ನವದೆಹಲಿ :ರಾಷ್ಟ್ರೀಯ ಅರ್ಹತಾ ಕಮ್ ಪ್ರವೇಶ ಪರೀಕ್ಷೆ (ನೀಟ್) ಹಾಗೂ ಜೆಇಇ ಮುಖ್ಯ ಪರೀಕ್ಷೆಗಳನ್ನು ಮುಂದೂಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆ.
ಎಂಜಿನಿಯರಿಂಗ್ ಪ್ರವೇಶ ಸೆಪ್ಟೆಂಬರ್ 1ರಿಂದ ಸೆಪ್ಟೆಂಬರ್ 6ರವರೆಗೆ ಹಾಗೂ ವೈದ್ಯಕೀಯ ಕೋರ್ಸ್‌ ಪ್ರವೇಶವನ್ನು ಸೆಪ್ಟೆಂಬರ್ 13ಕ್ಕೆ ನಿಗದಿಪಡಿಸಲಾಗಿದ್ದು, ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಇವು ನಿಗದಿಯಂತೆ ನಡೆಯಲಿವೆ.
ಕರೊನಾ ವೈರಸ್‌ ಭೀತಿಯ ನಡುವೆ ಈ ಪರೀಕ್ಷೆ ನಡೆಸುವುದು ಸರಿಯಲ್ಲ ಎಂದು ಕೋರಿ ದೇಶದ 11 ರಾಜ್ಯಗಳ 11 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು.
ಅವರ ಪರವಾಗಿ ವಾದಿಸುತ್ತಿದ್ದ ವಕೀಲ ಅಲಖ್ ಅಲೋಕ್ ಶ್ರೀವಾಸ್ತವ ಅವರನ್ನು ಉದ್ದೇಶಿಸಿ ನ್ಯಾಯಮೂರ್ತಿಗಳು ವಿದ್ಯಾರ್ಥಿಗಳ ವೃತ್ತಿಜೀವನವು ಅಪಾಯಕ್ಕೆ ಸಿಲುಕುವಂತಿಲ್ಲ ಎಂದಿದ್ದಾರೆ.
ಇದನ್ನೂ ಓದಿ:19, 21ಕ್ಕೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಇಲ್ಲ ಪ್ರವೇಶ
ಪರೀಕ್ಷೆಗಳು ನಡೆಯದಿದ್ದರೆ, ಅದು ದೇಶಕ್ಕೆ ನಷ್ಟವಾಗುವುದಿಲ್ಲವೇ? ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷವನ್ನು ಕಳೆದುಕೊಳ್ಳುತ್ತಾರೆ. ಕರೋನಾ ಸಮಯದಲ್ಲೂ ಜೀವನ ಮುಂದುವರೆಯಬೇಕು. ನಾವು ಕೇವಲ ಪರೀಕ್ಷೆಗಳನ್ನು ನಿಲ್ಲಿಸಿದರೆ ಮುಂದುವರೆಯುವುದು ಕಷ್ಟ ಎಂದಿದ್ದಾರೆ.
ಇದೇ ವೇಳೆ, ನ್ಯಾಯಾಲಯಗಳು ಮತ್ತೆ ತೆರೆಯಬೇಕೆಂದು ನೀವು ಒತ್ತಾಯಿಸುತ್ತಿಲ್ಲವೇ? ಮುನ್ನೆಚ್ಚರಿಕೆಗಳೊಂದಿಗೆ ಪರೀಕ್ಷೆಗಳನ್ನು ಏಕೆ ನಡೆಸಲು ಸಾಧ್ಯವಿಲ್ಲ ಎಂದೂ ನ್ಯಾಯಮೂರ್ತಿಅರುಣ್ ಮಿಶ್ರಾ ವಕೀಲರನ್ನು ಪ್ರಶ್ನಿಸಿದರು.
ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಪರೀಕ್ಷೆ ನಡೆಸಲಾಗುತ್ತಿದೆ ಎಂಬ ಬಗ್ಗೆ ಎನ್‌ಟಿಎ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದ್ದನ್ನು ಕೋರ್ಟ್‌ ಮಾನ್ಯ ಮಾಡಿದೆ.
ಹಿಂದು ದೇವರ ಬಗ್ಗೆ ಕೆಟ್ಟ ಪೋಸ್ಟ್ ಹಾಕಿದ್ರು, ಅವರಿಗೆ ತಿರುಗೇಟು ನೀಡುವಂತೆ ಕಮೆಂಟ್ ಮಾಡಿದ್ದಕ್ಕೆ ಈ ರಾದ್ಧಾಂತ ಎಂದ ನವೀನ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + five =
Remember me
