ಕಾರಥೋಡ್‌ (ಕೇರಳ):ವಜ್ರದ ಸೌಂದರ್ಯಕ್ಕೆ ಮನಸೋಲದವರೇ ಇಲ್ಲವೆನ್ನಬಹುದು. ಸಾಮಾನ್ಯರ ಪಾಲಿಗೆ ವಜ್ರ ಎನ್ನುವುದು ಗಗನಕುಸುಮವೇ. ಆದರೆ ಹಲವು ಸೆಲೆಬ್ರಿಟಿಗಳಿಗೆ ಇದು ಸಾಮಾನ್ಯ ಉಡುಗೊರೆಯ ವಸ್ತು. ಅದೇನೆ ಇರಲಿ… ಇಲ್ಲಿ ಹೂವಿನಂತೆ ಮಿರಿಮಿರಿ ಮಿಂಚುತ್ತ ಲಲನೆಯ ಬೆರಳನ್ನು ಅಲಂಕರಿಸಿರುವ ಈ ವಜ್ರದ ಉಂಗುರವನ್ನೊಮ್ಮೆ ನೋಡಿಬಿಡಿ.
ಅಣಬೆಯಂತೆಯೂ ಕಾಣುವ ಈ ಉಂಗುರ ಈಗ ಗಿನ್ನೆಸ್​ ದಾಖಲೆ ಪುಟ ಸೇರಿದೆ. ಇದಕ್ಕೆ ಕಾರಣ ಇದರಲ್ಲಿ ಬಳಸಿರುವ ವಜ್ರದ ಪ್ರಮಾಣ. ‘ಎಸ್​ಡಬ್ಲ್ಯುಎ ಡೈಮಂಡ್ಸ್’ ಕಂಪೆನಿ ಕಳೆದ ಮೇ ತಿಂಗಳಿನಲ್ಲಿ ಕೇರಳದ ಕಾರಥೋಡ್‌ನಲ್ಲಿ ಈ ಉಂಗುರ ತಯಾರಿಸಿದೆ. ಅತಿ ಹೆಚ್ಚು ವಜ್ರಗಳ ಹರಳುಗಳನ್ನು ಇದು ಹೊಂದಿರುವ ಕಾರಣ, ವಿಶ್ವ ದಾಖಲೆಯಾಗಿದೆ.
ಈ ಉಂಗುರವು ಪಿಂಕ್​ ಆಯ್​ಸ್ಟರ್​ ಮಶ್ರೂಮ್​ (pink oyster mushroom) ಹೊಂದಿದೆ. ಈ ಉಂಗುರಕ್ಕೆ ‘ಅಮಿ’ ಎಂದು ಹೆಸರಿಸಲಾಗಿದೆ. ಅಮರತ್ವಕ್ಕಾಗಿ ಸಂಸ್ಕೃತದಲ್ಲಿ ಬಳಸುವ ಪದ ಇದು ಎಂದಿದ್ದಾರೆ ಇದರ ತಯಾರಕರು.
41 ದಳಗಳ ಅಣಬೆ ಉಂಗುರ ಇದಾಗಿದೆ. ತ್ರಿಡಿ ಮುದ್ರಣದಲ್ಲಿ ತಯಾರು ಮಾಡಲಾಗಿದೆ. ದ್ರವರೂಪದ ಚಿನ್ನವನ್ನು ಅಚ್ಚಿನಲ್ಲಿ ಸುರಿದು, ತಂಪಾಗಿಸಿ ಅಣಬೆ ದಳಗಳ ಒಟ್ಟಾರೆ ಆಕಾರಕ್ಕೆ ಈ ಉಂಗುರವನ್ನು ತರಲಾಗಿದೆ. ನೈಸರ್ಗಿಕ ವಜ್ರಗಳನ್ನು ಈ ಉಂಗುರದಲ್ಲಿ ಬಳಸಲಾಗಿದೆ ಎಂದಿದ್ದಾರೆ ಅವರು.
ಒಟ್ಟು 24,679 ವಜ್ರಗಳ ಹರಳುಗಳನ್ನು ಈ ಉಂಗುರದಲ್ಲಿ ಇರಿಸಲಾಗಿದೆ. ಇದು 2020ರಲ್ಲಿ ಹರ್ಷಿತ್ ಬನ್ಸಾಲ್ ಅವರು ತಯಾರಿಸಿದ್ದ ವಜ್ರದ ಉಂಗುರದ ದಾಖಲೆಯನ್ನು ಮುರಿದು ಹಾಕಿದೆ. ಈ ಉಂಗುರ 340 ಗ್ರಾಂ ತೂಗುತ್ತದೆ. ಅಂದಹಾಗೆ ಈ ಉಂಗುರದ ಬೆಲೆ 75 ಲಕ್ಷ ರೂಪಾಯಿ.
ಕರೆಂಟ್​ ಬಿಲ್​ ನೋಡಿ ಶಾಕ್​! ಹೈವೋಲ್ಟೇಜ್ ವಿದ್ಯುತ್ ಟವರ್ ಏರಿ ಕುಳಿತ ವ್ಯಕ್ತಿ! ಮುಂದೇನಾಯ್ತು ನೋಡಿ

VIDEO: ಪ್ರವಾಹದ ಭೀತಿ ಇದ್ದರೂ ನದಿ ತಟದಲ್ಲಿ ಮಹಿಳೆಯರ ದೆವ್ವ ಬಿಡಿಸ್ತಿದ್ದಾರೆ! ರಾಯಚೂರಲ್ಲಿ ಹೀಗೆ ನಡೆದಿದೆ ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − two =
Remember me
