ಮುಂಬೈ:ಬಹುಕೋಟಿ ವಂಚನೆ ಆರೋಪ ಎದುರಿಸುತ್ತಿರುವ ಸುಕೇಶ್ ಚಂದ್ರಶೇಖರ್‌ನಿಂದ ಲಕ್ಷ ಲಕ್ಷ ಬೆಲೆ ಬಾಳುವ ಅರೇಬಿಯನ್ ಕುದುರೆ, ವಜ್ರದ ಕಿವಿಯೋಲೆಗಳು, ಐಷಾರಾಮಿ ಕಾರುಗಳು, ಒಂದು ಜೋಡಿ ಲೂಯಿ ವಿಟಾನ್ ಶೂಸ್‌ ಸೇರಿದಂತೆ ಕೋಟಿಗಟ್ಟಲೆ ಹಣವನ್ನು ಪಡೆದುಕೊಂಡಿರುವ ಬಾಲಿವುಡ್‌ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಈಗ ಭಾರಿ ಪೇಚಿಗೆ ಸಿಲುಕಿದ್ದಾರೆ.
ಸುಕೇಶ್‌ ಚಂದ್ರಶೇಖರ್‌ನ ಬಂಧನವಾಗುತ್ತಿದ್ದಂತೆಯೇ ಆತ ಯಾರ್ಯಾರ ಜತೆ ಸಂಪರ್ಕದಲ್ಲಿದ್ದ ಎಂಬುದರ ಲಿಸ್ಟ್ ಮಾಡಿದಾಗ ಪೊಲೀಸರೇ ಶಾಕ್‌ ಆಗಿದ್ದರು. ಹಲವಾರು ಖ್ಯಾತ ನಟಿಯರು ಸೇರಿದಂತೆ ಸೆಲೆಬ್ರಿಟಿಗಳಿಗೆ ನೀರಿನಂತೆ ಹಣ ಸುರಿದು ಅವರನ್ನು ತನ್ನವರನ್ನಾಗಿ ಮಾಡಿಕೊಂಡಿದ್ದಾನೆ ಈ ಸುಕೇಶ್‌. ಆ ಪಟ್ಟಿಯಲ್ಲಿ ಶ್ರೀಲಂಕದ ಮೂಲಕ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಟಾಪ್‌ 1 ಸ್ಥಾನದಲ್ಲಿದ್ದು, ಸುಕೇಶ್‌ ಜತೆಗಿನ ಆಕೆಯ ಫೋಟೋ ಭಾರಿ ವೈರಲ್‌ ಆಗುತ್ತಿದೆ.

ಜಾಕ್ವಲಿನ್‌ಗೆ ಸುಕೇಶ್‌ ಕಿಸ್‌ ಕೊಟ್ಟಿರುವ ದೃಶ್ಯ ಸೇರಿದಂತೆ ಅವರು ಖಾಸಗಿಯಾಗಿರುವ ಹಲವಾರು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇದರಿಂದ ತುಂಬಾ ಬೇಸರಿಸಿಕೊಂಡಿರುವ ನಟಿ, ತನ್ನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಬೇಡಿ ಎಂದು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕೋರಿಕೊಂಡಿದ್ದಾರೆ.
‘ಈ ದೇಶ ಮತ್ತು ಜನರು ಯಾವಾಗಲೂ ನನಗೆ ಅಪಾರ ಪ್ರೀತಿ ಮತ್ತು ಗೌರವ ನೀಡಿದ್ದಾರೆ. ಇದರಲ್ಲಿ ಮಾಧ್ಯಮಗಳ ಸ್ನೇಹಿತರೂ ಇದ್ದಾರೆ. ಅವರಿಂದ ನಾನು ಬಹಳಷ್ಟು ಕಲಿತಿದ್ದೇನೆ. ನಾನೀಗ ಸಮಸ್ಯೆಯಲ್ಲಿ ಸಿಲುಕಿದ್ದೇನೆ ಎಂಬುದು ಎಲ್ಲರಿಗೂ ಗೊತ್ತು. ‘ನನ್ನ ಖಾಸಗಿತನ ಮತ್ತು ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಇರುವ ಫೋಟೋಗಳನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡಬೇಡಿ ಎಂದು ಕೇಳಿಕೊಳ್ಳುತ್ತಿದ್ದೇನೆ. ನ್ಯಾಯ ಮತ್ತು ಒಳ್ಳೆಯತನ ಯಾವಾಗಲೂ ಮೇಲುಗೈ ಸಾಧಿಸುತ್ತವೆ ಎಂದು ಆಶಿಸುತ್ತೇವೆ. ಧನ್ಯವಾದ’ ಎಂದು ಹೇಳಿಕೊಂಡಿದ್ದಾರೆ.
ಯಾರೀ ಸುಕೇಶ್‌? ಈ ಲಿಂಕ್‌ನಲ್ಲಿದೆ ಆತನ ಸಂಪೂರ್ಣ ಜಾತಕ…
https://www.vijayavani.net/s-sukesh-chandrashekhar-extorted-over-rs-200-crore/
ಉಸ್ಸಪ್ಪಾ ಈ ಪಾದಯಾತ್ರೆ ನನ್ನಿಂದ ಆಗಲ್ಲಪ್ಪಾ…. ಜೋಶ್‌ನಲ್ಲಿ ಹೋದ ಸಿದ್ದು ಸುಸ್ತಾಗಿ ವಾಪಸ್‌!

Sign in to your account
Please enter an answer in digits:five + ten =
Remember me
