ನವದೆಹಲಿ: ಹಬ್ಬಗಳಿಗೆ ತಮ್ಮ ಮನೆಯ ಸಿಬ್ಬಂದಿಗೆ ನಟಿಮಣಿಯರು ವಿಶೇಷ ಗಿಫ್ಟ್​ ಕೊಡುವ ಸಂಪ್ರದಾಯ ಮುಂದುವರೆದಿದೆ. ಇದಾಗಲೇ ನಟಿಯರಾದ ಅನುಷ್ಕಾ ಶೆಟ್ಟಿ, ಅಲಿಯಾ ಭಟ್ ಕಾರನ್ನು ಕೊಟ್ಟು ಸುದ್ದಿ ಮಾಡಿದ್ದರು. ಅದೇ ಹಾದಿಯಲ್ಲಿ ಸಾಗಿದ್ದಾಗ ಬಾಲಿವುಡ್​ ನಟಿ ಜಾಕ್ವೆಲಿನ್ ಫರ್ನಾಂಡಿಸ್.
ಅನುಷ್ಕಾ ಶೆಟ್ಟಿಯವರು 12 ಲಕ್ಷ ರೂಪಾಯಿ ಕಾರನ್ನು ತಮ್ಮ ಸಿಬ್ಬಂದಿಗೆ ಗಿಫ್ಟ್​ ಆಗಿ ಕೊಟ್ಟಿದ್ದರು. ಇದೀಗ ಜಾಕ್ವೆಲಿನ್​ ತಮ್ಮ ಮನೆಯ ಸಿಬ್ಬಂದಿಗೆ ದುಬಾರಿ ಕಾರು ಗಿಫ್ಟ್ ಮಾಡಿದ್ದಾರೆ. ತಮ್ಮ ಸಿಬ್ಬಂದಿಗೆ ಕಾರು ಕೀ ನೀಡುವ ಮೂಲಕ ದಸರಾ ಹಬ್ಬಕ್ಕೆ ಉಡುಗೊರೆ ಕೊಟ್ಟಿದ್ದು ಅದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇದನ್ನೂ ಓದಿ:ಒನ್​ವೇ ಲವ್​? ನಟಿಯ ಮೇಲೆ ನಿರ್ಮಾಪಕನಿಂದ ಹಲ್ಲೆ
ಟ್ರಾಫಿಕ್ ಪೊಲೀಸ್ ಯೂನಿಫಾರ್ಮ್​ನಲ್ಲಿ ಕಾಣಿಸಿಕೊಂಡಿರುವ ಜಾಕ್ವೆಲಿನ್​ ಊದಿನ ಕಡ್ಡಿ ಹಾಗೂ ಸ್ವೀಟ್ ಹಿಡಿದುಕೊಂಡು ನಿಂತಿರುವ ದೃಶ್ಯ ವಿಡಿಯೋದಲ್ಲಿ ಕಾಣಬಹುದು.
ಅಂದಹಾಗೆ ಜಾಕ್ವೆಲಿನ್ ತಮ್ಮ ಸಿಬ್ಬಂದಿಗೆ ಗಿಫ್ಟ್ ಕೊಡುತ್ತಿರುವುದು ವಿಶೇಷವೇನಲ್ಲ. ಏಕೆಂದರೆ ಈ ಹಿಂದೆಯೂ ಇವರು ತಮ್ಮ ಮೆಕಪ್‍ಮನ್ ಶಾನ್ ಮುತಾತಿಲ್‍ ಹುಟ್ಟುಹಬ್ಬಕ್ಕೆ ಬ್ರ್ಯಾಂಡ್ ನ್ಯೂ ಕಾರನ್ನು ಉಡುಗೊರೆಯಾಗಿ ನೀಡಿದ್ದರು.
ಆ ವಿಡಿಯೋವನ್ನು ಶಾನ್​ ಅವರು ಇದೀಗ ಶೇರ್​ ಮಾಡಿದ್ದಾರೆ. ಅದೇ ವೇಳೆ ಈಗ ಸಿಬ್ಬಂದಿಗೆ ಕಾರಿನ ಗಿಫ್ಟ್​ ನೀಡುತ್ತಾ ಎಲ್ಲರನ್ನೂ ಅದರ ಪೂಜೆಗೆ ಕರೆಯುತ್ತಿರುವ ವಿಡಿಯೋ ಕೂಡ ವೈರಲ್​ ಆಗಿದ್ದು, ಅನೇಕ ಮಂದಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಜಾಕ್ವೆಲಿನ್​ ಗಿಫ್ಟ್​ ನೀಡುತ್ತಿರುವ ವಿಡಿಯೋಗಾಗಿ ಈ ಕೆಳಗಿನ ಲಿಂಕ್​ ಮೇಲೆ ಕ್ಲಿಕ್ಕಿಸಿ..
https://www.instagram.com/p/CG0CiHmhzxb/?utm_source=ig_embed&utm_campaign=embed_video_watch_again
ಪುರುಷರಿಗೆ ಗುಡ್​ನ್ಯೂಸ್​: ಇನ್ಮುಂದೆ ಸಿಗಲಿದೆ ಚೈಲ್ಡ್​ ಕೇರ್​ ರಜೆ

ಕಾಲೇಜು ಯುವತಿ ಮೇಲೆ ಗುಂಡಿನ ದಾಳಿ- ಸಿಸಿಟಿವಿಯಲ್ಲಿ ದಾಖಲಾಯ್ತು ಭಯಾನಕ ದೃಶ್ಯ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:8 − seven =
Remember me
