ಲಾಹೋರ್​​:ಇತ್ತೀಚೆಗಷ್ಟೇ ಭಾಷಣವೊಂದರಲ್ಲಿ ಮಾತನಾಡಿದ್ದ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌, ನಮ್ಮ ದೇಶದ ಆರ್ಥಿಕತೆ ಭಾರತಕ್ಕಿಂತಲೂ ಉತ್ತಮವಾಗಿದೆ. ಭಾರತಕ್ಕಿಂತಲೂ ನಾವೇ ಮೇಲು ಎಂದು ಹೇಳಿದ್ದರು. ಹೀಗೆ ಹೇಳುವ ಮೂಲಕ ಭಾರತ ಮಾತ್ರವಲ್ಲ ಖುದ್ದು ಪಾಕಿಸ್ತಾನದಲ್ಲಿಯೇ ನಗೆಪಾಟಲಿಗೆ ಈಡಾಗಿದ್ದರು. ಆದರೆ ಕೆಲವು ಪಾಕಿಸ್ತಾನಿಗಳು ಮಾತ್ರವಲ್ಲದೇ ಕೆಲವು ಭಾರತೀಯರು ಕೂಡ ಇವರ ಮಾಹಿತಿ ಜೈಜೈ ಎಂದಿದ್ದರು.
ಆದರೆ ಇದೀಗ ಇಮ್ರಾನ್‌ ಖಾನ್‌ಗೆ ಭಾರಿ ಮುಖಭಂಗ ಆಗುವಂಥ ಹೇಳಿಕೆಯೊಂದನ್ನು ಜಮಾತ್​ ಎ ಇಸ್ಲಾಮಿ ನೀಡಿದೆ. ಇಮ್ರಾನ್‌ ಖಾನ್‌ ಅವರು, ‘’ಅಂತಾರಾಷ್ಟ್ರೀಯ ಭಿಕ್ಷುಕ’ ಎಂದು ಅದು ಜರಿದಿದ್ದು, ಈ ಪಟ್ಟಿಯಲ್ಲಿ ಅವರನ್ನು ಸೇರಿಸಿದೆ. ಇಮ್ರಾನ್‌ ಖಾನ್‌ ಪ್ರಧಾನಿ ಸ್ಥಾನ ಬಿಟ್ಟು ತೊಲಗಿದರೆ ಮಾತ್ರ ಪಾಕಿಸ್ತಾನ ಉದ್ಧಾರವಾಗಲು ಸಾಧ್ಯ, ಇಲ್ಲಿಯ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯ ಎಂದು ಜಮಾಯತ್​ ಮುಖ್ಯಸ್ಥ ಸಿರಾಜುಲ್ ಹಕ್ ಕಟುವಾಗಿ ಟೀಕಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಹಕ್‌, ‘ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ ತುರ್ತಾಗಿ ಒಂದು ಶತಕೋಟಿ ಡಾಲರ್ ಸಾಲವನ್ನು ನಮ್ಮ ಪ್ರಧಾನಿ ಪಡೆಯುತ್ತಿರುವುದನ್ನು ನೋಡಿದರೆ ನಿಜಕ್ಕೂ ನಾಚಿಗೆ ಆಗಬೇಕು. ಇವರು ಅಂತಾರಾಷ್ಟ್ರೀಯ ಭಿಕ್ಷುಕನೇ ಸರಿ. ಹಿಂದಿನ ಸರ್ಕಾರವೂ ಹೀಗೆಯೇ ಮಾಡಿತು. ಪಾಕಿಸ್ತಾನದ ಆರ್ಥಿಕತೆ ಪಾತಾಳಕ್ಕೆ ಕುಸಿಯಿತು. ಆನಂತರ ಬಂದ ಈ ಮಹಾನುಭಾವ ತಾನು ಆರ್ಥಿಕತೆಯ ಚಾಂಪಿಯನ್​ ಎಂದು ಕೊಚ್ಚಿಕೊಂಡರು. ಆದರೆ ಈತ ಭಿಕ್ಷುಕನ ಸ್ಥಿತಿ ಬಂದಿದೆ. ದೇಶದ ವ್ಯಾಪಾರ ಕೊರತೆ ತಾಳತಪ್ಪಿದೆ. ಹಣದುಬ್ಬರ ಉಬ್ಬುತ್ತಲೇ ಇದೆ ಎಂದು ಕಿಡಿ ಕಾರಿದ್ದಾರೆ.
ಕಾಂಗ್ರೆಸ್‌ ತ್ಯಜಿಸಿ ಬಿಜೆಪಿ ಸೇರಿ ಸಚಿವರಾದ್ರೂ ಸಪೋರ್ಟ್‌ ಮಾತ್ರ ‘ಕೈ’ಗೆ! ಪಕ್ಷದಿಂದ ಉಚ್ಚಾಟನೆ

ವಿಚ್ಛೇದನದಿಂದ ಭಾರಿ ಸುದ್ದಿಮಾಡಿದ್ದ ಆಮೀರ್‌ ದಂಪತಿ ಮತ್ತೆ ಒಂದಾದ್ರು! ಕಾರಣ ಕೇಳಿ ‘ವಿಚಿತ್ರ’ ಎಂದ ನೆಟ್ಟಿಗರು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − six =
Remember me
