ಬೆಂಗಳೂರು:2018ರ ಮಾರ್ಚ್​ 27ರಂದು ನಟಿ ಜಯಂತಿ ಅವರ ಕುಟುಂಬಕ್ಕೆ ಭಾರಿ ಆಘಾತದ ವಿಷಯ ಆಗಿತ್ತು. ಅದೇನೆಂದರೆ, ಜಯಂತಿಯವರು ಮೃತಪಟ್ಟಿರುವುದಾಗಿ ಎಲ್ಲೆಡೆ ಸುದ್ದಿ ವೈರಲ್​ ಆಗಿತ್ತು.ಜಾಲತಾಣಗಳಲ್ಲಿಯೂ ಈ ವಿಷಯ ಸುದ್ದಿಯಾಗಿತ್ತು. ಉಸಿರಾಟದ ಸಮಸ್ಯೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಚಿಕಿತ್ಸೆ ಮುಂದುವರೆದಾಗಲೇ ಈ ಸುದ್ದಿಯಾಗಿಹೋಗಿತ್ತು.ಟ್ವಿಟರ್​ ತುಂಬೆಲ್ಲಾ ಅಭಿಮಾನಿಗಳು ಸಂತಾಪ ಸೂಚಕವನ್ನು ಸಲ್ಲಿಸಲು ಶುರು ಮಾಡಿದ್ದರು. ಜಯಂತಿಯವರು ಚೆನ್ನಾಗಿದ್ದಾರೆ, ಅವರ ಪ್ರಾಣಕ್ಕೆ ಏನೂ ಕುತ್ತಾಗಲಿಲ್ಲ ಎಂದು ಅವರ ಕುಟುಂಬಸ್ಥರು ಜನರಿಗೆ ನಂಬಿಸಲು ಅದೆಷ್ಟು ಕಷ್ಟಪಡಬೇಕಾಯಿತು ಎಂದರೆ, ಅವರು ವಿಡಿಯೋ ಮೂಲಕ ನಿಜ ವಿಷಯ ತಿಳಿಸಿದರೂ ಅದನ್ನು ನಂಬುವ ಸ್ಥಿತಿಯಲ್ಲಿ ಅಭಿಮಾನಿಗಳು ಇರಲಿಲ್ಲ.ಜಯಂತಿ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಹೇಳಿರುವ ವಿಡಿಯೋಗಳು ನಂತರ ವೈರಲ್​ ಆದ ಬಳಿಕ ಅಭಿಮಾನಿಗಳಿಗೆ ಸಮಾಧಾನವಾಗಿತ್ತು. ನಟಿ ಜಯಂತಿ ಅವರ ಪುತ್ರ ಕೃಷ್ಣ ಕುಮಾರ್ ನಮ್ಮ ತಾಯಿ ಆಸ್ತಮಾದಿಂದ ಬಳಲುತ್ತಿದ್ದರು. ಅವರು ಪ್ರತಿದಿನ ಇನ್​ಹೇಲರ್​ ಬಳಸುತ್ತಿದ್ದರು. ಅವರ ಅನಾರೋಗ್ಯಕ್ಕೆ ಎಂದಿಗೂ ಆಸ್ಪತ್ರೆಗೆ ದಾಖಲಾಗಲಿಲ್ಲ. ಆದರೆ ಆರೋಗ್ಯವು ಹದಗೆಟ್ಟಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ. ಮುಂದಿನ 24 ಗಂಟೆ ಅವರನ್ನು ನಿಗಾದಲ್ಲಿ ಇರಿಸಲಾಗಿದೆ ಎಂದು ಹೇಳಿ ಎಲ್ಲಾ ಗಾಳಿಸುದ್ದಿಗೆ ತೆರೆ ಎಳೆದಿದ್ದರು.
ದುಂಡಗೆ, ದಪ್ಪಗಿದ್ದ ಕಮಲಾಗೆ ಸಹಪಾಠಿಗಳು ಕೊಟ್ಟ ಕೀಟಲೆ ಅಷ್ಟಿಷ್ಟಲ್ಲ! ಅದೇ ಬಾಲೆ ಜಯಂತಿ ಆದ ಇಂಟ್ರೆಸ್ಟಿಂಗ್​ ಸ್ಟೋರಿ ಇದು
ಇಲ್ಲಿವೆ ‘ಅಭಿನಯ ಶಾರದೆ’ಯ ಅಪರೂಪದ ಫೋಟೋಗಳು
ವಿಧಿವಶರಾದ ಹಿರಿಯ ನಟಿ ಜಯಂತಿ ಕುರಿತು ಭಾವುಕವಾಗಿ ಬರೆದುಕೊಂಡ ಮಾಜಿ ಸೊಸೆ ಅನುಪ್ರಭಾಕರ್!​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 13 =
Remember me
