ಜೈಪುರ:ಯುವತಿ ಪ್ರೀತಿಸಲಿದ್ದರೂ, ಆಕೆಯ ಬೆನ್ನ ಬಿದ್ದ ಭಗ್ನಪ್ರೇಮಿಯೊಬ್ಬನನ್ನು ಸಮಾಧಾನ ಪಡಿಸಲು ಪೊಲೀಸರು ಹರಸಾಹಸ ಪಟ್ಟ ಘಟನೆ ರಾಜಸ್ಥಾನದ ಧೋಲ್ಪುರದಲ್ಲಿ ನಡೆದಿದೆ.
ಆಕಾಶ್ ಗುರ್ಜಾರ್ ಎಂಬ ಯುವಕ ಇಂಥದ್ದೊಂದು ಕೃತ್ಯ ಎಸಗಿದ್ದು, ಈತನನ್ನು ಸಮಾಧಾನ ಪಡಿಸಲು ಪೊಲೀಸರು ಸುಸ್ತಾಗಿ ಹೋಗಿದ್ದಾರೆ.
ಆಕಾಶ್​ ಅದೇ ಗ್ರಾಮದ ಹುಡುಗಿಯನ್ನು ಪ್ರೀತಿಸುತ್ತಿದ್ದ. ಆದರೆ ಆಕೆ ಮಾತ್ರ ಇವನನ್ನು ಪ್ರೀತಿಸುತ್ತಿರಲಿಲ್ಲ. ಯುವತಿಯ ವಿವಾಹ ಬೇರೊಬ್ಬನ ಜತೆ ನಿಶ್ಚಯವಾಗಿದೆ. ಇದನ್ನು ತಿಳಿಯುತ್ತಿದ್ದಂತೆಯೇ ಆಕಾಶ್​, ಯುವತಿಯ ಮನೆಯ ಮುಂದೆ ಬಂದು ಹೈಡ್ರಾಮಾ ಮಾಡಿ ಎಲ್ಲರನ್ನೂ ಸುಸ್ತು ಮಾಡಿದ್ದಾನೆ.
ಮೊದಲು ಹುಡುಗಿಯನ್ನು ಅಪಹರಣ ಮಾಡಿ ಮನವೊಲಿಸಲು ಯತ್ನಿಸಿದ್ದ. ಆದರೆ ಅದು ಸಾಧ್ಯವಾಗಿರಲಿಲ್ಲ. ನಂತರ ಆಕೆಯ ಮನೆಯ ಎದುರು ಬಂದು ಗನ್​ ಹಿಡಿದುಕೊಂಡು, ಷರ್ಷ್​ ಬಿಚ್ಚಿಕೊಂಡು ಪ್ರೀತಿಸ್ತೇನೆ ಎಂದು ಹೇಳದಿದ್ದರೆ ಎಲ್ಲರನ್ನೂ ಶೂಟ್​ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಇದನ್ನು ನೋಡಿದ ಯುವತಿಯ ಮನೆಯವರು ಹೆದರಿ ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಯುವಕನನ್ನು ಸಮಾಧಾನ ಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಯುವತಿಯ ಅಪ್ಪ, ಮೊದಲು ಈತ ನನ್ನ ಮಗಳನ್ನು ಅಪಹರಣ ಮಾಡಿದ್ದ. ನಾವು ಆ ಪ್ರದೇಶದ ಮೇಲೆ ದಾಳಿ ನಡೆಸಿದೆವು. ಆತ ಕೂಡಲೇ ಪರಾರಿಯಾದ. ಮತ್ತೆ ಮನೆಯ ಬಳಿ ಪಿಸ್ತೂಲ್​ ಹಿಡಿದು ಬಂದು, ನಿಮ್ಮ ಮಗಳನ್ನು ನನ್ನ ಜತೆ ಕಳುಹಿಸದಿದ್ದರೆ ನಿಮ್ಮ ಮೇಲೆ ಗುಂಡು ಹಾರಿಸುತ್ತೇನೆ ಎಂದು ಬೆದರಿಕೆ ಹಾಕಿದ ಎಂದಿದ್ದಾರೆ.
ಯುವತಿಯ ತಂದೆಯ ಕರೆ ಸ್ವೀಕರಿಸಿದ ನಂತರ ಕಾರ್ಯಪ್ರವೃತ್ತರಾದ ಪೊಲೀಸರು ತಂಡ ರಚಿಸಿ ಸ್ಥಳಕ್ಕೆ ಹೋಗಿದ್ದಾರೆ. ಆಗ ಯುವಕ ಪೊಲೀಸರ ಮೇಲೆ ಗುಂಡು ಹಾರಿಸಲು ಯತ್ನಿಸಿದ್ದಾನೆ, ಮುಂದೆ ಬಂದರೆ ತಾನೂ ಸಾಯುವುದಾಗಿ ಬೆದರಿಕೆ ಹಾಕಿದ್ದಾನೆ. ನಂತರ ಅಂತೂ ಆತನನ್ನು ಸಮಾಧಾನ ಮಾಡಲು ಪೊಲೀಸರು ಯಶಸ್ವಿಯಾಗಿದ್ದಾರೆ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ಸ್​ ಮಾಡಿ

ಟೂಲ್​ಕಿಟ್​ ಹಗರಣ ಬಯಲಾಗ್ತಿದ್ದಂತೆ ಕೋರ್ಟ್​ಗೆ ಧಾವಿಸಿದ್ದ ದಿಶಾ- ನ್ಯಾಯಾಲಯ ಹೇಳಿದ್ದೇನು?

15ನೇ ವಯಸ್ಸಲ್ಲಿ ಸೀಟಿ ನುಂಗಿದ್ದಳು, 40ನೇ ವಯಸ್ಸಲ್ಲಿ ಹೊರ ಬಂತು- ವೈದ್ಯರೇ ಕಂಗಾಲು!

ಸಮೀಪಿಸುತ್ತಿದೆ ಈ ಕೊಲೆಪಾತಕಿಯ ಸಾವು… ನೇಣಿಗೆ ಕೊರಳೊಡ್ಡುವ ಮುನ್ನ ಇದೋ ಕೊನೆಯ ಪ್ರಯತ್ನ…

ಮಗನ ಈ ಗುಣ ನಿಖಾ ಮಾಡಿದ್ರೆ ಸರಿಹೋಗತ್ತೆ ಅಂದ್ಕೊಂಡೆ: ಆದ್ರೆ ಸೊಸೆಯನ್ನು ನೋಡೋಕಾಗ್ತಿಲ್ಲ… ಏನು ಮಾಡಲಿ?

ಮದುವೆಯಾಗಲು ಇಷ್ಟವಿಲ್ಲವೆಂದರೂ ಒತ್ತಾಯ ಮಾಡುತ್ತಿದ್ದೀರಿ… ನನಗೆ ಬೇರೆ ಇಲ್ಲ… ಗುಡ್​ಬೈ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 16 =
Remember me
