ಮಲೇಷಿಯಾ:ಭಾರತದಲ್ಲಿ ಧಾರ್ಮಿಕ ಸಾಮರಸ್ಯ ಹಾಳುಗೆಡಹುವ ಆರೋಪ ಇರುವ ಕಾರಣ, ಮಲೇಷಿಯಾಕ್ಕೆ ಹಾರಿರುವ, ವಿವಾದಿತ ಧರ್ಮಗುರು ಜಾಕಿರ್ ನಾಯ್ಕ್ ಇದೀಗ ಸೊಸೆ ಹುಡುಕಾಟದಲ್ಲಿದ್ದಾರೆ.ತನ್ನ ಮಗ ಫರೀಕ್ ಮದುವೆಗೆ ಫೇಸ್‌ಬುಕ್‌ನಲ್ಲಿ ಅವರು ಹುಡುಕಾಟ ನಡೆಸಿದ್ದಾರೆ. ತಮ್ಮ ಸೊಸೆಯಾಗುವವಳಿಗೆ ಕೆಲವೊಂದು ಷರತ್ತುಗಳನ್ನು ವಿಧಿಸಿರುವ ಅವರು, ಇಂಥ ಅರ್ಹತೆ ಇದ್ದರೆ ಸೊಸೆಯಾಗಲು ಪ್ರೊಫೈಲ್‌ ಕಳುಹಿಸಬಹುದು ಎಂದು ಹೇಳಿದ್ದಾರೆ.
ನಾನು ನನ್ನ ಮಗನಿಗಾಗಿ ‘ಧಾರ್ಮಿಕ ಮುಸ್ಲಿ ಯುವತಿ’ಯನ್ನು ಹುಡುಕುತ್ತಿದ್ದೇನೆ ಎಂದು ಕೇಳಿರುವ ಅವರು, ಅದರಲ್ಲಿ ಕೆಲವೊಂದು ಷರತ್ತು ವಿಧಿಸಿದ್ದಾರೆ. ಆದರೆ ತಮ್ಮ ಗಮನ ಫೋಟೋ ಮಾತ್ರ ಎಲ್ಲಿಯೂ ಅವರು ಹಂಚಿಕೊಂಡಿಲ್ಲ. ಬದಲಿಗೆ ತಮ್ಮ ಫೋಟೋ ಹಾಕಿಕೊಂಡಿದ್ದಾರೆ.
ಅವರು ಹೇಳಿರುವ ಷರತ್ತುಗಳು ಹೀಗಿವೆ:* ಒಳ್ಳೆಯ ಚರಿತ್ರೆ ಮತ್ತು ಧಾರ್ಮಿಕ ಹಿನ್ನೆಲೆ ಹೊಂದಿರಬೇಕು.
* ಯುವತಿ ಕುರಾನ್ ಮತ್ತು ಹದೀಸ್‌ನಲ್ಲಿ ಹೇಳಲಾದ ಮಾರ್ಗದಲ್ಲಿಯೇ ನಡೆಯಬೇಕು.
* ನನ್ನ ಸೊಸೆಯಾಗುವವಳು ಯಾವುದಾದರೂ ಒಂದು ಇಸ್ಲಾಮಿಕ್ ಸಂಘಟನೆ ಜತೆ ಸಂಪರ್ಕದಲ್ಲಿರಬೇಕು.
* ಹರಾಮ್ ಎಂದು ಹೇಳಲಾಗುವ ಎಲ್ಲ ಚಟುವಟಿಕೆಗಳಿಂದ ದೂರವಿರಬೇಕು.
* ಆಕೆ ಇಸ್ಲಾಂ ಶಿಕ್ಷಣ ಪ್ರಸಾರ ಮಾಡುವಂತಿರಬೇಕು.
* ವಿಲಾಸಿ ಜೀವನದಿಂದ ದೂರ ಉಳಿದು ಸರಳ ಬದುಕಿನ ಮೇಲೆ ವಿಶ್ವಾಸವನ್ನು ಹೊಂದಿರಬೇಕು.
* ಯುವತಿಗೆ ಇಂಗ್ಲಿಷ್ ಮಾತನಾಡಲು ಬರಬೇಕು ಮತ್ತು ಮಲೇಷಿಯಾದಲ್ಲಿಯೇ ವಾಸವಾಗಲು ಬದ್ಧವಾಗಿರಬೇಕು.
ಜಾಕಿರ್ ನಾಯ್ಕ್ ಫೇಸ್‍ಬುಕ್‌ನಲ್ಲಿ 22 ಮಿಲಿಯನ್ ಫಾಲೋವರ್ಸ್ ಹಾಗೂ ಯುಟ್ಯೂಬ್ ನಲ್ಲಿ 2 ಮಿಲಿಯನ್ ಸಬ್‍ಸ್ಕ್ರೈಬರ್ ಗಳನ್ನು ಹೊಂದಿದ್ದಾರೆ. ಅವರ ಈ ಪೋಸ್ಟ್‌ಗೆ ಹಲವಾರು ಕಮೆಂಟ್‌ಗಳು ಬಂದಿದ್ದು, ನಿಮಗೆ ಇಂಥ ಸೊಸೆ ಎಲ್ಲಿಯೂ ಸಿಗಲ್ಲ ಬಿಡಿ ಎಂದವರೇ ಹೆಚ್ಚು.
3 ಕೆ.ಜಿ ಚಿನ್ನದ ಬಿಸ್ಕೆಟ್‌ ಕೊಟ್ಟ, ಒಂದೂವರೆ ಕೋಟಿ ರೂ. ಪಡೆದ- ಎರಡು ತಿಂಗಳ ಬಳಿಕ ಎಚ್ಚರಗೊಂಡ ವ್ಯಾಪಾರಿ!

ಬೆಂಗಳೂರಲ್ಲಿ ನಡೆದ ಎರಡು ಕಟ್ಟಡ ದುರಂತಗಳಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು: ಸಮೀಕ್ಷೆ ಶುರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 12 =
Remember me
