ಜಮ್ಶೆಡ್‌ಪುರ (ಜಾರ್ಖಂಡ್​):ಮಹಿಳಾ ಪೊಲೀಸ್ ಕಾನ್​ಸ್ಟೆಬಲ್​, 10 ವರ್ಷದ ಮಗಳು ಮತ್ತು ತಾಯಿಯ ಮೃತದೇಹ ನಿಗೂಢ ರೀತಿಯಲ್ಲಿ ಫ್ಲ್ಯಾಟ್​ನಲ್ಲಿ ಪತ್ತೆಯಾಗಿರುವ ಘಟನೆ ಜಾರ್ಖಂಡ್​ನ ಜಮ್ಶೆಡ್​ಪುರದಲ್ಲಿ ನಡೆದಿದೆ.
ಸವಿತಾ ರಾಣಿ ಹೆಂಬ್ರಾಮ್, ತಾಯಿ ಲಖಿಯಾ ಹೆಂಬ್ರಾಮ್ ಮತ್ತು ಸವಿತಾ ಅವರ ಮಗಳ ಮೃತದೇಹ ಪತ್ತೆಯಾಗಿದ್ದು, ಕೊಲೆಯಾಗಿರುವ ಶಂಕೆ ಉಂಟಾಗಿದೆ.
ಮಹಿಳಾ ಪೊಲೀಸ್ ಕಾನ್​ಸ್ಟೆಬಲ್​, 10 ವರ್ಷದ ಮಗಳು ಮತ್ತು ತಾಯಿಯ ಮೃತದೇಹಗಳು ಪೊಲೀಸ್​ ಕ್ವಾರ್ಟ್ರಸ್​ನಲ್ಲಿಯೇ ಪತ್ತೆಯಾಗಿದ್ದು ಪ್ರಕರಣ ಸಂಚಲನ ಉಂಟುಮಾಡಿದೆ. ಸುದ್ದಿ ತಿಳಿದ ತಕ್ಷಣ ಪೊಲೀಸ್​ ಸಿಬ್ಬಂದಿ ಸ್ಥಳದಲ್ಲಿ ಬೀಡುಬಿಟ್ಟಿದ್ದು, ವಿಧಿವಿಜ್ಞಾನ ತಂಡ ತನಿಖೆ ಕೈಗೊಂಡಿದೆ. ಮೂವರು ಕೊಲೆ ಆಗಿರಬಹುದೆಂದು ಪೊಲೀಸ್​ ಅಧಿಕಾರಿಗಳು ಶಂಕಿಸಿದ್ದಾರೆ.
ನಕ್ಸಲ್ ದಾಳಿಯಲ್ಲಿ ಪತಿ ಸಾವನ್ನಪ್ಪಿದ ನಂತರ ಅನುಕಂಪದ ಆಧಾರದ ಮೇಲೆ ಸವಿತಾ ಅವರಿಗೆ ಕೆಲಸ ಸಿಕ್ಕಿತ್ತು. ಅವರನ್ನು ಎಸ್‌ಎಸ್‌ಪಿ ಕಚೇರಿಯಲ್ಲಿ ನಿಯೋಜನೆ ಮಾಡಲಾಗಿತ್ತು. ತಾಯಿ ಮತ್ತು ಮಗಳೊಂದಿಗೆ ವಾಸಿಸುತ್ತಿದ್ದ ಸವಿತಾ ಮನೆಗೆ ಕಳೆದ ಎರಡು ದಿನಗಳಿಂದ ಹೊರಗಿನಿಂದ ಬೀಗ ಹಾಕಲಾಗಿತ್ತು. ಮನೆಗೆ ಬೀಗ ಹಾಕಿದ್ದರಿಂದ ಅಕ್ಕಪಕ್ಕದ ಜನರಿಗೆ ಅನುಮಾನ ಮೂಡಿದೆ. ಗುರುವಾರ ಮನೆಯಿಂದ ದುರ್ವಾಸನೆ ಬರುತ್ತಿದ್ದಾಗ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮೂವರ ಮೃತದೇಹಗಳು ಕೋಣೆಯಲ್ಲಿ ದೊರೆತಿವೆ. ದೇಹದ ಮೇಲೆ ದಾಳಿಯ ಗುರುತುಗಳಿವೆ. ಮೇಲ್ನೋಟಕ್ಕೆ ಇದೊಂದು ಕೊಲೆ ಪ್ರಕರಣ ಎಂದು ತೋರುತ್ತದೆ. ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.(ಏಜೆನ್ಸೀಸ್​)
ವಿಶ್ವದ ಅತಿ ಹಿರಿಯ ಪಾಂಡಾಗೆ ದಯಾಮರಣ: ಮೃಗಾಲಯದ ಸಿಬ್ಬಂದಿ ಕಣ್ಣೀರು- ಭಾವಪೂರ್ವಕ ಶ್ರದ್ಧಾಂಜಲಿ
ಗರ್ಭಪಾತದ ಕುರಿತು ಸುಪ್ರೀಂ ಮಹತ್ವದ ತೀರ್ಪು: ಕಾಯ್ದೆ ವ್ಯಾಪ್ತಿ ವಿಸ್ತರಣೆ- ಅವಿವಾಹಿತೆಗೆ ಅಸ್ತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − four =
Remember me
