಿಹಿಡಿಯಲು ಅವರಿಗೆ ಶಿಕ್ಷೆ ವಿಧಿಸಬೇಕು’ ಎಂದು ಬ್ಯಾಂಕ್ ಒಕ್ಕೂಟದ ಪರ ವಕೀಲರು ವಾದ ಮಂಡನೆ ಮಾಡಿದ್ದರು. ಬ್ಯಾಂಕ್ ಒಕ್ಕೂಟದ ವಾದ ಪುರಸ್ಕರಿಸಿ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.
EPS vs OPS: ಕಲ್ಲು, ದೊಣ್ಣೆ ಹಿಡಿದುಕೊಂಡು ನಡೆದ ಮಾರಾಮಾರಿ ಅಂತ್ಯ: ಪಳನಿಸ್ವಾಮಿಗೆ ಒಲಿದ ಹುದ್ದೆ

VIDEO: 1,2,3..10, 20… ಇದೇನಪ್ಪಾ ಇದು, ಮುಗೀತಿಲ್ಲ ಲೆಕ್ಕ? ಪೊಲೀಸರ ಬೆಚ್ಚಿಬೀಳಿಸಿದ ಆಟೋ ಡ್ರೈವರ್​!

‘ಹಂಸನಂತೆ ಇದ್ದ ಹಂಸಲೇಖರನ್ನು ಕಂಸನಂತೆ ಮಾಡಿದ್ದೀರಿ, ಸಾಹಿತಿಗಳಿಗೆ ಬುದ್ಧಿ ಹೇಳಿ ಇಲ್ಲವೇ ಕಾಲನ ಉಪಚಾರಕ್ಕೆ ಸಿದ್ಧರಾಗಿ’

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:5 + 16 =
Remember me
