ಮುಂಬೈ:ಹಾಸ್ಟೆಲ್​ಗೆ ನುಗ್ಗಿದ ಪೊಲೀಸರು ಬಾಲಕಿಯರ ಬಟ್ಟೆ ಬಿಚ್ಚಿಸಿ ಬಲವಂತದಿಂದ ನೃತ್ಯ ಮಾಡಿರುವ ಬೆಚ್ಚಿಬೀಳುವ ಘಟನೆ ಮಹಾರಾಷ್ಟ್ರದ ಜಲಗಾಂವ್​ನಲ್ಲಿ ನಡೆದಿದೆ.
ಇಲ್ಲಿನ ಬಾಲಕಿಯರ ವಸತಿಗೃಹಕ್ಕೆ ತೆರಳಿದ್ದ ಪೊಲೀಸರು ಇಂಥದ್ದೊಂದು ಕೃತ್ಯ ಎಸಗಿದ್ದು, ಅದರ ವಿಡಿಯೋ ಮಾಡಿದ್ದಾರೆ.ಜಲಗಾಂವ್​ನ ವಸತಿಗೃಹದಲ್ಲಿರುವ ಕೆಲವು ಹುಡುಗಿಯರ ತನಿಖೆಯ ನೆಪದಲ್ಲಿ ಹೊರಗಿನ ಜನರು ಮತ್ತು ಪೊಲೀಸರಿಗೆ ಹಾಸ್ಟೆಲ್ ಪ್ರವೇಶಿಸಲು ಅನುಮತಿ ನೀಡಲಾಗಿದೆ. ಹೀಗಾಗಿ ಹಾಸ್ಟೆಲ್​ಗೆ ಬಂದ ಪೊಲೀಸರು ಬಲವಂತವಾಗಿ ಕೆಲವು ಹುಡುಗಿಯರ ಬಟ್ಟೆ ಬಿಚ್ಚಿಸಿದ್ದಾರೆ ಮತ್ತು ನೃತ್ಯ ಮಾಡಲು ಒತ್ತಾಯಿಸಲಾಗಿದೆ ಎನ್ನಲಾಗಿದ್ದು, ಇದರ ವೀಡಿಯೊ ಕ್ಲಿಪ್ ಸಹ ಬಹಿರಂಗವಾಗಿದೆ.
ಇದು ಮಹಾರಾಷ್ಟ್ರ ಸರ್ಕಾರವನ್ನೇ ಅಲ್ಲಾಡಿಸುವ ಮಟ್ಟಿಗೆ ಬಂದಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಭಾರಿ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆಗೆ ಬೆದರಿದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ, ನಾಲ್ಕು ಸದಸ್ಯರ ಉನ್ನತ ಮಟ್ಟದ ಸಮಿತಿ ರಚಿಸಿದೆ. ಈ ಕುರಿತು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ತಿಳಿಸಿದ್ದಾರೆ.
ಈ ಘಟನೆ ಇಂದು ವಿಧಾನಸಭೆಯಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಯಿತು. ಆ ನಂತರ ಕೂಡಲೇ ಸಮಿತಿ ರಚನೆಯ ಕುರಿತು ಸಚಿವ ದೇಶಮುಖ್​ ಪ್ರಸ್ತಾಪ ಮಾಡಿದರು.
ಇದು ಅತ್ಯಂತ ದುರದೃಷ್ಟಕರ ಘಟನೆ. ಇದರ ಬಗ್ಗೆ ತನಿಖೆ ನಡೆಸಲು ನಾಲ್ಕು ಸದಸ್ಯರ ಉನ್ನತ ಮಟ್ಟದ ಅಧಿಕಾರಿಗಳ ಸಮಿತಿಯನ್ನು ರಚಿಸಲಾಗಿದೆ. ಎರಡು ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ವರದಿ ಬಂದ ನಂತರ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಪುಸ್ತಕದ ಹಿಂಭಾಗ ತೋರಿಸಿ ಎಂದ್ರೆ ತಮ್ಮದೇ ಹಿಂಭಾಗ ತೋರಿಸಿದ್ರಾ ರಾಹುಲ್? ಟ್ರೋಲ್​ ಪುಟದಲ್ಲಿ ಸಂಸದ

ಡಿವೋರ್ಸ್​ ನೀಡದೇ ಪತಿ ಇನ್ನೊಬ್ಬಳ ಜತೆ ಲೈಂಗಿಕ ಸಂಪರ್ಕ ಹೊಂದಿದ್ದಾರೆ- ಕಾನೂನಿನಡಿ ನಾನೇನು ಮಾಡಬಹುದು?

ಉನ್ನತ ಪದವಿ ಪಡೆದವರಿಗೆ ಭರ್ಜರಿ ಅವಕಾಶ: ಕೇಂದ್ರ ಸರ್ಕಾರದಿಂದ ವಿವಿಧ ಇಲಾಖೆಗಳಿಗೆ ಆಹ್ವಾನ

10 ಸೆಕೆಂಡ್​ ಈ ವಿಡಿಯೋ ಬೆಲೆ ₹48 ಕೋಟಿ! ಇದರಲ್ಲಿರೋದು ಮಲಗಿರುವ ಟ್ರಂಪ್- ನೀವೂ ನೋಡಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fourteen + nineteen =
Remember me
