ಜಾರ್ಖಂಡ್​:ಕೆಲವೊಮ್ಮೆ ನಿಜ ಜೀವನದಲ್ಲಿಯೂ ಸಿನಿಮೀಯ ಘಟನೆಗಳು ನಡೆದುಹೋಗುತ್ತವೆ. ಅದರಲ್ಲಿಯೂ ಪ್ರೀತಿ ಪ್ರೇಮದ ವಿಷಯದಲ್ಲಿ ತ್ಯಾಗದ ಬಗ್ಗೆ ಬಂದಾಗ ಸಿನಿಮಾದಲ್ಲಿ ನಡೆಯುವುದು ನಿಜಜೀವನದಲ್ಲಿ ನಡೆಯುವುದು ಕಷ್ಟವೇ ಎನ್ನಬಹುದು.
ಆದರೆ ಇಲ್ಲೊಂದು ಪ್ರಕರಣದಲ್ಲಿ ಮಾತ್ರ ಸಿನಿಮಾ ಕಥೆಯನ್ನೂ ಮೀರುವ ಪ್ರಕರಣ ನಡೆದಿದೆ. ಅದೇನೆಂದರೆ, ಜಾರ್ಖಂಡ್‍ನಲ್ಲಿ ವ್ಯಕ್ತಿಯೊಬ್ಬ ಪತ್ನಿಯ ಪ್ರೀತಿಗಾಗಿ ತನ್ನ ಪ್ರೀತಿಯನ್ನು ತ್ಯಾಗ ಮಾಡಿರುವ ಘಟನೆ!ಜಾರ್ಖಂಡಿನ ರಾಂಚಿಯಲ್ಲಿ ಅಪರೂಪದ ಘಟನೆ ನಡೆದಿದೆ. ಇಲ್ಲಿ ಯುವತಿ ಬೇರೊಬ್ಬ ಯುವಕನನನ್ನು ಪ್ರೀತಿಸುತ್ತಿದ್ದಳು. ಆದರೆ ಮನೆಯವರಿಗೆ ಇದು ಇಷ್ಟವಿರಲಿಲ್ಲ. ಅವರು ಬೇರೆ ಹುಡುಗನನ್ನು ನೋಡಿ ಮದುವೆ ಮಾಡಿದ್ದಾರೆ. ಆದರೆ ಮದುವೆಯಾದ 17 ದಿನಗಳ ಬಳಿಕ ಗಂಡನ ಮನೆಬಿಟ್ಟು ಹೋಗಿದ್ದಾಳೆ. ಆಗ ಗಂಡನ ಮನೆಯವರು ಆಕೆಯನ್ನು ಹುಡುಕಿದ್ದಾರೆ. ಹುಡುಗಿಯ ಮನೆಯ ಕಡೆಗೂ ವಿಷಯ ಮುಟ್ಟಿಸಿದ್ದಾರೆ. ನಂತರ ಹುಡುಗಿಯ ಮನೆಯವರಿಗೆ ಸಂದೇಹ ಬಂದಿದ್ದು, ಲವರ್​ ಮನೆಗೆ ಹೋಗಿದ್ದಾರೆ. ಯುವತಿ ಅಲ್ಲಿಯೇ ಇರುವುದು ಕಂಡಿದೆ.
ಜಪ್ಪಯ್ಯ ಎಂದರೂ ತಾನು ಪತಿಯ ಮನೆಗೆ ಬರುವುದಿಲ್ಲ ಎಂದು ಹೇಳಿದ್ದಾಳೆ. ಲವರ್​ ಜತೆಗೇ ಇರುವುದಾಗಿ ಹೇಳಿದ್ದಾಳೆ. ನಂತರ ಈ ವಿಷಯ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಆದರೆ ಇಷ್ಟು ಹೊತ್ತಿಗಾಗಲೇ ಪತಿ ಒಂದು ಗಟ್ಟಿ ಮನಸ್ಸು ಮಾಡಿಬಿಟ್ಟಿದ್ದಾನೆ.
ಆಕೆಯ ಪಾಲಕರಿಗೂ ಒಪ್ಪಿಸಿದ ಗಂಡ, ಬೇರೆಯವರಿಗೆ ಹೃದಯ ಕೊಟ್ಟಾಕೆ ತನ್ನ ಜತೆ ಸಂಸಾರ ಮಾಡಿದರೆ ಅದು ತನಗೂ ಒಳ್ಳೆಯದಲ್ಲ, ಆ ಜೋಡಿಗೂ ಒಳ್ಳೆಯದಲ್ಲ ಎಂದುಕೊಂಡ ಗಂಡ ಪತ್ನಿಯನ್ನು ಆಕೆಯ ಪ್ರಿಯಕರನಿಗೆ ಒಪ್ಪಿಸಿದ್ದಾನೆ. ನಂತರ ಪೊಲೀಸ್​ ಠಾಣೆಯಲ್ಲಿಯೇ ಇಬ್ಬರಿಂದಲೂ ಸಹಿ ಹಾಕಿಸಿಕೊಂಡು ಪತ್ನಿಯನ್ನು ಪ್ರಿಯಕರನಿಗೆ ಒಪ್ಪಿಸಿದ್ದಾರೆ.
ಬ್ಲೂ ಫಿಲ್ಮ್‌ ನೇರಪ್ರಸಾರಕ್ಕೆ ಪ್ಲ್ಯಾನ್‌- ಪೊಲೀಸರಿಗೆ 25 ಲಕ್ಷ ರೂ. ಲಂಚ? ಇ- ಮೇಲ್‌ನಿಂದ ರಹಸ್ಯ ಸ್ಫೋಟ!

ನವಜೋತ್​ ಸಿಂಗ್​ ಸಿಧು ಪದಗ್ರಹಣ ಸಮಾರಂಭಕ್ಕೆ ತೆರಳುತ್ತಿದ್ದ ಮೂವರು ಕಾಂಗ್ರೆಸ್​ ಕಾರ್ಯಕರ್ತರ ದುರ್ಮರಣ

ಕೊಲೆಯಾದ ಅಮ್ಮನ ಬಳಿ ಕುಳಿತು ಆಡುತ್ತಿದ್ದ ಮಕ್ಕಳು: ತಿನ್ನಲು ಬರ್ಗರ್‌ ಕೊಟ್ಟಾಗ ಹೇಳಿದರು ಭಯಾನಕ ಸತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − eleven =
Remember me
