ಬೆಂಗಳೂರು:ನಟ ಪುನೀತ್‌ ರಾಜ್‌ಕುಮಾರ್‌ ಅವರು ಈ ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತದಿಂದ ಮೃತಪಡಲು ಅವರು ಜಿಮ್‌ನಲ್ಲಿ ಸದಾ ಹೆಚ್ಚು ಕಳೆಯುತ್ತಿದುದು ಹಾಗೂ ಬಾಡಿಬಿಲ್ಡ್‌ಗಾಗಿ ಹೆಚ್ಚಿನ ರೀತಿಯಲ್ಲಿ ವರ್ಕ್‌ಔಟ್‌ ಮಾಡುತ್ತಿದ್ದುದೇ ಕಾರಣ ಎನ್ನುವ ಮಾತೂ ಇದೆ.
ಇದರ ನಡುವೆಯೇ ಬಹು ನಿರೀಕ್ಷಿತ ಜೇಮ್ಸ್‌ ಚಿತ್ರಕ್ಕಾಗಿ ಪುನೀತ್‌ ಸಾಕಷ್ಟು ತಯಾರಿ ನಡೆಸಿದ್ದರು. ಚೇತನ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಪುನೀತ್‌ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲು ಹೊರಟಿದ್ದರು. ಇದರ ಬಹುತೇಕ ಶೂಟಿಂಗ್‌ ಮುಗಿದಿದೆ. ಕಾಲಿವುಡ್‌ ನಟಿ ಪ್ರಿಯಾ ಆನಂದ್ ನಾಯಕಿಯಾಗಿ ನಟಿಸಲಿದ್ದರು. ಕೆಲವೊಂದು ಹಾಡುಗಳ ಶೂಟಿಂಗ್‌ ಮಾತ್ರ ಬಾಕಿ ಇತ್ತು. ಅದನ್ನು ಮಂಗಳೂರು ಮತ್ತು ವಿದೇಶಗಳಲ್ಲಿ ಶೂಟಿಂಗ್‌ ಮಾಡಲು ತಯಾರಿ ನಡೆಸಲಾಗಿತ್ತು.
ವಿಶೇಷ ಎಂದರೆ ಈ ಚಿತ್ರ ಪುನೀತ್‌ ರಾಜ್‌ಕುಮಾರ್‌ ಅವರ ಚಿತ್ರರಂಗ ಜೀವನದ ದಾಖಲೆ ಚಿತ್ರ ಎನ್ನಲಾಗಿದೆ. ಏಕೆಂದರೆ ಚಿತ್ರದ ಸೆಟಲೈಟ್ ಹಕ್ಕುಗಳು 15 ಕೋಟಿಗೆ ಮಾರಾಟವಾಗಿವೆ ಎನ್ನಲಾಗಿದ್ದು, ಇದು ಇದುವರೆಗೆ ಮಾರಾಟವಾದ ಪುನೀತ್ ಅವರ ಚಿತ್ರಗಳಲ್ಲೇ ಇದು ಅತ್ಯಧಿಕ ಮೊತ್ತ ಎಂದು ಹೇಳಲಾಗುತ್ತಿದೆ.
ಇದರಲ್ಲಿನ ಒಂದು ಹಾಡಿಗಾಗಿ ಪುನೀತ್‌ ಅವರು ಎಕ್ಸ್‌ಟ್ರಾ ವರ್ಕ್‌ಔಟ್‌ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ತಮ್ಮ ದೇಹವನ್ನು ಆ ಹಾಡಿಗೆ ಸೆಟ್‌ ಮಾಡುವ ನಿಟ್ಟಿನಲ್ಲಿ ಪ್ರತಿದಿನಕ್ಕಿಂತ ಹೆಚ್ಚಿನ ಸಮಯವನ್ನು ಜಿಮ್‌ನಲ್ಲಿ ಕಳೆಯುತ್ತಿದ್ದರು. ಇದರಿಂದಾಗಿ ಅವರಿಗೆ ಹೃದಯದ ಸಮಸ್ಯೆ ಉಂಟಾಗಿರುವ ಸಾಧ್ಯತೆಗಳು ಇವೆ ಎನ್ನಲಾಗುತ್ತಿದೆ.
ಈ ನಡುವೆಯೇ ‘ಜೇಮ್ಸ್‌’ ಚಿತ್ರದ ಪೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಇದರಲ್ಲಿ ಪುನೀತ್ ವಿದೇಶಿ ಹುಡುಗಿಯರ ಜತೆ ಇರುವುದನ್ನು ನೋಡಬಹುದಾಗಿದೆ.
ಅತಿಯಾದ ವರ್ಕ್‌ಔಟ್‌ ಪ್ರೀತಿ ಪುನೀತ್‌ ಪ್ರಾಣ ಕಸಿದುಕೊಂಡಿತಾ? ಹಿಂದೆಯೂ ನಡೆದಿತ್ತು ಇಂಥ ಘಟನೆ

ದೊಡ್ಮನೆ ಹುಡುಗನ ದೊಡ್ಡತನಕ್ಕೆ ಲೆಕ್ಕವೇ ಇಲ್ಲ: ಅಬ್ಬಾ! ಸದ್ದಿಲ್ಲದೇ ನಡೀತಿದ್ವು ಇಷ್ಟೊಂದು ಸಮಾಜಸೇವೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 12 =
Remember me
