ಜಮ್ಮು: ಕರೊನಾ ಭೀತಿಯ ನಡುವೆಯೂ ಉಗ್ರರ ಅಟ್ಟಹಾಸಕ್ಕೇನೂ ಕಡಿಮೆಯಾಗಿಲ್ಲ. ಗಡಿಭಾಗದಲ್ಲಿ ಸದಾ ಹಿಂಸಾತ್ಮಕ ಕೃತ್ಯಗಳನ್ನು ನಡೆಸುವಲ್ಲಿ ತಲ್ಲೀನರಾಗಿರುವ ಪಾಕಿಸ್ತಾನದ ಉಗ್ರರು ಇದೀಗ ಟುಜಾನ್ ಗ್ರಾಮದ ಸೇತುವೆಯನ್ನು ಸ್ಫೋಟಿಸಲು ಭಾರಿ ಸಂಚು ರೂಪಿಸಿದ್ದರು.
ಟುಜಾನ್ ಮತ್ತು ದಾಲ್ವಾನ್ ಪ್ರದೇಶಗಳನ್ನು ಸಂಪರ್ಕಿಸುವ ಈ ಸೇತುವೆಯನ್ನು ಸ್ಫೋಟಿಸುವ ಸಂಬಂಧ ಐಇಡಿಯನ್ನು (ಸುಧಾರಿತ ಸ್ಫೋಟಕ ಸಾಧನ) ಇಡಲಾಗಿತ್ತು. ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆ ಸಮೀಪದ ಟುಜಾನ್ ಗ್ರಾಮದಲ್ಲಿ ಈ ಸಂಛು ರೂಪಿಸಲಾಗಿತ್ತು. ಆದರೆ ಭದ್ರತಾ ಪಡೆ ಐಇಡಿಯನ್ನು ಪತ್ತೆ ಹಚ್ಚುವ ಮೂಲಕ ಭಾರೀ ಅನಾಹುತವನ್ನು ತಪ್ಪಿಸಿದೆ.
ಇದನ್ನೂ ಓದಿ:ಡಿಜೆಹಳ್ಳಿ ಗಲಭೆಯಲ್ಲಿ ಉಗ್ರರ ಕೈವಾಡ?
ಟುಜಾನ್ ಗ್ರಾಮದ ಸೇತುವೆಯನ್ನು ಸ್ಫೋಟಿಸಲು ಸಂಚು ಹೂಡಿ ಉಗ್ರರು ಐಇಡಿಯನ್ನು ಅಡಗಿಸಿಟ್ಟಿದ್ದರು. ಈ ಸೇತುವೆ ಟುಜಾನ್ ಮತ್ತು ದಾಲ್ವಾನ್ ಅನ್ನು ಸಂಪರ್ಕಿಸುತ್ತದೆ ಎಂದು ತಿಳಿಸಿದ್ದಾರೆ. ಭದ್ರತಾಪಡೆಯ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿಸಿದಂತಾಗಿದೆ ಎಂದಿದ್ದಾರೆ ಐಜಿಪಿ ಕಾಶ್ಮೀರ್ ವಿಜಯ್ ಕುಮಾರ್.
ಪುಲ್ವಾಮಾ ಜಿಲ್ಲೆಯ ಬಡ್ಗಾಮ್ ಅನ್ನು ಸಂಪರ್ಕಿಸುವ ಈ ರಸ್ತೆಯನ್ನು ಭದ್ರತಾ ಪಡೆಗಳು ಒಂದು ಪ್ರದೇಶದಿಂದ ಮತ್ತೊಂದು ಸ್ಥಳಕ್ಕೆ ತೆರಳಲು ಉಪಯೋಗಿಸುತ್ತಿದ್ದರು. ಹೀಗಾಗಿ ಇದನ್ನು ಸ್ಫೋಟಗೊಳಿಸಲು ಸಂಚು ರೂಪಿಸಲಾಗಿತ್ತು.
ಉಗ್ರರು ಸೇತುವೆ ಕೆಳಭಾಗದಲ್ಲಿ ಐಇಡಿಯನ್ನು ಅಡಗಿಸಿಟ್ಟು ಸ್ಫೋಟಿಸುವ ಸಂಚು ರೂಪಿಸಿದ್ದು, ಇದನ್ನು ಭದ್ರತಾಪಡೆ ವಿಫಲಗೊಳಿಸಿದೆ ಎಂದು ವರದಿ ತಿಳಿಸಿದೆ.
ವಿಮಾನವಲ್ಲ… ಹದ್ದುಗಳ ಮೈನವಿರೇಳಿಸುವ ಕಸರತ್ತು- ವಿಡಿಯೋ ನೋಡಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × one =
Remember me
