ನವದೆಹಲಿ:ಕಳೆದ ವರ್ಷ ಭಾರಿ ಕೋಲಾಹಲ ಸೃಷ್ಟಿಸಿದ್ದ ಶಾಸಕ ರಮೇಶ್‌ ಜಾರಕಿಹೊಳಿ ಅವರ ಸಿಡಿ ಕೇಸ್‌ಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಿಂದ ಮಹತ್ವದ ತೀರ್ಪು ಇಂದು ಹೊರಬಿದಿದೆ. ಕರ್ನಾಟಕ ಎಸ್​ಐಟಿ ವರದಿ ಸಲ್ಲಿಕೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಈ ವರದಿ ಕುರಿತಂತೆ ಭಾರಿ ಅನುಮಾನಗಳು ವ್ಯಕ್ತವಾದ ಬೆನ್ನಲ್ಲೇ ಕೋರ್ಟ್‌ ಈ ಆದೇಶ ಹೊರಡಿಸಿದ್ದು ರಮೇಶ್‌ ಜಾರಕಿಹೊಳಿ ಅವರನ್ನು ಇನ್ನಷ್ಟು ಸಂಕಷ್ಟದಲ್ಲಿ ಸಿಲುಕಿಸಿದೆ.
ರಮೇಶ್‌ ಜಾರಕಿಹೊಳಿ ವಿರುದ್ಧ ಸಿ.ಡಿ ಕೇಸ್‌ನಲ್ಲಿ ಕೇಳಿಬಂದಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಎಸ್‌ಐಟಿ ಅಧಿಕಾರಿಗಳು ವರದಿ ಸಲ್ಲಿಸಲು (ಬಿ. ರಿಪೋರ್ಟ್‌) ಮುಂದಾಗಿದ್ದರು. ಈ ವರದಿ ಸಲ್ಲಿಕೆಗೆ ಕರ್ನಾಟಕ ಹೈಕೋರ್ಟ್‌ ಅನುಮತಿ ನೀಡಿತ್ತು. ಇದನ್ನು ಪ್ರಶ್ನಿಸಿ ಸಿ.ಡಿಯಲ್ಲಿ ಕಾಣಿಸಿಕೊಂಡಿರುವ ಮಹಿಳೆ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು.
ಸಿಡಿ ಪ್ರಕರಣದ ಬಗ್ಗೆ ತನಿಖೆಗೆ ರಚಿಸಿದ್ದ ಎಸ್​ಐಟಿ ತಂಡ ಸರಿಯಿಲ್ಲ, ಇದು ಶಾಸಕರ ಪರವಾಗಿ ವರದಿ ನೀಡುವ ಸಾಧ್ಯತೆ ಇದೆ. ಆದ್ದರಿಂದ ತಂಡವು ವರದಿ ನೀಡುವ ಮೊದಲೇ ಅದನ್ನು ತಡೆಯಬೇಕು, ವರದಿ ನೀಡಿಕೆಗೆ ತಡೆಯಾಜ್ಞೆ ನೀಡಬೇಕು ಅವರು ಮನವಿ ಮಾಡಿಕೊಂಡಿದ್ದರು. ಇವರ ಮನವಿಯನ್ನು ಕೋರ್ಟ್‌ ಮಾನ್ಯ ಮಾಡಿದ್ದು, ವರದಿ ಸಲ್ಲಿಕೆಗೆ ತಡೆ ನೀಡಿದೆ.
ಸಿ.ಡಿ. ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ಪಾತ್ರ ಇಲ್ಲವೆಂದು ಸೆಷನ್ಸ್​ ಕೋರ್ಟ್​ಗೆ ವರದಿ ಸಲ್ಲಿಸಲು ಎಸ್​ಐಟಿ ಮುಂದಾಗಿದೆ. ಇದರಲ್ಲಿ ಭಾರಿ ವಂಚನೆ ನಡೆದಿದೆ. ‌ಸರ್ಕಾರ ಸ್ವಯಂಪ್ರೇರಿತವಾಗಿ ಎಸ್​ಐಟಿ ರಚನೆ ಮಾಡಿಲ್ಲ. ಎಸ್​ಐಟಿ ರಚನೆಗೆ ರಾಜಕೀಯ ಒತ್ತಡ ಹೇರಲಾಗಿದೆ. ಈ ವರದಿಯ ಮೇಲೆ ನಂಬಿಕೆಯಿಲ್ಲ ಎಂದು ಮಹಿಳೆ ಆರೋಪಿಸಿದ್ದರು.
ಎಸ್‌ಐಟಿ ರಚನೆ ಸರಿಯಿದೆಯೇ ಎಂದು ಖಾತರಿ ಪಡಿಸಿಕೊಳ್ಳುವಂತೆ ಕರ್ನಾಟಕ ಹೈಕೋರ್ಟ್​ಗೆ ಸುಪ್ರೀಂ ಕೋರ್ಟ್​ ಇದೇ ವೇಳೆ ಸೂಚನೆ ನೀಡಿದೆ.
VIDEO: ಸರ್‌… ಈಗ ಗಲಾಟೆ ಮಾಡ್ತಿರೋರೇ ಇನ್‌ಸ್ಟಾ, ರೀಲ್ಸ್‌ನಲ್ಲಿ ಹಿಜಾಬ್‌ ತೆಗೀತಾರೆ… ಆಗ ಹುಡುಗರು ತೊಂದ್ರೆ ಕೊಡಲ್ವಾ?

ಉರಿಯುವ ಬೆಂಕಿಗೆ ತುಪ್ಪ: ಕುಂಕುಮ ಇಟ್ಟುಕೊಂಡ ವಿದ್ಯಾರ್ಥಿಗೆ ಕಾಲೇಜಿನ ಒಳಗೆ ಬಿಡದ ಉಪನ್ಯಾಸಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + twenty =
Remember me
